ಪಾಲಿಕೆಯ ಆಸ್ತಿಯನ್ನು ಉಳಿಸಿಕೊಳ್ಳಲು ಮೇಯರ್‍ಗೆ ಮನವಿ

 

ಬೆಂಗಳೂರು, ಜು.6- ಪಾಲಿಕೆಯ ಕೈತಪ್ಪಿ ಹೋಗಲಿರುವ ಸುಮಾರು 150 ಕೋಟಿ ಮೌಲ್ಯದ ಆಸ್ತಿಯನ್ನು ಉಳಿಸಿಕೊಳ್ಳಲು ಪ್ರಯತ್ನ ನಡೆಸಬೇಕೆಂದು ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಮೇಯರ್ ಸಂಪತ್‍ರಾಜ್ ಅವರನ್ನು ಆಗ್ರಹಿಸಿದರು.
ಹಳೆ ಏರ್‍ಪೆÇೀರ್ಟ್ ರಸ್ತೆಯಲ್ಲಿ ಸುಮಾರು 4 ಎಕರೆಯಷ್ಟು ಬಿಬಿಎಂಪಿ ಜಾಗವಿದೆ. ಇಂದಿನ ಮಾರುಕಟ್ಟೆ ಬೆಲೆ ಸುಮಾರು 200 ಕೋಟಿಯಾಗಲಿದೆ. ಆದರೆ, ನಮ್ಮ ಅಧಿಕಾರಿಗಳು ಈ ಆಸ್ತಿಯನ್ನು ಉಳಿಸಿಕೊಳ್ಳುವ ಪ್ರಯತ್ನ ಕೈಬಿಟ್ಟಿದ್ದಾರೆ. ಈ ಆಸ್ತಿ ಭೂಗಳ್ಳರ ಪಾಲಾಗದಂತೆ ಮಾಡಿ ಆಸ್ತಿ ಉಳಿಸಿ ಎಂದು ಒತ್ತಾಯಿಸಿದರು.
ಈ ಭೂಮಿಯನ್ನು ಕಬಳಿಸಲು ಹುನ್ನಾರ ನಡೆಸಿರುವ ಭೂಗಳ್ಳರು ಸರ್ವೆ ರಿಪೆÇೀರ್ಟ್ ಮಾಡಿಸಿಕೊಂಡು ಆಸ್ತಿಯನ್ನು ಲಪಟಾಯಿಸಲು ಹೊರಟಿದ್ದಾರೆ.
ಈ ಭೂಮಿಯ ಪಕ್ಕದಲ್ಲೇ ಇರುವ ಲಾಫಿಂಗ್ ವಾಟರ್ ಅಪಾರ್ಟ್‍ಮೆಂಟ್ ನಿವಾಸಿಗಳು ಈ ಆಸ್ತಿ ಭೂಗಳ್ಳರ ಪಾಲಾಗದಂತೆ ಮಾಡಲು ಮುಂದೆ ಬಂದಿದ್ದಾರೆ. ಕೂಡಲೇ ಆಯುಕ್ತರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಈ ಆಸ್ತಿ ಉಳಿಸಿಕೊಳ್ಳಲು ಯತ್ನಿಸಿ ಕೂಡಲೇ ಅಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಿ ಎಂದು ಪದ್ಮನಾಭರೆಡ್ಡಿ ಸಲಹೆ ನೀಡಿದರು. ಏನಿದು ಘಟನೆ: 70ರ ದಶಕದಲ್ಲಿ ಸರ್ವೆ ನಂಬರ್ 105, 106ರಲ್ಲಿ ಒ.ಜಿ.ರಾಜುಲು ಎಂಬುವವರಿಗೆ ಸರ್ಕಾರ ವ್ಯವಸಾಯ ಮಾಡಲು ಭೂಮಿ ಕೊಟ್ಟಿತ್ತು. ಈ ಎರಡೂ ಸರ್ವೆ ನಂಬರ್‍ನಲ್ಲಿ 4 ಎಕರೆ ಬಿ ಕರಾಬು ಇದೆ. ಇದು ಸರ್ಕಾರಕ್ಕೆ ಸೇರಬೇಕಾದದ್ದು. 1975ರಲ್ಲಿ 40 ಎಕರೆ ಸೇರಿ 42 ಎಕರೆಯನ್ನು ಪೆÇೀಡಿ ಮಾಡಿಕೊಂಡು 1990ರಲ್ಲಿ ಲೇಔಟ್ ಮಾಡಲು ಮುಂದಾದರು.
ಲೇಔಟ್ ಮಾಡಲು ಅಂದಿನ ಪಂಚಾಯಿತಿ ಅನುಮೋದನೆ ನೀಡಿತ್ತು. ಆದರೆ, ಗೋಪಾಲಯ್ಯ ಎಂಬ ವ್ಯಕ್ತಿ ಕರಾಬು ಭೂಮಿ ಒತ್ತುವರಿಯಾಗಿದೆ ಎಂದು ಹೈಕೋರ್ಟ್ ಮೊರೆ ಹೋಗಿ ಲೇಔಟ್ ಮಾಡಲು ಅನುಮತಿ ಕೊಡಬಾರದು ಎಂದು ಮನವಿ ಮಾಡಿದ್ದರು.
ನಂತರ ಗೋಪಾಲಯ್ಯ ಕಾಂಪ್ರಮೈಸ್ ಮಾಡಿಕೊಂಡು 4 ಎಕರೆ ಕರಾಬು ಭೂಮಿಯನ್ನು ದಾನ ಮಾಡಲು ತೀರ್ಮಾನಿಸಿದರು. ಇದು ಸರ್ಕಾರಿ ಭೂಮಿಯಾಗಿರುವುದರಿಂದ ಡೊನೇಟ್ ಮಾಡಲು ಬರುವುದಿಲ್ಲ.
ಈ ನಾಲ್ಕು ಎಕರೆ ಕರಾಬು ಭೂಮಿ ಬಿಬಿಎಂಪಿ ವ್ಯಾಪ್ತಿಗೆ ಒಳಪಡಲಿದೆ. ಈ ವಿಷಯ ಗೊತ್ತಿದ್ದರೂ ಜಂಟಿ ಆಯುಕ್ತರು, ಪಾಲಿಕೆ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ ಎಂದು ಪದ್ಮನಾಭರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ಭೂಗಳ್ಳರು ಸರ್ವೆ ರಿಪೆÇೀರ್ಟ್ ತರಿಸಿಕೊಂಡು ಈ ಭೂಮಿಯನ್ನು ನುಂಗಲು ಮುಂದಾಗಿದ್ದಾರೆ. ಈಗಾಲೂ ಕಾಲ ಮಿಂಚಿಲ್ಲ. ತಕ್ಷಣ 200 ಕೋಟಿ ಮೌಲ್ಯದ ಪಾಲಿಕೆ ಆಸ್ತಿಯನ್ನು ಉಳಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪದ್ಮನಾಭರೆಡ್ಡಿ ಅವರು ಹೇಳಿದ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಮೇಯರ್ ಸಂಪತ್‍ರಾಜ್, ತಕ್ಷಣ ಈ ಆಸ್ತಿ ಉಳಿಸಿಕೊಳ್ಳಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ