ಮಾಸಾಯ್, ಜು.10- ಪ್ರವಾಹದ ರಭಸಕ್ಕೆ ಕೊಚ್ಚಿಹೋಗಿ ಥಾಯ್ಲೆಂಡ್ನ ಗುಹೆಯಲ್ಲಿ ಸಿಕ್ಕಿಬಿದ್ದು 15 ದಿನಗಳ ನಂತರ ರಕ್ಷಿಸಲ್ಪಟ್ಟಿರುವ 8 ಮಂದಿ ಯುವಕರ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ರಕ್ಷಿಸಲ್ಪಟ್ಟಿರುವ 8 ಮಂದಿ ಯುವಕರಲ್ಲಿ ಇಬ್ಬರು ನ್ಯುಮೋನಿಯಾಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದರೂ ಅವರ ಮಾನಸಿಕ ಮತ್ತು ದೈಹಿಕ ಸಾಮಥ್ರ್ಯ ಉತ್ತಮವಾಗಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಚಿಯಾಂಗ್ ರೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಲ್ಲ 8 ಮಂದಿ ಆರೋಗ್ಯ ಚೇತರಿಸಿಕೊಂಡಿದ್ದು, ಅವರು ತಿನ್ನಲು ಚಾಕೊಲೆಟ್ ನೀಡುವಂತೆ ಕೇಳುತ್ತಿದ್ದಾರೆ ಎಂದು ಥಾಯ್ಲೆಂಡ್ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಜೆಸಡಾ ತಿಳಿಸಿದ್ದಾರೆ.
ಹತ್ತು ದಿನಗಳಿಗೂ ಹೆಚ್ಚು ಕಾಲ ಗುಹೆಯಲ್ಲಿ ಅಂಗೈಯಲ್ಲಿ ಜೀವ ಹಿಡಿದುಕೊಂಡು ಬದುಕುಳಿದಿರುವ 8 ಮಂದಿಗೆ ಸಾಂಕ್ರಾಮಿಕ ರೋಗ ಕಾಣಿಸಿಕೊಳ್ಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಅವರನ್ನು ಎಲ್ಲ ರೀತಿಯ ಪರೀಕ್ಷೆಗೆ ಒಳಪಡಿಸಲಾಗಿದೆ. ಎಂಟು ಮಂದಿಯಲ್ಲಿ ಇಬ್ಬರಿಗೆ ನ್ಯುಮೋನಿಯಾ ಕಂಡುಬಂದಿದ್ದು, ಅವರಿಗೆ ಆ್ಯಂಟಿ ಬಯೋಟಿಕ್ ಔಷಧೋಪಚಾರ ನಡೆಸಲಾಗಿದೆ. ಚಿಕಿತ್ಸೆ ಪಡೆಯುತ್ತಿರುವ ಎಲ್ಲ 8 ಮಂದಿ ಆರೋಗ್ಯ ಸ್ಥಿರವಾಗಿದ್ದು, ಅವರೆಲ್ಲರೂ ಊಟ ಮಾಡಿಕೊಂಡು, ಮಾತನಾಡಿಕೊಂಡು, ಓಡಾಡಿಕೊಂಡಿದ್ದಾರೆ ಎಂದು ಜೆಸಡಾ ತಿಳಿಸಿದ್ದಾರೆ. ಗುಹೆಯಲ್ಲಿ ಸಿಲುಕಿಕೊಂಡು ಅದೃಷ್ಟವಶಾತ್ ಜೀವಂತವಾಗಿ ಹೊರಬಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮ್ಮ ಮಕ್ಕಳ ಆರೋಗ್ಯ ಸುಧಾರಿಸುತ್ತಿರುವುದನ್ನು ಕಂಡು ಪೆÇೀಷಕರು ಖುಷಿ ಪಡುತ್ತಿದ್ದಾರೆ. ಕಳೆದ ಎರಡು ವಾರಗಳ ಹಿಂದೆ ಸುರಿದ ಭಾರೀ ಮಳೆಯಿಂದ ಪ್ರವಾಹ ಉಕ್ಕಿಬಂದು 8 ಮಂದಿ ಕ್ರೀಡಾಪಟುಗಳು ಸೇರಿದಂತೆ ಹಲವಾರು ಮಂದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ತಾಮ್ಲಾಂಗ್ ಗುಹೆಯಲ್ಲಿ ಸಿಕ್ಕಿಬಿದ್ದಿದ್ದರು. ಕ್ರೀಡಾಪಟುಗಳು ಗುಹೆಯಲ್ಲಿ ಸಿಕ್ಕಿಹಾಕಿಕೊಂಡಿರುವುದನ್ನು ಪತ್ತೆಹಚ್ಚಿದ ನಂತರ ಅವರ ರಕ್ಷಣಾ ಕಾರ್ಯಾಚರಣೆಗಿಳಿದ ವೈಲ್ಡ್ಬೋರ್ಸ್ ತಂಡದ ಸದಸ್ಯರು ನಿರಂತರ ಕಾರ್ಯಾಚರಣೆ ನಡೆಸಿ 8 ಮಂದಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದರು.
ಇನ್ನಿತರ ಕೆಲ ಮಂದಿ ಗುಹೆಯಲ್ಲಿ ಸಿಕ್ಕಿಬಿದ್ದಿದ್ದು, ಅವರ ರಕ್ಷಣಾ ಕಾರ್ಯವನ್ನು ಮುಂದುವರಿಸಲಾಗಿದೆ.