ಕೆಲವು ಜಿಲ್ಲೆಗಳಿಗೆ ಮಾತ್ರ ಬಜೆಟ್ – ಜಗದೀಶ್ ಶೆಟ್ಟರ್

 

ಬೆಂಗಳೂರು, ಜೂ.6- ಬಜೆಟ್ ಹಾಸನ, ಮೈಸೂರು, ರಾಮನಗರಕ್ಕೆ ಸೀಮಿತವಾಗಿದೆ.ರಾಜ್ಯದ ಸರ್ವಾಂಗೀಣ ಅಭಿವೃದ್ದಿಗೆ ಒತ್ತು ನೀಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್.ಡಿ.ಕುಮಾರಸ್ವಾಮಿ ಮಂಡಿಸಿದ ಬಜೆಟ್ ಕರ್ನಾಟಕ ಬಜೆಟ್ ಅಲ್ಲ. ಬದಲಿಗೆ ಸೀಮಿತ ಜಾಗಕ್ಕೆ ಮೀಸಲಾಗಿದೆ ಎಂದು ಕಿಡಿಕಾರಿದರು. ಹಿಂದುಳಿದ ವರ್ಗಗಳಿಗೆ ಬಜೆಟ್‍ನಿಂದ ಏನೂ ಅನುಕೂಲವಿಲ್ಲ.ಇಡೀ ರಾಜ್ಯದ ಜನರಿಗೆ ಮೋಸ ಮಾಡಿದ ಬಜೆಟ್ ಇದಾಗಿದೆ. ರೈತರ ಸಾಲ ಮನ್ನಾ ಆಗುವವರೆಗೆ ಬಿಜೆಪಿ ಹೋರಾಟ ನಿಲ್ಲಲ್ಲ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ