ಬೆಂಗಳೂರು, ಜು.5- ನಗರದ ವಾಹನ ದಟ್ಟಣೆಯನ್ನು ಸುಧಾರಿಸುವಲ್ಲಿ ಮೆಟ್ರೋ ರೈಲು ಸಂಚಾರ ಸಹಕಾರಿಯಾಗಿರುವುದನ್ನು ಮನಸ್ಸಿನಲ್ಲಿಟ್ಟುಕೊಂಡು ರೈಲು ಸಂಚಾರವನ್ನು ವಿಸ್ತರಿಸಲು ಬಜೆಟ್ನಲ್ಲಿ ಆದ್ಯತೆ ನೀಡಲಾಗಿದೆ.
ನಮ್ಮ ಮೆಟ್ರೋ ರೈಲು ಯೋಜನೆಯ ಹಂತ-3ರಲ್ಲಿ ಜೆಪಿ ನಗರದಿಂದ ಕೆಆರ್ ಪುರಂವರೆಗಿನ 42.75ಕಿಮೀ, ಟೋಲ್ಗೇಟ್ನಿಂದ ಕಡಬಗೆರೆವರೆಗಿನ 12.5ಕಿಮೀ, ಗೊಟ್ಟಿಗೆರೆಯಿಂದ ಬಸವನಪುರವರೆಗಿನ 3.07ಕಿಮೀ, ಆರ್ಕೆ ಹೆಗಡೆ ನಗರದಿಂದ ಏರೋಸ್ಪೇಸ್ ಪಾರ್ಕ್ವರೆಗಿನ 18.95ಕಿಮೀವರೆಗೆ ವಿಸ್ತರಿಸಲು ತೀರ್ಮಾನಿಸಲಾಗಿದೆ.
ಅದೇ ರೀತಿ ಕೋಗಿಲು ಕ್ರಾಸ್ನಿಂದ ರಾಜಾನುಕುಂಟೆವರೆಗೆ, ಇಬ್ಬಲೂರಿನಿಂದ ಕರ್ಮಲ್ರಾಮ್ವರೆಗೆ ರೈಲು ಸಂಚಾರವನ್ನು ವಿಸ್ತರಿಸುವುದರ ಜತೆಗೆ ಒಟ್ಟಾರೆ ಮೂರನೆ ಹಂತದ ಯೋಜನೆಯಲ್ಲಿ 95ಕಿಮೀವರೆಗೂ ಮೆಟ್ರೋ ರೈಲು ಸಂಚಾರವನ್ನು ವಿಸ್ತರಿಸಲು ಅಧ್ಯಯನ ನಡೆಸಲಾಗುತ್ತಿದೆ.