ಪತ್ರಿಕಾ ಛಾಯಾಗ್ರಾಹಕರ ಮೇಲೆ ವಾಗ್ದಾಳಿ

ತುಮಕೂರು, ಜು.5-ತುಮಕೂರು ಮಹಾನಗರ ಪಾಲಿಕೆ ಕಾಪೆರ್Çೀರೇಟರ್ ನಾಗರಾಜ್‍ರಾವ್ ಪತ್ರಿಕಾ ಛಾಯಾಗ್ರಾಹಕರ ಮೇಲೆ ವಾಗ್ದಾಳಿ ಮಾಡಿದ ಘಟನೆ ಇಂದು ನಡೆದಿದೆ. ಕಾಪೆರ್Çೀರೇಟರ್ ನಾಗರಾಜ್ ಮತ್ತು ಅವರ ವಾರ್ಡ್‍ನ ಮಂಜುನಾಥ್ ಎಂಬುವರೊಂದಿಗೆ ನೀರಿನ ಸಂಪರ್ಕ ಕಲ್ಪಿಸುವ ವಿಚಾರವಾಗಿ ಮಾತಿನ ಚಕಮಕಿ ನಡೆಯುತ್ತಿತ್ತು. ನಾನು ಯಾರು? ನಾನೊಬ್ಬ ಕಾಪೆರ್Çೀರೇಟರ್ ನನ್ನ ಬಳಿ ಹೇಗೆ ವರ್ತಿಸಬೇಕು ತಿಳಿದಿರಬೇಕು ಹಾಗೂ ನಾನು ಹೇಳಿದ ಹಾಗೆ ಕೇಳಬೇಕು ಎಂದು ನಾಗರಾಜ್ ದಬಾಯಿಸುತ್ತಿದ್ದರು. ಇದನ್ನು ಸ್ಥಳದಲ್ಲೇ ಇದ್ದ ಪತ್ರಿಕಾ ಛಾಯಾಗ್ರಾಹಕರ ರೇಣುಕಾರಾಧ್ಯ ಭಾವಚಿತ್ರ ಕ್ಲಿಕ್ಕಿಸಿದ್ದಾರೆ. ಇದಕ್ಕೆ ಕೋಪಗೊಂಡ ಕಾಪೆರ್Çೀರೇಟರ್ ಛಾಯಾಗ್ರಾಹಕರನ್ನು ಅಶ್ಲೀಲವಾಗಿ ನಿಂದಿಸಿ ಮಹಾನಗರ ಪಾಲಿಕೆ ಕಚೇರಿ ಮುಂದೆಯೇ ಎಳೆದಾಡಿ ಹಲ್ಲೆಗೆ ಮುಂದಾಗಿದ್ದಾರೆ. ವಿಷಯ ತಿಳಿದ ಪಾಲಿಕೆ ಆಯುಕ್ತರಾದ ಮಂಜುನಾಥ್, ಮೇಯರ್ ಸುದೀಶ್ವರ್ ಅವರು ಸ್ಥಳಕ್ಕೆ ಆಗಮಿಸಿ ನಾಗರಾಜ್ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ತಮ್ಮ ಬಾಯಿಗೆ ಮೊದಲು ಲಗಾಮು ಹಾಕಿ. ನೀವೊಬ್ಬ ಜನಪ್ರತಿನಿಧಿ ಎಂಬುದನ್ನು ಮರೆತಿದ್ದೀರಿ. ನಿಮ್ಮಿಂದ ಬೇರೆ ಸದಸ್ಯರಿಗೂ ಕೆಟ್ಟ ಹೆಸರು ಬರಲಿದೆ ಎಂದು ಸಮಾಧಾನ ಪಡಿಸಿದ್ದಾರೆ. ಈ ಪ್ರಕರಣವನ್ನು ತಾಲೂಕು ಪತ್ರಕರ್ತರು ತೀವ್ರವಾಗಿ ಖಂಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ