ಬಜೆಟ್ ನಲ್ಲಿ ನಿಮ್ಮ ಜಿಲ್ಲೆಗೆ ಸಿಕ್ಕಿದ್ದೇನು… ಇಲ್ಲಿ ನೋಡಿ

ಬೆಂಗಳೂರು: ರಾಜ್ಯ ಬಜೆಟ್ ನಲ್ಲಿ ಯಾವೆಲ್ಲಾ ಜಿಲ್ಲೆಗಳಿಗೆ ಏನೆಲ್ಲಾ ಸಿಕ್ಕಿದೆ. ಯಾವೆಲ್ಲಾ ಯೋಜನೆಗಳು ಮಂಜೂರಾಗಿವೆ ಎಂಬುವುದರ ಜಿಲ್ಲಾವಾರು ವರದಿ ಇಲ್ಲಿದೆ.

ಬೆಂಗಳೂರು 

*ಮಹಾನಗರ ಸಾರಿಗೆ ಸಂಸ್ಥೆಗೆ 100 ಕೋಟಿ ರೂ. ಮೀಸಲು

*ಬೆಳ್ಳಂದೂರು ಕೆರೆ ಪುನಶ್ಚೇತನಕ್ಕೆ 50 ಕೋಟಿ ರೂ. ಮೀಸಲು

*ಬೆಂಗಳೂರಲ್ಲಿ ಆರು ಎಲಿವೇಟೆಡ್ ಕಾರಿಡಾರ್ ನಿರ್ಮಾಣ

*ಬೆಂಗಳೂರು ಬಾರ್ ಕೌನ್ಸಿಲ್ ಗೆ 5 ಕೋಟಿ ರೂ. ನಿಗದಿ

*ಪೀಣ್ಯ ಕೈಗಾರಿಕಾ ವಲಯದಲ್ಲಿ ರಾಸಾಯನಿಕ ತ್ಯಾಜ್ಯ ಶುದ್ಧೀಕರಣ ಘಟಕ ನಿರ್ಮಾಣಕ್ಕೆ 10 ಕೋಟಿ

*ತಲಘಟ್ಟಪುರದ ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಪುನಶ್ಚೇತನ ಕ್ಕೆ 5 ‌ಕೋಟಿ ರೂ.

ಹಾಸನ 

*ಹಾಸನ ನಗರಕ್ಕೆ 30 ಕೋಟಿ ರೂ. ವೆಚ್ಚದಲ್ಲಿ ರಿಂಗ್​ರೋಡ್

*ಹಾಸನ ಹಾಲು ಒಕ್ಕೂಟಕ್ಕೆ 50 ಕೋಟಿ ರೂ. ಮೀಸಲು

*ಬೇಲೂರು, ಹಂಪಿ, ಹಳೆಬೀಡಿನಲ್ಲಿ ಬೇರೆ ಬೇರೆ ಭಾಷೆಯಲ್ಲಿ ಗೈಡ್​ಗಳಿಗೆ ತರಬೇತಿ ನೀಡಲು ತರಬೇತಿ ಕೇಂದ್ರ ಸ್ಥಾಪನೆ

*ಹೇಮಾವತಿ ನದಿಯಿಂದ ಹಾಸನದ ದುದ್ಧ ಮತ್ತು ಶಾಂತಿಗ್ರಾಮ ಹೋಬಳಿ ವ್ಯಾಪ್ತಿಯಲ್ಲಿ 160 ಕೆರೆಗೆ ಕುಡಿಯುವ ನೀರು ತುಂಬಿಸಲು 70 ಕೋಟಿ ರೂ. ಅನುದಾನ

ರಾಮನಗರ

*ರಾಮನಗರದಲ್ಲಿ 40 ಕೋಟಿ ರೂ. ವೆಚ್ಚದಲ್ಲಿ ಸೂಪರ್ ಸ್ಪಷಾಲಿಟಿ ಆಸ್ಪತ್ರೆ

*ರಾಮನಗರದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಚಲನಚಿತ್ರ ವಿಶ್ವವಿದ್ಯಾಲಯ ತೆರೆಯಲು 30 ಕೋಟಿ ರೂ. ಮೀಸಲು

*ರಾಮನಗರ ಫಿಲ್ಮಸಿಟಿಗೆ 40 ಕೋಟಿ ರೂ ಮೀಸಲು

*ಚನ್ನಪಟ್ಟಣದ ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮದ ಪುನಶ್ಚೇತನಕ್ಕೆ 5 ಕೋಟಿ ರೂ.

*ಕನಕಪುರಕ್ಕೆ ಹೊಸ ವೈದ್ಯಕೀಯ ಕಾಲೇಜು

ಮಂಡ್ಯ 

*ಮಂಡ್ಯ ವೈದ್ಯಕೀಯ ಕಾಲೇಜು ಅಭಿವೃದ್ಧಿಗೆ 30 ಕೋಟಿ ರೂ. ಮೀಸಲು

*ಮಂಡ್ಯ ನಗರದ ಸರ್ವತೋಮುಖ ಅಭಿವೃದ್ಧಿಗೆ 50 ಕೋಟಿ ರೂ. ವಿಶೇಷ ಪ್ಯಾಕೇಜ್

ಮೈಸೂರು 

*ಮೈಸೂರು ಹಾಗೂ ಮಾರ್ಗ ಮಧ್ಯೆ 92 ಹಳ್ಳಿಗಳ ಕುಡಿಯುವ ನೀರಿಗೆ 50 ಕೋಟಿ ರೂ. ಮೀಸಲು

*ಕೃಷ್ಣರಾಜಸಾಗರ ಆಣೆಕಟ್ಟೆ ಬೃಂದಾವನ ಉದ್ಯಾನ ಅಭಿವೃದ್ಧಿ ಗೆ 5  ಕೋಟಿ ರೂ.

*3 ಕೋಟಿ ರೂ. ವೆಚ್ಚದಲ್ಲಿ ಮೈಸೂರಿನ ಲ್ಲಿ ರೇಷ್ಮೆ ಗೂಡು ಮಾರುಕಟ್ಟೆ ಸ್ಥಾಪನೆ

ಧಾರವಾಡ 

*ಧಾರವಾಡ  ಕೃಷಿ ವಿವಿಗೆ 3 ಕೋಟಿ ರೂ.

ತುಮಕೂರು

*ತುಮಕೂರಿನಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ವಿವಿ ಸ್ಥಾಪನೆ

*ಬೆಳಗಾವಿ, ಕಲಬುರಗಿ, ಮೈಸೂರಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ