ವ್ಯೆಕ್ತಿಯನ್ನು ಕೊಲೆ ಮಾಡಿ ಪರಾರಿ

ತುಮಕೂರು, ಜು.5-ಅಪರಿಚಿತ ವ್ಯಕ್ತಿಯನ್ನು ದುಷ್ಕರ್ಮಿಗಳು ಇಟ್ಟಿಗೆ ಹಾಗೂ ಪೈಪ್‍ಗಳಿಂದ ಥಳಿಸಿ ಕೊಲೆ ಮಾಡಿ ರೈಲು ಹಳಿ ಮೇಲೆ ಶವವಿಟ್ಟು ಪರಾರಿಯಾಗಿರುವ ಘಟನೆ ನಡೆದಿದೆ.
ಸುಮಾರು 35 ರಿಂದ 40 ವರ್ಷದವರಂತೆ ಕಾಣುವ ಈ ವ್ಯಕ್ತಿ ಹೆಸರು, ವಿಳಾಸ ತಿಳಿದುಬಂದಿಲ್ಲ. ಜಿಲ್ಲೆಯ ಕೆ.ಬಿ.ಕ್ರಾಸ್ ಸಮೀಪದ ಕುಪ್ಪಾಳು ಗ್ರಾಮದ ಬಳಿ ಬೆಳಗಿನ ಜಾವ ವ್ಯಕ್ತಿಯನ್ನು ಕೊಲೆ ಮಾಡಿರುವ ದುಷ್ಕರ್ಮಿಗಳು ರೈಲಿಗೆ ಸಿಕ್ಕಿ ಮೃತಪಟ್ಟಿದ್ದಾರೆಂದು ಬಿಂಬಿಸಲು ಶವವನ್ನು ರೈಲ್ವೆ ಹಳಿ ಮೇಲೆ ಇಟ್ಟು ಪ್ರಕರಣ ಮುಚ್ಚಿಹಾಕಲು ಯತ್ನಿಸಿ ಪರಾರಿಯಾಗಿದ್ದಾರೆ.
ಇಂದು ಮುಂಜಾನೆ ಈ ಮಾರ್ಗದಲ್ಲಿ ಹೋಗುತ್ತಿದ್ದವರು ಹಳಿ ಮೇಲೆ ಶವವಿರುವುದು ಗಮನಿಸಿ ತಕ್ಷಣ ರೈಲ್ವೆ ಪೆÇಲೀಸರಿಗೆ ತಿಳಿಸಿದ್ದಾರೆ. ರೈಲ್ವೆ ಪೆÇಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಶವವನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ. ತಿಪಟೂರು ಡಿವೈಎಸ್ಪಿ ವೇಣುಗೋಪಾಲ್, ಗ್ರಾಮಾಂತರ ವೃತ್ತ ನಿರೀಕ್ಷಕ ಕೃಷ್ಣಕುಮಾರ್ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ