ಬೆಂಗಳೂರು, ಜು.5- ಇಂಧನ ಇಲಾಖೆಯನ್ನು ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಪ್ರಸಕ್ತ ಸಾಲಿನಲ್ಲಿ 35 ಉಪ ವಿದ್ಯುತ್ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದು ತಾವು ಮಂಡಿಸಿದ ಚೊಚ್ಚಲ ಬಜೆಟ್ನಲ್ಲಿ ತಿಳಿಸಿದರು.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಮೂಲಕ ಉಪ ಕೇಂದ್ರಗಳ ಸ್ಥಾಪನೆ , 75 ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವುದು, ಬೆಂಗಳೂರು ನಗರದಲ್ಲಿ ಎಲ್ಲ ಓವರ್ಹೆಡ್ ಮಾರ್ಗಗಳನ್ನು ಭೂಗತ ಮಾರ್ಗ (ಅಂಡರ್ಗ್ರೌಂಡ್ ಕೇಬಲ್)ಗಳಾಗಿ ಪರಿವರ್ತಿಸಲು ವಿಸ್ತೃತ ಯೋಜನೆಯನ್ನು ತಯಾರಿಸಿ ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು.