ಬೆಂಗಳೂರು, ಜು.13- ದರೋಡೆ, ಮನೆಗಳ್ಳತನ, ಸುಲಿಗೆ ಮಾಡುತ್ತಿದ್ದ ಕಳ್ಳನನ್ನು ಕಾಮಾಕ್ಷಿಪಾಳ್ಯ ಠಾಣೆ ಪೆÇಲೀಸರು ಬಂಧಿಸಿ 1.60 ಲಕ್ಷ ರೂ. ಬೆಲೆಬಾಳುವ 60 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಬಸವೇಶ್ವರನಗರದ ವಿಜಯ್ಕುಮಾರ್ (26) ಬಂಧಿತ ಆರೋಪಿಯಾಗಿದ್ದು, ಈತನ ಬಂಧನದಿಂದ ಕಾಮಾಕ್ಷಿಪಾಳ್ಯದ ಒಂದು ಕನ್ನಗಳವು, ಒಂದು ದರೋಡೆ ಹಾಗೂ ಒಂದು ಮನೆಗಳ್ಳತನ, ಚಂದ್ರಾ ಲೇಔಟ್ ಠಾಣೆಯ ದರೋಡೆ ಪ್ರಕರಣ, ಹನುಮಂತನಗರ ಠಾಣೆಯ ಒಂದು ಕನ್ನಗಳವು ಪ್ರಕರಣ ಪತ್ತೆಯಾದಂತಾಗಿದೆ.
ಆರೋಪಿ ವಿಜಯ್ಕುಮಾರ್ ಹಳೆ ಆರೋಪಿಯಾಗಿದ್ದು, ಈತನ ವಿರುದ್ಧ ಕಾಮಾಕ್ಷಿಪಾಳ್ಯ, ಬಸವೇಶ್ವರನಗರ, ವಿಜಯನಗರ, ಸುಬ್ರಹ್ಮಣ್ಯನಗರ, ಜ್ಞಾನಭಾರತಿ, ರಾಜರಾಜೇಶ್ವರಿನಗರ, ಮಾಗಡಿ ರಸ್ತೆ, ಮಹಾಲಕ್ಷ್ಮಿ ಲೇಔಟ್, ಚಂದ್ರಾ ಲೇಔಟ್ ಠಾಣೆಗಳಲ್ಲಿ ದರೋಡೆ ಪ್ರಕರಣಗಳ ಆರೋಪಿಯಾಗಿದ್ದಾನೆ.
ಈತನ ವಿರುದ್ಧ ವಾರೆಂಟ್ಗಳಿದ್ದು, ವಿಚಾರಣೆಯಲ್ಲಿರುತ್ತದೆ. ಈತನ ಸಹಚರರಾದ ಅಶೋಕ್ ಮತ್ತು ಕೇಶವ ತಲೆಮರೆಸಿಕೊಂಡಿದ್ದು, ಇವರ ಪತ್ತೆಗಾಗಿ ಶೋಧ ಮುಂದುವರಿದಿದೆ.
ಕಾಮಾಕ್ಷಿಪಾಳ್ಯ ಠಾಣೆ ಇನ್ಸ್ಪೆಕ್ಟರ್ ಆರ್.ಜಿ.ರವಿಕುಮಾರ್, ಪಿಎಸ್ಐ ಕಿರಣ್ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.