ಹಿಂದೂ-ಮುಸ್ಲಿಂ ಬಾಂಧವ್ಯದಿಂದ ಭಾರತ ನಂಬರ್ 1 ಆಗುವುದೇ: ಪ್ರಧಾನಿ ಮೋದಿಗೆ ಕೇಜ್ರಿವಾಲ್ ಟಾಂಗ್

ಹೊಸದಿಲ್ಲಿ: ಹಿಂದೂ-ಮುಸ್ಲಿಂ ಬಾಂಧವ್ಯದಿಂದ ಮಾತ್ರವೇ ಭಾರತ ನಂಬರ್ 1 ಆಗುವುದೇ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ನಿನ್ನೆ ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಅಜಂಘಡ್ ನಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದರು. ಈ ವೇಳೆ ಪ್ರಧಾನಿ ಮೋದಿ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ್ದರು. ಕಾಂಗ್ರೆಸ್ ಪಕ್ಷ ಕೇವಲ ಮುಸ್ಲಿಮರಿಗಾಗಿ ಮಾತ್ರ ಕೆಲಸ ಮಾಡುವ ಪಕ್ಷವಾಗಿದೆ ಎಂದು ಟೀಕಿಸಿದ್ದರು.
ಪ್ರಧಾನಿ ಮೋದಿ ಟೀಕೆಗೆ ದೆಹಲಿ ಸಿಎಂ ಅರವಿಂಜ್ ಕೇಜ್ರಿವಾಲ್ ತಿರುಗೇಟು ನೀಡಿದ್ದು, ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಾಲ್ಕು ವರ್ಷಗಳ ಬಳಿಕವೂ ಪ್ರಧಾನಿ ಮೋದಿ ಹಿಂದೂ-ಮುಸ್ಲಿಂ ಸಮಸ್ಯೆಗಳ ಕುರಿತು ಮಾತನಾಡುತ್ತಿದ್ದಾರೆ ಎಂದರೆ ಅವರ ಸಾಧನೆ ಏನು? ಕಳೆದ ನಾಲ್ಕು ವರ್ಷಗಳಲ್ಲಿ ಅವರ ಸರ್ಕಾರ ಏನು ಮಾಡುತ್ತಿತ್ತು ಎಂದು ಟೀಕಿಸಿದ್ದಾರೆ.
ಇಂದೋರ್ ನಲ್ಲಿ ನಡೆದ ಪಕ್ಷದ ಸಭೆಯಲ್ಲಿ ಮಾತನಾಡಿದ ಕೇಜ್ರಿವಾಲ್, ಪ್ರಧಾನಿ ಮೋದಿ ಅವರ ಮಾತು ಕೇಳಿದರೆ ಅವರ ಸರ್ಕಾರ ಇನ್ನೂ ಯಾವ ಕೆಲಸವನ್ನೂ ಮಾಡಿಲ್ಲ ಎಂದೆನಿಸುತ್ತಿದೆ. ತ್ರಿವಳಿ ತಲಾಖ್ ಬಗ್ಗೆ ತಮ್ಮ ಸಾಧನೆಯ ಬಗ್ಗೆ ಮಾತನಾಡುವ ಮೋದಿ, ತಮ್ಮದೇ ಪಕ್ಷ ಪ್ರತಿಪಕ್ಷ ಸ್ಥಾನದಲ್ಲಿದ್ದಾಗ ತ್ರಿವಳಿ ತಲ್ಲಾಖ್ ಗೆ ಬೆಂಬಲ ನೀಡಬಹುದಿತ್ತು, ಅಂದು ಬೆಂಬಲ ನೀಡದೇ ತಮ್ಮ ರಾಜಕೀಯ ಲಾಭಕ್ಕಾಗಿ ಅದನ್ನು ಬಿಜೆಪಿ ಬಳಸಿಕೊಂಡಿತು.
ಹಿಂದೂ ಮುಸ್ಲಿಂ ಭಾಂಧವ್ಯದಿಂದ ಮಾತ್ರವೇ ನಮ್ಮ ದೇಶ ನಂಬರ್ ಒನ್ ಆಗುತ್ತದೆ. ಅಮೆರಿ, ಜಪಾನ್, ಫ್ರಾನ್ಸ್, ಇಂಗ್ಲೆಂಡ್ ನಂತಹ ರಾಷ್ಚ್ರಗಳು ನ್ಯಾನೋ ತಂತ್ರಜ್ಞಾನದಂತಹ ದೊಡ್ಡ ಆವಿಷ್ಕರಣೆಯಲ್ಲ ತೊಡಗಿದ್ದರೆ ನಾವು ಮಾತ್ರ ಇನ್ನೂ ಹಿಂದೂ-ಮುಸ್ಲಿಂ ಸಮಸ್ಯೆಗ ಬಗ್ಗೆ ಚರ್ಚಿಸುತ್ತಿದ್ದೇವೆ. ಶಿಕ್ಷಣ ಮಾತ್ರವೇ ಭಾರತವನ್ನು ನಂಬರ್ ಒನ್ ಸ್ಥಾನಕ್ಕೇರಿಸಬಲ್ಲದು. ಕಳೆದ 70 ವರ್ಷದಿಂದ ಈ ವರೆಗೂ ಭಾರತವನ್ನು ನಂಬರ್ ಸ್ಥಾನಕ್ಕೇರಿಸುವ ಮಟ್ಟಿನಲ್ಲಿ ಯಾವುದೇ ಸರ್ಕಾರಗಳೂ ಕಾರ್ಯ ನಿರ್ವಹಿಸಿಲ್ಲ. ಇಡೀ ಪ್ರಪಂಚದಲ್ಲೇ ಭಾರತೀಯರ ಅತ್ಯಂತ ಬುದ್ಧಿವಂತರು ಎಂಬುದು ಸಾಬೀತಾಗಿದೆ. ಆದರೆ ನಾವು ಮಾತ್ರ ಆ ಬುದ್ದಿವಂತಿಕೆಯನ್ನು ಸದ್ಭಳಕೆ ಮಾಡಿಕೊಳ್ಳದೇ ನಮ್ಮ ಬುದ್ದಿವಂತಿಕೆಯನ್ನು ಬೇರೆ ದೇಶಗಳಿಗೆ ಅಡಮಾನ ಇಟ್ಟಿದ್ದೇವೆ. ಭಾರತದ ರಾಜಕೀಯ ವ್ಯವಸ್ಥೆ ತನ್ನ ವೈಯುಕ್ತಿಕ ಹಿತಾಸಕ್ತಿಗಾಗಿ ದೇಶದ ಜನರನ್ನು ಉದ್ದೇಶಪೂರ್ವಕವಾಗಿ ಅವಿದ್ಯಾವಂತರನ್ನಾಗಿಸುತ್ತಿದೆ ಎಂದು ಕೇಜ್ರಿವಾಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ