ಮೆಕ್ಸಿಕೋ ಸಿಟಿಯಲ್ಲಿ ಸರಣಿ ಪಟಾಕಿ ಸ್ಫೋಟ!

ಟುಲ್ಟೆಪೆಕ್, ಜು.6-ಮೆಕ್ಸಿಕೋ ರಾಜಧಾನಿ ಮೆಕ್ಸಿಕೋ ಸಿಟಿ ಹೊರವಲಯದಲ್ಲಿನ ಪಟಾಕಿ ಕಾರ್ಯಾಗಾರವೊಂದರಲ್ಲಿ ಸರಣಿ ಸ್ಫೋಟಗಳು ಸಂಭವಿಸಿ ಕನಿಷ್ಠ 26 ಮಂದಿ ಮೃತಪಟ್ಟು, ಇತರ 49 ಜನರು ತೀವ್ರ ಗಾಯಗೊಂಡಿರುವ ದುರಂತ ಸಂಭವಿಸಿದೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ. ಈ ಪಟಾಕಿ ದುರಂತದಲ್ಲಿ ಅಗ್ನಿಶಾಮಕ ದಳದ ನಾಲ್ವರು ಸಿಬ್ಬಂಇ ಮತ್ತು ಇಬ್ಬರು ಪೆÇಲೀಸರೂ ಸಹ ಮೃತಪಟ್ಟಿದ್ದಾರೆ. ಮೊದಲ ಸ್ಫೋಟ ಸಂಭವಿಸಿದಾಗ ರಕ್ಷಣಾ ಕಾರ್ಯಾಚರಣೆಗೆ ಧಾವಿಸಿದ ಇವರು ನಂತರದ ಸರಣಿ ಸ್ಫೋಟಗಳಲ್ಲಿ ಅಸುನೀಗಿದ್ದಾರೆ ಎಂದು ಸರ್ಕಾರದ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೆಕ್ಸಿಕೋ ಸಿಟಿಯ ಉತ್ತರ ಭಾಗದಲ್ಲಿರುವ ಟುಲ್ಟೆಪೆಕ್‍ನ ಪಟಾಖಿ ಕಾರ್ಖಾನೆಯಲ್ಲಿ ಸಂಭವಿಸಿದ ಈ ಭೀಕರ ದುರಂತದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸರಣಿ ಸ್ಫೋಟಗಳ ತೀವ್ರತೆಯಿಂದಾಗಿ ಅಕ್ಕಪಕ್ಕದ ಕಟ್ಟಡಗಳು, ಮನೆಗಳಿಗೆ ತೀವ್ರ ಹಾನಿಯಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ. ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಈ ಸರಣಿ ಸ್ಫೋಟದ ತನಿಖೆಗೆ ಸ್ಥಳೀಯ ಆಡಳಿತ ಆದೇಶಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ