ಜಮ್ಮು, ಜು.12-ಜಮ್ಮು ಮತ್ತು ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಮುಂಜಾನೆ ಸಂಭವಿಸಿದ ಅಪಘಾತದಲ್ಲಿ 13 ಅಮರನಾಥ ಯಾತ್ರಿಕರು ಗಾಯಗೊಂಡಿದ್ದಾರೆ. ಯಾತ್ರಾರ್ಥಿಗಳಿದ್ದ ಟೆಂಪೆÇೀ ನಿಂತಿದ್ದ ಟ್ರಕ್‍ಗೆ ಅಪ್ಪಳಿಸಿ ಈ ಘಟನೆ ಸಂಭವಿಸಿದೆ ಎಂದು ಪೆÇಲೀಸರು ತಿಳಿಸಿದ್ದಾರೆ. ಕಾಶ್ಮೀರದ ಜಮ್ಮುವಿನಿಂದ 70 ಕಿಮೀ ದೂರದಲ್ಲಿರುವ ಉಧಾಂಪುರ್ ಜಿಲ್ಲೆಯ ಮಲ್ಲಾರ್ಡ್ ಪ್ರದೇಶದ ಧೇರ್ಮಾ ಸೇತುವೆ ಬಳಿ 5.30ರಲ್ಲಿ ಈ ಅಪಘಾತ ಸಂಭವಿಸಿದೆ. ಟೆಂಪೆÇೀ ಚಾಲಕನ ನಿಯಂತ್ರಣ ತಪ್ಪಿ ನಿಲುಗಡೆಯಾಗಿದ್ದ ಟ್ರಕ್‍ಗೆ ಡಿಕ್ಕಿ ಹೊಡೆಯಿತು ಎಂದು ಪೆÇಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ವಾಹನದಲ್ಲಿದ್ದ 13 ಯಾತ್ರಿಗಳು ಗಾಯಗೊಂಡಿದ್ದು, ಉಧಾಂಪುರದ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ. 630 ಮಹಿಳೆಯರು ಮತ್ತು 201 ಸಾಧುಗಳನ್ನೂ ಒಳಗೊಂಡಂತೆ ಅಮರನಾಥ ಯಾತ್ರೆ ಆರಂಭಿಸಿದ 3,419 ಯಾತ್ರಾರ್ಥಿಗಳ ತಂಡದಲ್ಲಿ ಇವರೂ ಇದ್ದರು.