ಹುಬ್ಬಳ್ಳಿ- ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿಲ್ಲ ಎಂಬುದಾದರೆ, ರಚನೆಯಾದ 50 ತಾಲೂಕಿಗೆ 5 ಕೋಟಿ ರೂ.ಮೀಸಲಿಡಲಿ ಎಂದು ಉ.ಕ. ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದ್ದು, ಶ್ವೇತಪತ್ರ ಹೊರಡಿಸಲಾಗುವುದು ಎಂದು ಹೇಳಿಕೆ ನೀಡಿದ್ದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಟಾಂಗ್ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಶೆಟ್ಟರ್, ಉತ್ತರ ಕರ್ನಾಟಕಕ್ಕೆ ಈವರೆಗೂ ಬಿಡುಗಡೆಯಾದ ಅನುದಾನದ ಬಗ್ಗೆ ನಾಳೆಯೇ ಶ್ವೇತಪತ್ರವನ್ನ ಹೊರಡಿಸಲಿ. ಶ್ವೇತಪತ್ರ ಹೊರಡಿಸಿದ್ದೇ ಆದಲ್ಲಿ ಎಲ್ಲವೂ ಹೊರಬೀಳಲಿದೆ. ರಾಜ್ಯದಲ್ಲಿ ರಚನೆಯಾಗಿರುವ ೫೦ ತಾಲೂಕುಗಳಿಗೆ ಶೀಘ್ರವೇ ೫ ಕೋಟಿ ಮೀಸಲಿಡಲಿ. ಇನ್ನೂ ಮಹದಾಯಿ ಬಗ್ಗೆ ಮಾತನಾಡುವವರು ಭೂಮಿಪೂಜೆ ಮಾಡಿದಾಗ ಯಾಕೆ ಆಗಮಿಸಲಿಲ್ಲ. ಹಾಸನ ಮಂಡ್ಯ ಮೈಸೂರು ಭಾಗಕ್ಕೆ ಮಾತ್ರ ಬಜೆಟ್ ಮಂಡನೆಗೆ ಹಣ ತೆಗೆದುಕೊಂಡು ಹೋದಂತಾಗಿದೆ ಎಂದ ಅವರು, ಉತ್ತರ ಕರ್ನಾಟಕದ ಬಗ್ಗೆ ಸಿಎಂ ಕುಮಾರ ಸ್ವಾಮಿ ಅವರಿಗೆ ಕಾಳಜಿ ಇದ್ರೆ ಕಳಸಾ ಬಂಡೂರಿ ವಿಚಾರವಾಗಿ ಏಕೆ ಮೌನ ಮುರಿಯುತ್ತಿಲ್ಲ ಎಂದು ಪ್ರಶ್ನಿಸಿದ್ರು.