ಮೈಸೂರು, ಜು.16- ನಕಲಿ ಕೀ ಬಳಸಿ ದುಬಾರಿ ಬೆಲೆಯ ಬೈಕನ್ನು ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಸಿಸಿಬಿ ಪೆÇಲೀಸರು ಬಂಧಿಸಿದ್ದಾರೆ. ಕ್ಯಾತಮಾರನಹಳ್ಳಿಯ ಇಂದಿರಾಗಾಂಧಿ ರಸ್ತೆ ವಾಸಿ ರೆಹಮಾನ್ ಶರೀಫ್ (20) ಬಂಧಿತ ಆರೋಪಿ. ಬಂಧಿತನು ಟಿಂಕರಿಂಗ್ ಕೆಲಸ ಮಾಡುತ್ತಿದ್ದು, ಜತೆಗೆ ದುಬಾರಿ ಬೆಲೆಯ ರಾಯಲ್ ಎನ್ಫೀಲ್ಡ್ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ. ನಗರದಲ್ಲಿ ಇತ್ತೀಚೆಗೆ ಬೆಲೆ ಬಾಳುವ ರಾಯಲ್ ಎನ್ಫೀಲ್ಡ್ ವಾಹನಗಳು ಕಳ್ಳತನವಾಗುತ್ತಿರುವ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೆÇಲೀಸರು ಕಾರ್ಯಾಚರಣೆ ನಡೆಸುತ್ತಿದ್ದರು.
ಎನ್ಫೀಲ್ಡ್ ಬೈಕ್ನಲ್ಲಿ ತೆರಳುತ್ತಿದ್ದ ಈತನನ್ನು ಗಮನಿಸಿ ಅನುಮಾನಗೊಂಡ ಪೆÇಲೀಸರು ಹಿಡಿದು ಬೈಕ್ನ ದಾಖಲಾತಿ ಕೇಳಿದ್ದಾರೆ. ಆದರೆ, ಆತ ಯಾವುದೇ ದಾಖಲೆ ನೀಡಿಲ್ಲ. ಅನುಮಾನಗೊಂಡ ಪೆÇಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಕಲಿ ಕೀ ಬಳಸಿ ದುಬಾರಿ ಬೈಕ್ಗಳನ್ನು ಕಳ್ಳತನ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ.