ವಾಣಿಜ್ಯ ತೆರಿಗೆ ವಿಭಾಗೀಯ ಕಚೇರಿಗಳಲ್ಲಿ ಅತ್ಯಾಧುನಿಕ ಸ್ವಯಂಚಾಲಿತ ಸರಕು ಮತ್ತು ಸೇವಾ ತೆರಿಗೆ ಸಹಾಯ ಪೀಠ

 

ಬೆಂಗಳೂರು, ಜು.5- ವಾಣಿಜ್ಯ ತೆರಿಗೆ ವಿಭಾಗೀಯ ಕಚೇರಿಗಳಲ್ಲಿ ಅತ್ಯಾಧುನಿಕ ಸ್ವಯಂಚಾಲಿತ ಸರಕು ಮತ್ತು ಸೇವಾ ತೆರಿಗೆ ಸಹಾಯ ಪೀಠ ತೆರೆಯಲು ಸಮ್ಮಿಶ್ರ ಸರ್ಕಾರ ಸಮ್ಮತಿಸಿದೆ.
ಪ್ರಸ್ತುತ ವಾಣಿಜ್ಯ ತೆರಿಗೆ ಆಯುಕ್ತರ ಕಚೇರಿಗಳಲ್ಲಿ ಮಾತ್ರ ಇಂತಹ ಸಹಾಯಪೀಠವಿದ್ದು, ಈ ಪೀಠಗಳನ್ನು ವಿಭಾಗೀಯ ಕಚೇರಿಗಳಿಗೂ ವಿಸ್ತರಿಸಲು ತೀರ್ಮಾನಿಸಲಾಗಿದೆ.
ಅದೇ ರೀತಿ ವಾಣಿಜ್ಯ ತೆರಿಗೆ ಅಧಿಕಾರಿಗಳಿಗೆ ಸರಕು ಮತ್ತು ಸೇವಾ ತೆರಿಗೆ ಅನುಷ್ಠಾನದಲ್ಲಿ ಅನುಭವ ಹೊಂದಿರುವ ದೇಶಗಳಲ್ಲಿ ಸೂಕ್ತ ತರಬೇತಿ ಕೊಡಿಸಲು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.
ಅಕ್ಟೋಬರ್ 30ರೊಳಗೆ ವಾಣಿಜ್ಯೋದ್ಯಮಿಗಳು ತಮ್ಮ ಕೇಂದ್ರ ಮಾರಾಟ ತೆರಿಗೆ ಬಾಧ್ಯತೆಗಳನ್ನು ಪಾವತಿಸಿದರೆ ಅಂತಹವರಿಗೆ ಶೇ.100ರಷ್ಟು ದಂಡ ಮತ್ತು ಬಡ್ಡಿಯನ್ನು ಮನ್ನಾ ಮಾಡುವ ಕರ ಸಮಾಧಾನ ಯೋಜನೆಯನ್ನು ಜಾರಿಗೆ ತರುವ ವಿಚಾರ ಬಜೆಟ್‍ನಲ್ಲಿ ಪ್ರಸ್ತಾಪವಾಗಿದೆ.
ಕರ್ನಾಟಕ ಮೇಲ್ಮನವಿ ನ್ಯಾಯಾಧಿಕರಣವು ಮೇಲ್ಮನವಿಯನ್ನು ವಿಲೇವಾರಿ ಮಾಡಲು ಇರುವ ಅವಧಿಯನ್ನು ಒಂದು ವರ್ಷದಿಂದ ಮೂರು ವರ್ಷಗಳಿಗೆ ವಿಸ್ತರಿಸಲು ತೀರ್ಮಾನಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ