ಸರಗಳ್ಳನ ಬಂಧನ

 

ಬೆಂಗಳೂರು, ಜು.14-ಸಾಲ ತೀರಿಸಲು ಒಂಟಿಯಾಗಿ ಹೋಗುವ ಮಹಿಳೆಯರು, ವೃದ್ಧೆಯರ ಸರಗಳನ್ನು ಅಪಹರಿಸುತ್ತಿದ್ದ ಸಾಫ್ಟ್‍ವೇರ್ ಕಂಪೆನಿ ಮಾಲೀಕನನ್ನು ಎಚ್‍ಎಸ್‍ಆರ್ ಲೇಔಟ್ ಠಾಣೆ ಪೆÇಲೀಸರು ಬಂಧಿಸಿದ್ದಾರೆ.
ಸಾಫ್ಟ್‍ವೇರ್ ಉದ್ಯಮಿ ಪ್ರಭಾಕರ್ ಬಂಧಿತ ಸರಗಳ್ಳನಾಗಿದ್ದು, ಸುಮಾರು 25ಕ್ಕೂ ಹೆಚ್ಚು ಸರಗಳ್ಳತನ ಮಾಡಿರುವ ಬಗ್ಗೆ ವಿಚಾರಣೆಯಿಂದ ಬೆಳಕಿಗೆ ಬಂದಿದೆ.
ಸರ ಅಪಹರಿಸುವ ಮೂಲಕ ಸುಮಾರು 10 ಲಕ್ಷಕ್ಕೂ ಹೆಚ್ಚು ಸಾಲ ತೀರಿಸಿರುವ ಈತ, ಒಂದೇ ಬೈಕ್ ಬಳಸಿ ಎಚ್‍ಎಸ್‍ಆರ್ ಲೇಔಟ್,ಕೋರಮಂಗಲ, ಮಡಿವಾಳ, ಜಯನಗರ ಹಾಗೂ ಇತರೆ ಭಾಗಗಳಲ್ಲಿ ಮಾಡಿದ್ದ ಸರಗಳ್ಳತನ ಪತ್ತೆಯಾದಂತಾಗಿದೆ.
ಈತ ಹೆಲ್ಮೆಟ್ ಧರಿಸಿಕೊಂಡು ಬೆಳಗಿನ ಜಾವ ಹಾಗೂ ರಾತ್ರಿ ವೇಳೆ ತನ್ನ ಬೈಕ್‍ನಲ್ಲಿ ಒಬ್ಬನೇ ಸುತ್ತಾಡುತ್ತಾ ಮಹಿಳೆಯರ ಸರಗಳನ್ನು ಅಪಹರಿಸುತ್ತಿದ್ದನು.
ಏ.24 ರಂದು ಎಚ್‍ಎಸ್‍ಆರ್ ಲೇಔಟ್‍ನಲ್ಲಿ ವೃದ್ಧೆ ಸರ ಅಪಹರಣ ಮಾಡಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಎಚ್‍ಎಸ್‍ಆರ್ ಲೇಔಟ್ ಠಾಣೆ ಪೆÇಲೀಸರು, ಸಿಸಿ ಟಿವಿ ದೃಶ್ಯಾವಳಿ ಆಧರಿಸಿ ತನಿಖೆ ಕೈಗೊಂಡಾಗ ಈತ ಚೈನ್ ಅಪಹರಿಸಿ ಪರಾರಿಯಾಗುತ್ತಿದ್ದ ವೇಳೆ ಕಾನ್‍ಸ್ಟೆಬಲ್ ಮಲ್ಲಪ್ಪ ಎಂಬುವರು ಬೆನ್ನಟ್ಟಿ ಕೊನೆಗೂ ಸರಗಳ್ಳನನ್ನು ಬಂಧಿಸಿ ಹಲವು ಪ್ರಕರಣಗಳನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ