ಲಖನೌ, ಜು.9- ಬಿಜೆಪಿ ಶಾಸಕರೊಬ್ಬರ ಕೊಲೆ ಆರೋಪ ಹಾಗೂ ರಾಜಕಾರಣಿಗಳಿಂದ ಹಫ್ತಾ ವಸೂಲಿ ಆರೋಪಕ್ಕೆ ಗುರಿಯಾಗಿದ್ದ ಕುಖ್ಯಾತ ಭೂಗತ ಪಾತಕಿಯನ್ನು ಜೈಲಿನಲ್ಲೇ ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಭಾಗ್‍ಪತ್ ಜಿಲ್ಲೆಯಲ್ಲಿ ನಡೆದಿದೆ. ಜೈಲಿನಲ್ಲೇ ಗುಂಡೇಟಿನಿಂದ ಹತನಾಗಿರುವ ಭೂಗತ ಪಾತಕಿಯನ್ನು ಪ್ರೇಮ್‍ಪ್ರಕಾಶ್ ಸಿಂಗ್ ಅಲಿಯಾಸ್ ಮುನ್ನಾ ಭಜರಂಗಿ ಎಂದು ಗುರುತಿಸಲಾಗಿದೆ.
ಮುನ್ನಾ ಭಜರಂಗಿ ಬಿಜೆಪಿ ಮಾಜಿ ಶಾಸಕ ಕೃಷ್ಣಾನಂದರಾಯ್ ಅವರ ಹತ್ಯಾ ಆರೋಪಿಯಾಗಿದ್ದು, ಇತ್ತೀಚೆಗೆ ಮತ್ತೊಬ್ಬ ಬಿಜೆಪಿ ಶಾಸಕ ಲೋಕೇಶ್ ದೀಕ್ಷಿತ್ ಅವರಿಂದ ಹಫ್ತಾ ವಸೂಲಿಗೆ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ.
ಈ ಆರೋಪ ಕುರಿತಂತೆ ಮುನ್ನಾ ಭಜರಂಗಿ ಝಾನ್ಸಿ ಜೈಲು ಪಾಲಾಗಿದ್ದ. ನಿನ್ನೆ ಭಾಗ್‍ಪತ್ ಸ್ಥಳೀಯ ನ್ಯಾಯಾಲಯದ ಮುಂದೆ ಆರೋಪಿಯನ್ನು ಹಾಜರುಪಡಿಸಬೇಕಾದ ಹಿನ್ನೆಲೆಯಲ್ಲಿ ಆತನನ್ನು ಝಾನ್ಸಿ ಜೈಲಿನಿಂದ ಭಾಗ್‍ಪತ್ ಜೈಲಿಗೆ ಕರೆತರಲಾಗಿತ್ತು. ಪೆÇಲೀಸರು ನನ್ನ ಪತಿಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾರೆ ಎಂದು ಭಜರಂಗಿ ಪತ್ನಿ ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆಸಿ ಪೆÇಲೀಸರ ವಿರುದ್ಧ ಆರೋಪ ಮಾಡಿದ್ದರು.
ಈ ಘಟನೆ ಬೆನ್ನಲ್ಲೇ ಭಾಗ್‍ಪಥ್ ಜೈಲಿನಲ್ಲಿ ಮುನ್ನಾ ಭಜರಂಗಿ ಕೊಲೆಯಾಗಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕೊಲೆ ಸಂಬಂಧ ಜೈಲು ಉಪ ಅಧೀಕ್ಷಕ ಹಾಗೂ ನಾಲ್ಕು ಜೈಲು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ ಎಂದು ಎಡಿಜಿಪಿ ಚಂದ್ರಪ್ರಕಾಶ್ ತಿಳಿಸಿದ್ದಾರೆ.