ಹೊನ್ನಾವರ, ಫೆ.26-ಸಿಡಿಮದ್ದು ಸಿಡಿಸುವ ವೇಳೆ ಕೈಯಲ್ಲೇ ಸ್ಫೋಟಗೊಂಡು ವ್ಯಕ್ತಿಯೊಬ್ಬ ಗಂಭೀರ ಗಾಯಗೊಂಡ ಘಟನೆ ಹೊನ್ನಾವರದ ಹೊಸಾಡ ಗ್ರಾಮದಲ್ಲಿ ರವಿವಾರ ರಾತ್ರಿ ನಡೆದಿದೆ.
ಹೊನ್ನಾವರದ ಪ್ರಭಾತ ನಗರ ನಿವಾಸಿ ರೇಮಂಡ್ ಮಿರಾಂದಾ ಗಂಭೀರ ಗಾಯಗೊಂಡಿದ್ದು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಾಲೂಕಿನ ಹೊಸಾಡದಲ್ಲಿ ಹೊನಲು ಬೆಳಕಿನ ವಾಲಿಬಾಲ ಪಂದ್ಯಾವಳಿ ಆಯೋಜಿಸಲಾಗಿತ್ತು. ಶಾಸಕ ಮಂಕಾಳ ವೈದ್ಯ ಭಾಗವಹಿಸಿದ್ದು, ಸಭಾ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.
ವೇದಿಕೆ ಸಮೀಪದಲ್ಲಿ ಸಿಡಿಮದ್ದು ಸಿಡಿಸುತ್ತಿದ್ದಾಗ ಭಾರೀ ಸಿಡಿಮದ್ದೊಂದು ರೇಮಂಡ್ ಅವರ ಕೈಯಲ್ಲೇ ಸ್ಫೋಟಗೊಂಡು ಕೈ ಭಾಗಶಃ ಸುಟ್ಟುಹೋಗಿದೆ. ದೇಹದೆಲ್ಲೆಡೆ ತೀವ್ರತರದ ಗಾಯಗಳಾಗಿವೆ.