ವಿಜಯ ಮಲ್ಯಗೆ ಸೇರಿದ ಸ್ವತ್ತುಗಳ ಹರಾಜು

ನವದೆಹಲಿ, ಜು.6-ಉದ್ದೇಶಿತ ಸುಸ್ತಿದಾರ ಮತ್ತು ಕಳಂಕಿತ ಉದ್ಯಮಿ ವಿಜಯ ಮಲ್ಯಗೆ ಸೇರಿದ ಭಾರತದಲ್ಲಿನ ಸ್ವತ್ತುಗಳನ್ನು ಹರಾಜು ಹಾಕುವ ಮೂಲಕ 863 ಕೋಟಿ ರೂ.ಗಳನ್ನು ವಸೂಲು ಮಾಡಲಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‍ಬಿಐ) ಇಂದು ತಿಳಿಸಿದೆ. ಮಲ್ಯದಿಂದ ಬಾಕಿ ಬರಬೇಕಾಗಿರುವ ಗರಿಷ್ಠ ಮೊತ್ತವನ್ನು ವಸೂಲಿ ಮಾಡಲು ಇಂಗ್ಲೆಂಡ್ ಅಧಿಕಾರಿಗಳೊಂದಿಗೆ ಬ್ಯಾಂಕುಗಳು ನಿಕಟವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಎಸ್‍ಬಿಐ ವ್ಯವಸ್ಥಾಪಕ ನಿರ್ದೇಶಕ ಅರಿಜಿತ್ ಬಸು ಸುದ್ದಿಗಾರರಿಗೆ ತಿಳಿಸಿದ್ದಾರೆ. ಇಂಗ್ಲೆಂಡ್‍ಗೆ ಪರಾರಿಯಾಗಿರುವ ಮದ್ಯದ ದೊರೆಗೆ ಸೇರಿದ ಸ್ವತ್ತುಗಳನ್ನು ಶೋಧಿಸಲು ಹಾಗೂ ಜಪ್ತಿ ಮಾಡಲು ಬ್ರಿಟಿಷ್ ನ್ಯಾಯಾಲಯವು ಅನುಮತಿ ನೀಡಿದೆ. ಬ್ರಿಟಷ್ ಅಧಿಕಾರಿಗಳೊಂದಿಗೆ ಭಾರತೀಯ ಬ್ಯಾಂಕುಗಳ ಒಕ್ಕೂಟ ನಿಕಟ ಸಂಪರ್ಕ ಹೊಂದಿ ಮಲ್ಯಗೆ ಸೇರಿದ ಆಸ್ತಿ-ಪಾಸ್ತಿಗಳನ್ನು ಗರಿಷ್ಠ ಪ್ರಮಾಣದಲ್ಲಿ ವಶಪಡಿಸಿಕೊಳ್ಳಲಿದೆ ಎಂದು ಅವರು ಹೇಳಿದರು. ಈ ನಿಟ್ಟಿನಲ್ಲಿ ಬ್ರಿಟನ್ ನ್ಯಾಯಾಲಯ ನೀಡಿರುವ ಆದೇಶ ಸ್ವಾಗತಾರ್ಹ. ಇದರಿಂದಾಗಿ ಭಾರತದಲ್ಲಿರುವ ಮಲ್ಯ ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಹಕಾರಿಯಾಗಲಿವೆ ಎಂದು ಬಸು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ