ರಾಯಲ್ ಸೊಸೈಟಿ ಆಫ್ ಆಟ್ರ್ಸ್‍ನ ಗೌರವ ಸದಸ್ಯತ್ವಕ್ಕೆ ಮೇಕಪ್ ಕಲಾವಿದೆ ಲಕ್ಷ್ಮಿ ಮೆನನ್ ಆಯ್ಕೆ

ಕೊಚ್ಚಿ, ಜು.10- ಪ್ರತಿಷ್ಠಿತ ರಾಯಲ್ ಸೊಸೈಟಿ ಆಫ್ ಆಟ್ರ್ಸ್‍ನ ಗೌರವ ಸದಸ್ಯತ್ವಕ್ಕೆ ಕೇರಳ ಮೂಲದ ಮೇಕಪ್ ಕಲಾವಿದೆ ಲಕ್ಷ್ಮಿ ಮೆನನ್ ಆಯ್ಕೆಯಾಗಿದ್ದಾರೆ. ಇಂಗ್ಲೆಂಡ್ ರಾಣಿ ಎರಡನೆ ಎಲಿಜಬೆತ್ ಅವರಿಂದ ಸ್ಥಾಪಿಸಲ್ಪಟ್ಟಿರುವ ರಾಯಲ್ ಸೊಸೈಟಿ ಆಫ್ ಆಟ್ರ್ಸ್‍ಗೆ ನಿಯೋಜನೆಗೊಳ್ಳುತ್ತಿರುವ ಮೊದಲ ಭಾರತೀಯ ಮಹಿಳೆ ಎಂಬ ಖ್ಯಾತಿಗೆ ಲಕ್ಷ್ಮಿ ಮೆನನ್ ಒಳಗಾಗಿದ್ದಾರೆ. ವಿಶ್ವದ ಪ್ರತಿಷ್ಠಿತ ಕಲಾವಿದರಾದ ಜೇಮ್ಸ್‍ಬಾಂಡ್ ಖ್ಯಾತಿಯ ಜೂಡಿ ಡೆಂಚ್, ಸಂಗೀತ ಸಂಯೋಜಕ ಬೆನ್ಸನ್, ಟೇಲರ್, ಸಂಗೀತಗಾರ ಅಲೆಕ್ಸ್ ಜೇಮ್ಸ್‍ನಂತಹ ಘಟಾನುಘಟಿ ವ್ಯಕ್ತಿಗಳು ಮಾತ್ರ ರಾಯಲ್ ಸೊಸೈಟಿಯ ಗೌರವ ಸದಸ್ಯತ್ವಕ್ಕೆ ಪಾತ್ರರಾಗಿದ್ದರು. ಮಹಿಳೆಯರು ಸ್ವಾವಲಂಬನೆ ಜೀವನ ನಡೆಸಲು ಅನುಕೂಲವಾಗುವಂತೆ ಮೇಕಪ್ ಮಾಡುವ ಕಲೆಯನ್ನು ಕಲಿಸಿಕೊಡುವ ಮೂಲಕ ಲಕ್ಷ್ಮಿ ಮೆನನ್ ಪ್ರವರ್ಧಮಾನಕ್ಕೆ ಬಂದವರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ