ಬೆಂಗಳೂರು, ಜು.15- ಸಂ”ಧಾನದ ಪರಿಚ್ಚೇದ 117ರ ತಿದ್ದುಪಡಿಯನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕರಿಸಿದರೆ ಬಡ್ತಿ “ುೀಸಲಾತಿ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ ಎಂದು ಹೈಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಅಭಿಪ್ರಾಯಪಟ್ಟರು.
ಗಾಂಧಿಭವನದಲ್ಲಿಂದು ದಲಿತ ಹಕ್ಕುಗಳ ಸ”ುತಿ ಮತ್ತು ರಾಜ್ಯ ಸರ್ಕಾರಿ ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸ”ುತಿ ಜಂಟಿಯಾಗಿ ಆಯೋಜಿಸಿದ್ದ ದಲಿತರ “ರುದ್ಧ ಸುಪ್ರೀಂಕೋರ್ಟ್ ತೀರ್ಪುಗಳು, ದಲಿತರ ಮೇಲಿನ ದೌರ್ಜನ್ಯಗಳು ಮತ್ತು ಭೂ”ುಯ ಪ್ರಶ್ನೆಗಳು ಕುರಿತ “ಚಾರಸಂಕಿರಣದಲ್ಲಿ ಮಾತನಾಡಿದ ಅವರು, ದಲಿತರಿಗೆ ಉದ್ಯೋಗ ಪ್ರವೇಶದಲ್ಲಿ “ುೀಸಲಾತಿ, ಬಡ್ತಿಯಲ್ಲಿ “ುೀಸಲಾತಿ ಹಾಗೂ ಸೌಲಭ್ಯದಲ್ಲಿ “ುೀಸಲಾತಿಯನ್ನು ಕಾತ್ರಿಪಡಿಸುವ 117ನೇ ತಿದ್ದುಪಡಿಯನ್ನು ರೂಪಿಸಿ ರಾಜ್ಯಸಭೆಯಲ್ಲಿ ಮಂಡಿಸಿ ಅಂಗೀಕಾರ ಪಡೆಯಲಾುತು. ಆದರೆ, ಅದು ಲೋಕಸಭೆಯಲ್ಲಿ ಮಂಡನೆಯಾಗದೇ ಇದುದ್ದರಿಂದ ಅನೂರ್ಜಿತಗೊಂಡಿದೆ. ಅದು ಈಗ ಅಂಗೀಕಾರ ಪಡೆದು ಜಾರಿಗೆ ಬಂದರೆ ಸುಪ್ರೀಂಕೋರ್ಟ್‍ನ ಹಲವಾರು ತೀರ್ಪುಗಳು ಅನೂರ್ಜಿತಗೊಳ್ಳುತ್ತವೆ. ಬಡ್ತಿ “ುೀಡಲಾತಿಯಂತಹ ಗೊಂದಲಗಳು ಬಗೆಹರಿಯುತ್ತವೆ ಎಂದರು.
ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಸ್ಥಾನಮಾನಗಳಿಲ್ಲದ ವರ್ಗಗಳು ಗುಲಾಮಗಿರಿಯಲ್ಲೇ ಬದುಕಬೇಕಾಗುತ್ತದೆ. ಈ ದೇಶಕ್ಕೆ ಶ್ರಮಶಕ್ತಿಯ ಕೊಡುಗೆ ನೀಡಿದ ತಳ ಸಮುದಾಯಗಳು ಉತ್ಪಾಸನೆ ಮತ್ತು ಹಂಚಿಕೆಯಲ್ಲಿ ಪಾಲು ಪಡೆಯಲು ಸಾಧ್ಯವಾಗಿಲ್ಲ. ಜಾತಿ ವ್ಯವಸ್ಥೆಯನ್ನು ಯಥಾವತ್ತಾಗಿ ಕಾಯ್ದುಕೊಂಡು ಬರಲಾಗುತ್ತಿದೆ. ಸಾಮಾಜಿಕ ನ್ಯಾಯ ಎಂಬುದು ಭಿಕ್ಷೆಯಂತಾಗಿದೆ ಎಂದು ತಿಳಿಸಿದರು.
ಇಂದಿರಾ ಸಹಾನಿ ಮತ್ತು ಎಂ.ನಾಗರಾಜ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪುಗಳಿಗೆ ವ್ಯತಿರಿಕ್ತವಾಗಿ ಇತ್ತೀಚೆಗೆ ಬಡ್ತಿ “ುೀಸಲಾತಿಯ ತೀರ್ಪು ಬಂದಿದೆ. ಇದನ್ನು ಸರಿಪಡಿಸಬೇಕಾದರೆ ಸಂ”ಧಾನ ತಿದ್ದುಪಡಿಯಾಗಲೇಬೇಕು. ಹಾಗಾಗಿ ಎಲ್ಲಾ ಸಂಸದರು ಈ ನಿಟ್ಟಿನಲ್ಲಿ ಪ್ರಯತ್ನ ಪಡಬೇಕು ಎಂದು ತಾವು ಬರೆದಿರುವ ಪತ್ರವನ್ನು ಸಂಘಟಕರಿಗೆ ಹಸ್ತಾಂತರಿಸಿ ಸಂಸದರಿಗೆ ರವಾನಿಸುವಂತೆ ಸಲಹೆ ನೀಡಿದರು.
ಇದಕ್ಕೂ ಮೊದಲು ಮಾತನಾಡಿದ ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ಅವರು, “ುೀಸಲಾತಿಯ ಬಗ್ಗೆ ಸಾಕಷ್ಟು ಜನರಲ್ಲಿ ಅಸಹನೆಗಳಿವೆ. “ುೀಸಲಾತಿ ಎಷ್ಟರಮಟ್ಟಿಗೆ ಶ್ರ”ುಸಿದೆ, ಅದರಿಂದ ಆಗಿರುವ ಪರಿಣಾಮಗಳೇನು ಎಂಬುದನ್ನು ಈವರೆಗೂ ಯಾವ ಸರ್ಕಾರಗಳು ಅಧ್ಯಯನ ನಡೆಸಿಲ್ಲ. ಖಾಸಗಿ ಸಂಸ್ಥೆಗಳು ನಡೆಸಿದ ಅಧ್ಯಯನ ಪ್ರಕಾರ “ುೀಸಲಾತಿ ಶೋತ ವರ್ಗಗಳಿಗೆ ತಲುಪಿಲ್ಲ. ಅದರಿಂದ ಅವರ ಅಭಿವೃದ್ಧಿಯಾಗಿಲ್ಲ ಎಂಬ ಮಾ”ತಿ ಇದೆ ಎಂದರು.
“ುೀಸಲಾತಿ ತಲುಪಿಸಬೇಕಾದವರೇ ವ್ಯವಸ್ಥಿತವಾದ ಹುನ್ನಾರ ನಡೆಸಿ ವಂಚನೆ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಬಡ್ತಿ “ುೀಸಲಾತಿ “ಷಯದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ತಪ್ಪಾಗಿದೆ. ಅದಕ್ಕೆ ಮೂಲ ಕಾರಣ ನ್ಯಾಯಾಂಗ ವ್ಯವಸ್ಥೆಯಲ್ಲಿ ಮನುವಾದಿ ಮಸ್ಥಿತಿ ಕೆಲಸ ಮಾಡುತ್ತಿರುವುದು. ದಲಿತರು ನ್ಯಾಯಾಂಗ ವ್ಯವಸ್ಥೆಗೆ ಹೆಚ್ಚು ಪ್ರವೇಶ ಪಡೆಯಬೇಕು ಎಂದು ಅವರು ಸಲಹೆ ನೀಡಿದರು.
ಬಡ್ತಿ “ುೀಸಲಾತಿಯನ್ನು ರದ್ದುಗೊಳಿಸಿರುವ ನ್ಯಾಯಾಧೀಶರು ತಮ್ಮ ತೀರ್ಪಿಗೆ ತಕ್ಕ ಸ್ಪಷ್ಟನೆ ನೀಡಬೇಕು. ಇಲ್ಲದೇ ಹೋದರೆ ಜಾತಿವಾದಿ ಮನಸ್ಥಿತಿುಂದ ತೀರ್ಪು ನೀಡಿದ್ದಾರೆ ಎಂದು ನಂಬಬೇಕಾಗುತ್ತದೆ ಎಂದು ಹೇಳಿದರು.
ಸಂಸತ್‍ನಲ್ಲಿ ನಡೆಯುತ್ತಿರುವ ಚರ್ಚೆಗಳು ಅನಗತ್ಯವಾದ “ಷಯಗಳನ್ನು ಆಧರಿಸಿವೆ. ಯಾವ ಆಹಾರ ತಿನ್ನಬೇಕು, ಯಾವ ದೇವರನ್ನು ಪೂಜಿಸಬೇಕು ಎಂಬ ಚರ್ಚೆಗಳೇ ಹೆಚ್ಚಾಗಿವೆ. 30 ಗಂಟೆಯ ಸಂಸತ್ ಅಧಿವೇಶನದಲ್ಲಿ ಚರ್ಚೆಯಾದರೆ ಅದರಲ್ಲಿ 22 ಗಂಟೆ ರಾಮಮಂದಿರ ನಿರ್ಮಾಣ ಮಾಡಬೇಕೇ, ಬೇಡವೇ ಎಂಬ ಕುರಿತು ಚರ್ಚೆ ನಡೆದಿದೆ. ಊಟ”ಲ್ಲದೆ ಸಾಯುತ್ತಿರುವವ ಬಗ್ಗೆ ಮಾತನಾಡದೆ ಯಾವ ಆಹಾರ ತಿನ್ನಬೇಕು ಎಂಬುದನ್ನೇ ಸಂಸತ್‍ನಲ್ಲಿ ಚರ್ಚಿಸುತ್ತಿರುವುದು “ಪರ್ಯಾಸ.
ಸಾಮಾಜಿಕ ವಲಯದಲ್ಲೂ ಕೂಡ “ಶ್ವದ ಶ್ರೀಮಂತರ ಪಟ್ಟಿಯಲ್ಲಿ ಎಷ್ಟು ಜನ ಭಾರತೀಯರು ಸೇರ್ಪಡೆಯಾದರು ಎಂಬ ಬಗ್ಗೆ ಚರ್ಚೆಯಾಗುತ್ತಿದೆ. ಎಷ್ಟು ಜನ ಬಡವರು ಅಸಿ”ನಿಂದ ಇದ್ದಾರೆ ಎಂಬ ಬಗ್ಗೆ ಯಾರೂ ಮಾತನಾಡುತ್ತಿಲ್ಲ ಎಂದು ಅವರು ಸಮಾಧಾನ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಎಸ್ಸಿ-ಎಸ್ಟಿ ಸಮನ್ವಯ ಸ”ುತಿ ಅಧ್ಯಕ್ಷ ಬಿ.ಶಿವಶಂಕರ್, ದಲಿತ ಹಕ್ಕುಗಳ ಸ”ುತಿ ಅಧ್ಯಕ್ಷ ಗೋಪಾಲಕೃಷ್ಣ ಹರಳಹಳ್ಳಿ, ಎನ್.ರಾಜಣ್ಣ, ದಲಿತ ಶೋಷಣ ಮುಕ್ತಿಮಂಚ್‍ನ ರ್ಟ್ರಾೀಯ ಸದಸ್ಯ ನಾಗರಾಜ್ ನಂಜುಂಡಯ್ಯ ಮತ್ತಿತರರು ಭಾಗವ”ಸಿದ್ದರು.