ಆಗಸ್ಟ್ 12ರಿಂದ 16ರವರೆಗೆ ತಿಮ್ಮಪ್ಪನ ದರ್ಶನ ಇಲ್ಲ

ಹೈದರಾಬಾದ್,ಜು.6- ತಿರುಪತಿ ತಿರುಮಲ ದೇವಾಲಯದಲ್ಲಿ 12 ವರ್ಷಕ್ಕೊಮ್ಮೆ ನಡೆಯುವ ಅಷ್ಟಬಂಧ ಬಾಲಾಲಯ ಮಹಾ ಸಂಪೆÇ್ರೀ ನಿಮಿತ್ತ ಭಕ್ತಾಧಿಗಳಿಗೆ ಆಗಸ್ಟ್ 12ರಿಂದ 16ರವರೆಗೆ ತಿಮ್ಮಪ್ಪನ ದರ್ಶನಕ್ಕೆ ಅವಕಾಶವಿರುವುದಿಲ್ಲ. ತಿರುಪತಿ ತಿರುಮಲ ದೇವಾಲಯ ಆಡಳಿತ ಮಂಡಳಿ ಈ ಕುರಿತು ಮಾಹಿತಿ ನೀಡಿದ್ದು, ಈ ಆಚರಣೆ ವೇಳೆ ದೇವಸ್ಥಾನ ಸಿಬ್ಬಂದಿಗಳಿಗೂ ಒಳ ಪ್ರವೇಶಿಸಲು ಅವಕಾಶವಿರುವುದಿಲ್ಲ. ಆಗಸ್ಟ್ 11ರಂದು ಅಂಕುರಾರ್ಪಣೆ ಕಾರ್ಯಕ್ರಮವಿದ್ದು, ಅಂದು 30ರಿಂದ 35 ಸಾವಿರ ಭಕ್ತರಿಗೆ ಮಾತ್ರ ತಿಮ್ಮಪ್ಪನ ದರ್ಶನ ಭಾಗ್ಯವಿದೆ. ಆಗಸ್ಟ್ 12 ರಿಂದ 16 ವರೆಗೆ ಐದು ದಿನಗಳ ಕಾಲ ಯಾರಿಗೂ ಪ್ರವೇಶವಿರುವುದಿಲ್ಲ ಎಂದು ತಿಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ