ತೈಲ ಮಾರುಕಟ್ಟೆಯಲ್ಲಿ ದರ ಏರಿಕೆಯಾಗಿದ್ದರೂ ಎಲ್ಪಿಜಿ ಸಬ್ಸಿಡಿ ಶೇ.60 ರಷ್ಟು ಹೆಚ್ಚಳ; ಗ್ರಾಹಕರು ನಿರಾಳ

ಹೊಸದಿಲ್ಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಏರಿಕೆಯಾಗಿದ್ದರೂ ಆದರೂ ಕೇಂದ್ರ ಸರ್ಕಾರ ಕಳೆದೆರಡು ತಿಂಗಳಲ್ಲಿ ಅಡುಗೆ ಅನಿಲದ ಸಬ್ಸಿಡಿಯನ್ನು ಶೇ.60ರಷ್ಟು ಹೆಚ್ಚಿಸಿದೆ ಎಂದು ಐಒಸಿ ಅಧ್ಯಕ್ಷ ಸಂಜೀವ್ ಸಿಂಗ್ ಮಾಹಿತಿ ನೀಡಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ದರದಲ್ಲ ಹೆಚ್ಚಳವಾಗಿದ್ದರೂ ಗ್ರಾಹಕರ ಸಬ್ಸಿಡಿಯಲ್ಲಿ ಸರ್ಕಾರ ಹೆಚ್ಚಳ ಮಾಡಿದೆ. ಇದರಿಂದ ಗ್ರಾಹಕರು ನಿರಾಳರಾಗಿದ್ದಾರೆ ಎಂದರು.
ಅಡುಗೆ ಅನಿಲದ ಸಬ್ಸಿಡಿಯು ಗ್ರಾಹಕರ ಬ್ಯಾಂಕ್ ಖಾತೆಗೆ ಜಮಾ ಆಗುತ್ತಿದೆ. ಮೇ ತಿಂಗಳಲ್ಲಿ ಪ್ರತಿ ಸಿಲಿಂಡರ್ಗೆ 159 ರೂ. ಸಬ್ಸಿಡಿ ಸಿಗುತ್ತಿತ್ತು. ಜೂನ್ನಲ್ಲಿ ಇದು 204 ರೂ. ಹಾಗೂ ಜುಲೈನಲ್ಲಿ 257 ರೂ. ಹಣ ಗ್ರಾಹಕರ ಖಾತೆಗೆ ಜಮಾ ಆಗಿದೆ ಎಂದು ಸಂಜೀವ್ ಸಿಂಗ್ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ