ಬೆಂಗಳೂರು,ಜೂ.6- ಆರ್‍ಟಿಇ ಅಡಿ ಶೇ.25ರಷ್ಟು ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸಿ ಅವರ ಶುಲ್ಕವನ್ನು ಸರ್ಕಾರ ಭರಿಸುತ್ತಿರುವುದನ್ನು ಕೂಡಲೇ ರದ್ದು ಮಾಡಬೇಕೆಂದು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಷೇನ್ ಆಫ್ ಇಂಡಿಯಾ-ಕರ್ನಾಟಕ ಒತ್ತಾಯಿಸಿದೆ.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಆರ್ಗನೈಷೇನ್‍ನ ರಾಷ್ಟ್ರೀಯ ಕಾರ್ಯದರ್ಶಿ ತೌಸಿಫ್ ಮಡಿಕೇರಿ, ಈಗಾಗಲೇ ಸರ್ಕಾರ ಕಡಿಮೆ ಹಾಜರಾತಿ ಇರುವ 28,847 ಸರ್ಕಾರಿ ಶಾಲೆಗಳನ್ನು ವಿಲೀನದ ಹೆಸರಿನಲ್ಲಿ ಮುಚ್ಚಲು ಮುಂದಾಗಿರುವುದು ಖಂಡನೀಯ ಎಂದರು.
ಪ್ರಸ್ತುತ ಬಜೆಟ್‍ನಲ್ಲಿ ಕಳೆದ ಬಾರಿ ಶಿಕ್ಷಣಕ್ಕಾಗಿ ಶೇ.11.78ರಷ್ಟು ಮೀಸಲಿಟ್ಟಿತ್ತು. ಆದರೆ ಪ್ರಸ್ತುತ ಬಜೆಟ್‍ನಲ್ಲಿ ಶೇ.0.78ರಷ್ಟು ಕಡಿಮೆ ಮಾಡಿ ಶೇ.11ರಷ್ಟು ಮಾತ್ರ ಮೀಸಲಿಟ್ಟಿದೆ. ಇದನ್ನು ಮುಖ್ಯಮಂತ್ರಿಗಳು ಮರುಶೀಲಿಸಬೇಕೆಂದು ಎಸ್‍ಐಒಎಫ್ ರಾಷ್ಟ್ರೀಯ ಕಾರ್ಯದರ್ಶಿ ಒತ್ತಾಯಿಸಿದ್ದಾರೆ.
ಸರ್ಕಾರಿ ಶಾಲೆಗಳನ್ನು ಮುಚ್ಚುವುದರಿಂದ ಖಾಸಗಿ ಶಾಲೆಗಳು ಹೆಚ್ಚಾಗಿ ಪ್ರಾರಂಭಗೊಂಡಿವೆ. ಇನ್ನು ಸರ್ಕಾರಿ ಶಾಲೆಗಳನ್ನು ಮುಚ್ಚಿದರೆ ಇನ್ನಷ್ಟು ಖಾಸಗಿ ಶಾಲೆಗಳು ಹೆಚ್ಚಾಗಿವೆ. ನಾವೇ ಖಾಸಗೀಕರಣಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದರು.
ಆಂಗ್ಲ ಭಾಷೆಯನ್ನು ಈಗಾಗಲೇ 1ನೇ ತರಗತಿಯಿಂದ ಪ್ರಾರಂಭಿಸಬೇಕೆಂದು ಆದೇಶವಾಗಿದ್ದರು. ಆಂಗ್ಲ ಶಿಕ್ಷಕರ ಕೊರತೆಯಿಂದ ಈಗಲೂ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಈ ಯೋಜನೆ ಅನುಷ್ಠಾನವಾಗಿಲ್ಲ ಎಂದರು.
ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುತ್ತೇವೆ ಎಂದು ಆಶ್ವಾಸನೆ ನೀಡಿದ್ದ ರಾಜ್ಯಸರ್ಕಾರ ಬಜೆಟ್‍ನಲ್ಲಿ ಬಸ್‍ಗೆ ಹಣ ಮೀಸಲಿಡದೆ ವಂಚಿಸಿದ್ದಾರೆ ಎಂದು ಆರೋಪಿಸಿದರು.