ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳ ವಶ

ಜಮ್ಮು, ಜು.6- ಇಲ್ಲಿನ ಪೂಂಚ್ ಜಿಲ್ಲೆಯ ಗಡಿ ರಕ್ಷಣಾ ರೇಖೆ ಬಳಿ ಅರಣ್ಯ ಪ್ರದೇಶದಲ್ಲಿ ಅಡಗಿಸಿಟ್ಟಿದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಸೇನಾಪಡೆ ವಶಪಡಿಸಿಕೊಂಡಿದೆ. ಕಳೆದ ರಾತ್ರಿ ಕಾರ್ಯಾಚರಣೆ ವೇಳೆ ಭೂಮಿಯಲ್ಲಿ ಹುದುಗಿಸಿಟ್ಟಿದ್ದ ಸುಧಾರಿತ ಸ್ಫೋಟಕಗಳು (ಐಇಡಿ), ಎಕೆ ರೈಫಲ್‍ಗಳು, ಪಾಕಿಸ್ತಾನದ ಹಣ ಹಾಗೂ ಅಪಾರ ಮದ್ದು-ಗುಂಡುಗಳನ್ನು ಪತ್ತೆ ಹಚ್ಚಿ ವಶಕ್ಕೆ ಪಡೆಯಲಾಗಿದೆ. ಇದಲ್ಲದೆ, ಚೀನಾ ನಿರ್ಮಿತ ಗ್ರೆನೇಡ್ ಅಳವಡಿತ ರಾಕೆಟ್ ಹಾಗೂ ಬಾಂಬ್‍ಗಳನ್ನು ವಶಕ್ಕೆ ಪಡೆಯಲಾಗಿದೆ. ಇದನ್ನು ನೆರೆ ರಾಷ್ಟ್ರಗಳಿಂದ ಕಳ್ಳಸಾಗಣೆ ಮಾಡಿ ಇಲ್ಲಿಗೆ ತಂದು ಅಡಗಿಸಿಡಲಾಗಿತ್ತು ಎಂದು ಸೇನಾ ಮೂಲಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ