ರಸ್ತೆ ಗುಂಡಿಗೆ ಜನರ ಬಲಿ

 

ಬೆಂಗಳೂರು, ಜು.15- ದೇಶದಲ್ಲಿ ಉಗ್ರರ ದಾಳಿಗೆ ಬಲಿಯಾಗುವವರಿಗಿಂತ ಐದುಪಟ್ಟು ಹೆಚ್ಚಾಗಿ ರಸ್ತೆ ಗುಂಡಿಗೆ ಬಲಿಯಾಗುತ್ತಿದ್ದಾರೆ. 2017ರಲ್ಲಿ ದಿನಕ್ಕೆ ಸರಾಸರಿ 10 ಮಂದಿ ರಸ್ತೆ ಗುಂಡಿಗಳಿಂದ ಪ್ರಾಣ ಕಳೆದುಕೊಂಡಿರುವುದು ವರದಿಯಾಗಿದೆ.
ರ್ವಾಕವಾಗಿ 3597 ಮಂದಿ ರಸ್ತೆ ಗುಂಡಿಗಳಿಗೆ ಬಲಿಯಾಗಿದ್ದಾರೆ. 2016ಕ್ಕೆ ಹೋಲಿಸಿದರೆ 2017ರಲ್ಲಿ ರಸ್ತೆ ಗುಂಡಿಗೆ ಬಲಿಯಾದವರ ಸಂಖ್ಯೆ ಬರೋಬ್ಬರಿ ಶೇ.50ರಷ್ಟು ಹೆಚ್ಚಳವಾಗಿದೆ.
ರಸ್ತೆ ಗುಂಡಿಗೆ ಬಲಿಯಾದವರ ಸಂಖ್ಯೆಯಲ್ಲಿ ದ್ವಿಗುಣಗೊಂಡ ಸ್ಥಾನದಲ್ಲಿ ಮಹಾರಾಷ್ಟ್ರ ಮೊಲ ಸ್ಥಾನದಲ್ಲಿದ್ದು, ಸುಮಾರು 726 ಮಂದಿ ರಸ್ತೆ ಗುಂಡಿಗಳಿಗೆ ಆಹುತಿಯಾಗಿದ್ದಾರೆ. ನಮ್ಮ ರಾಜ್ಯದಲ್ಲಿ 2016ರಲ್ಲಿ ರಸ್ತೆ ಗುಂಡಿಗಳಿಗೆ 37 ಮಂದಿ ಬಲಿಯಾದರೆ, 2017ರಲ್ಲಿ 47 ಮಂದಿ ಬಲಿಯಾಗಿದ್ದಾರೆ.
ಈ ರೀತಿ ರಸ್ತೆ ಗುಂಡಿಗಳಿಗೆ ಬಲಿಯಾದವರ ಸಂಖ್ಯೆಯನ್ನು ದೇಶದಲ್ಲಿ ನಡೆದ ಉಗ್ರ ಮತ್ತು ನಕ್ಸಲ್ ದಾಳಿಗೆ ಹೋಲಿಸುವುದಾದರೆ 2017ರಲ್ಲಿ ಉಗ್ರರು ಮತ್ತು ನಕ್ಸಲ್ ದಾಳಿಗೆ ಬಲಿಯಾದ ನಾಗರಿಕರ ಸಂಖ್ಯೆ 803. ಇದು ರಸ್ತೆ ಗುಂಡಿಗೆ ಬಲಿಯಾದವರಿಗಿಂತ ಐದು ಪಟ್ಟು ಕಡಿಮೆ.
ಉಗ್ರರ ಭಯೋತ್ಪಾದನೆಗಿಂತ ರಸ್ತೆಗುಂಡಿಗಳೇ ಹೆಚ್ಚು ಉಗ್ರವಾಗಿವೆ. ರಸ್ತೆ ನಿರ್ಮಾಣ ಮಾಡುತ್ತಿರುವ ಪ್ರಾಧಿಕಾರಗಳು, ಮುನ್ಸಿಪಲ್ ಸ”ುತಿಗಳು ಹಾಗೂ ಸರ್ಕಾರದಲ್ಲಿ ನಡೆಯುತ್ತಿರುವ ಭಾರೀ ಭ್ರಷ್ಟಾಚಾರ ಇದಕ್ಕೆ ಕಾರಣವಾಗಿದೆ.
ರಸ್ತೆ ಹಾಗೂ ಜನರ ಸುರಕ್ಷತೆ ಬಗ್ಗೆ ಸರ್ಕಾರ ಚಿಂತಿಸುತ್ತಿಲ್ಲ. ರಸ್ತೆ ಗುಂಡಿಗಳು ಮರಣಗುಂಡಿಗಳಾಗಿ ಪರಿವರ್ತನೆಯಾಗುತ್ತಿದ್ದು, ದ್ವಿಚಕ್ರ ವಾಹನ ಸವಾರರಿಗೆ ಕಂಠಕ ಪ್ರಾಯವಾಗಿವೆ.
ರಾಜ್ಯ ಸರ್ಕಾರಗಳು ಕೇಂದ್ರಕ್ಕೆ ಸಲ್ಲಿಸಿರುವ ವರದಿ ಪ್ರಕಾರ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ 987 ಮಂದಿ ರಸ್ತೆ ಗುಂಡಿಗಳಿಂದ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಗುಜರಾತ್ ಮತ್ತು ಹರಿಯಾಣ ರಾಜ್ಯಗಳಲ್ಲಿ ಇಂತಹ ಪ್ರಕರಣಗಳು ಕಡಿಮೆ ಕಂಡು ಬಂದಿವೆ.
2016ರಲ್ಲಿ ರಸ್ತೆ ಕಾಮಗಾರಿ ವೇಳೆ ದೇಶಾದ್ಯಂತ ಒಟ್ಟು 3878 ಮಂದಿ ಬಲಿಯಾಗಿದ್ದು, 2017ರಲ್ಲಿ 4250 ಮಂದಿ ರಸ್ತೆ ಗುಂಡಿಯಲ್ಲಿ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ