ಹುಬ್ಬಳ್ಳಿ: ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸುವ ಕುರಿತು ಪ್ರಸ್ತುತ ಮೈತ್ರಿ ಸರ್ಕಾರ ಮಾಡುತ್ತಿರುವ ತಾರತಮ್ಯವನ್ನು ಖಂಡಿಸಿ ಎಐಡಿಎಸ್ಓ, ಎಐಡಿವಾಯ್ಓ, ಎಐಎಂಎಸ್ಎಸ್ ಹಾಗೂ ಆಲ್ ಇಂಡಿಯಾ ಮಹಿಳಾ ಸಂಸ್ಕೃತಿಕ ಸಂಘಟನೆ ವತಿಯಿಂದ ಇದೇ ಜು. 21ರಂದು ಅಖಿಲ ಕರ್ನಾಟಕ ಸ್ವಯಂಪ್ರೇರಿತ ಶಾಲಾ ಕಾಲೇಜು ಬಂದ್ ಹಮ್ಮಿಕೊಳ್ಳಲಾಗಿದೆ ಎಂದು ಎಐಡಿವೈಓ ಸಂಘಟನೆ ರಾಜ್ಯ ಉಪಾಧ್ಯಕ್ಷರಾದ ಲಕ್ಷ್ಮಣ ಜಡಗಣ್ಣವರ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸತತ ನಾಲ್ಕು ವರ್ಷಗಳಿಂದ ಬರಗಾಲ, ಬೆಲೆ ಏರಿಕೆ ನೋಟ ರದ್ದತಿಯಿಂದಾಗಿ ಗ್ರಾಮೀಣ ಹಾಗೂ ಬಡ ಜನತೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ.ಅಲ್ಲದೇ ಸಾವಿರಾರೂ ರೂಪಾಯಿ ಹಣ ಕೊಟ್ಟು ವಿದ್ಯಾರ್ಥಿಗಳಿಗೆ ಬಸ್ ಪಾಸ್ ಕೊಡಿಸಲು ಪಾಲಕರಿಗೆ ಕಷ್ಟವಾಗುತ್ತಿದೆ. ಹಿಂದಿನ ಸರ್ಕಾರ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ ಘೋಷಣೆ ಮಾಡಿರುವುದನ್ನು ಪ್ರಸ್ತುತ ಮೈತ್ರಿ ಸರ್ಕಾರ ಕಡೆಗಣಿಸಿರುವುದು ಸರಿಯಲ್ಲ. ಮತ್ತೊಂದೆಡೆ ಉಚಿತ ಬಸ್ ಪಾಸ್ ವಿತರಣೆ ಕುರಿತು ಸಂಭಂದಿಸಿದ ಅಧಿಕಾರಿಗಳು ಆಶ್ವಾಸನೆ ನೀಡುತ್ತಿದ್ದಾರೆ. ರೈತಪರ ಸರ್ಕಾರ ಎಂದು ಹೇಳುವ ಸರ್ಕಾರ ರೈತ ಮಕ್ಕಳಿಗೆ ಅನ್ಯಾಯ ಮಾಡುತ್ತಿದೆ. ಉಚಿತ ಬಸ್ ಪಾಸ್ ಜಾರಿಗೊಳಿಸಲು ಸಾರಿಗೆ ಇಲಾಖೆ ಹಾಗೂ ರಾಜ್ಯ ಸರ್ಕಾರವು ಆರ್ಥಿಕ ಹೊರೆಯಾಗುತ್ತದೆ ಎಂದು ಸುಳ್ಳು ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಈ ಹಿನ್ನೆಲೆಯಲ್ಲಿ ಅಖಿಲ ಕರ್ನಾಟಕ ಶಾಲಾ ಕಾಲೇಜು ಬಂದಗೆ ಕರೇ ನೀಡಲಾಗಿದೆ ಶೀಘ್ರವೇ ರಾಜ್ಯ ಸರ್ಕಾರ ಸೂಕ್ತ ಕ್ರಮ ಜಾರಿ ಮಾಡದೇ ಇದ್ದಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಬದಲ್ಲಿ ರಮೇಶ ಹೊಸಮನಿ, ಮಹಾಂತೇಶ ಬಿಳ್ಳೂರ, ಮಧುಲತಾ ಗೌಡರ್, ರಂಜಿತಾ, ಭವಾನಿಶಂಕರ ಸೇರಿದಂತೆ ಇತರರು ಇದ್ದರು.