ಬೆಂಗಳೂರು, ಜು.6- ಆರೋಗ್ಯ ಕವಚ 108 ಸೇವೆ ಒದಗಿಸುತ್ತಿರುವ ಜಿವಿಕೆ ಕಂಪೆನಿಯ ಗುತ್ತಿಗೆ ಅವಧಿ ಮುಗಿದು ಒಂದು ವರ್ಷವಾಗಿದೆ. ಆದರೂ ಅನಧಿಕೃತವಾಗಿ ಸೇವೆಯನ್ನು ಮುಂದುವರೆಸಿದ್ದು, ಕೂಡಲೇ ಆ ಕಂಪೆನಿಯ ಸೇವೆಯನ್ನು ಕೂಡಲೇ ನಿಲ್ಲಿಸುವಂತೆ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಒತ್ತಾಯಿಸಿದರು.
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆರೋಗ್ಯ ಕವಚ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ 600 ಮಂದಿ ಕೆಲಸಗಾರರನ್ನು ತೆಗೆಯಲಾಗಿದೆ. ಕೂಡಲೇ ಅವರನ್ನು ಮರು ನೇಮಕ ಮಾಡಿ ಎಂದು ಆಗ್ರಹಿಸಿದರು.
ಜಿವಿಕೆ ಕಂಪೆನಿ ಗುತ್ತಿಗೆ ಅವಧಿ ಮುಗಿದಿದ್ದರೂ ಅನಧಿಕೃತವಾಗಿ ಸೇವೆಯನ್ನು ಮುಂದುವರೆಸಿದ್ದೇಕೆ? ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಹಿಂದೆ ಕ್ರೀಡಾ ಇಲಾಖೆಯಿಂದ ನಾಲ್ಕರಿಂದ ಐದು ಕೋಟಿ ಖರ್ಚು ಮಾಡಿ ಗ್ರಾಮೀಣ ಭಾಗದಲ್ಲಿ ಸಿಂಥೆಟಿಕ್ ಟ್ರ್ಯಾಕ್ಗಳನ್ನು ನಿರ್ಮಿಸಲಾಗಿತ್ತು. ಆದರೆ ಅದನ್ನು ಅಥ್ಲೆಟಿಕ್ಗಳು ಬಳಸಲು ನೀಡುವ ಬದಲಾಗಿ ಹೆಲಿಕಾಪ್ಟರ್ಗಳನ್ನು ನಿಲ್ಲಿಸಲು ಬಳಸಲಾಗುತ್ತಿದೆ. ಆ್ಯಂಬುಲೆನ್ಸ್ ಮತ್ತು ಪೆÇಲೀಸ್ ವಾಹನಗಳು ಅದರ ಮೇಲೆ ನಿಲ್ಲುತ್ತಿವೆ ಇದು ಸರಿಯಲ್ಲ ಅಷ್ಟೊಂದು ಹಣ ಖರ್ಚು ಮಾಡಿ ನಿರ್ಮಿಸಿದ ಸಿಂಥೆಟಿಕ್ ಟ್ರ್ಯಾಕ್ ಸದುಪಯೋಗಪಡಿಸಿಕೊಳ್ಳದಿರುವುದು ಅಕ್ಷಮ್ಯ ಎಂದರು.
ಹೇಮಾವತಿ ಜಲಾಶಯ ತುಂಬಿದ್ದು, ಅದರ ಹಿನ್ನೀರಿನಲ್ಲಿರುವ ಕೆರೆಗಳನ್ನು ತುಂಬಿಸಬೇಕೆಂದು ಆಗ್ರಹಿಸಿದರು.
ಮರಳು ಮಾಫಿಯಾ ಭಾರೀ ಪ್ರಮಾಣದಲ್ಲಿ ಅಸ್ತಿತ್ವದಲ್ಲಿದೆ. ಈ ಪ್ರಕರಣದಲ್ಲಿ ಪ್ರಭಾವಿಗಳನ್ನು ಬಿಟ್ಟು ಟ್ರ್ಯಾಕ್ಟರ್ಗಳನ್ನು ಹೊಂದಿರುವ ಸಣ್ಣ-ಪುಟ್ಟ ಯುವಕರು, ಅಮಾಯಕರನ್ನು ಶಿಕ್ಷಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.