ನವದೆಹಲಿ: ಆಸ್ಟ್ರಿಯಾದಲ್ಲಿ ನಡೆದ ’ಐರನ್ ಮ್ಯಾನ್’ ಸ್ಪರ್ಧೆಯಲ್ಲಿ ವಿಜೇತರಾದ ಭಾರತೀಯ ಸೇನೆಯ ಮೇಜರ್ ಜನರಲ್ ವಿ.ಡಿ. ದೋಗ್ರಾ ಅವರಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಭಿನಂದನೆ ಸಲ್ಲಿಸಿದ್ದಾರೆ,
ದೋಗ್ರಾ ಎಲ್ಲಾ ಭಾರತೀಯರಿಗೆ ಸ್ಪೂರ್ತಿಯಾಗಿದ್ದಾರೆ ಎಂದಿರುವ ರಾಹುಲ್ ಐರನ್ ಮ್ಯಾನ್ ಕಠಿಣ ಟ್ರೈಯಾಥ್ಲಾನ್ ಸ್ಪರ್ಧೆಯಲ್ಲಿ ಪಾಲ್ಗೊಂಡು ಯಶಸ್ವಿಯಾಗುವುದು ಅತ್ಯುತ್ತಮವಾದ ಶಕ್ತಿ, ಶಿಸ್ತು ಹಾಗೂ ಕಠಿಣ ಪರಿಶ್ರಮವನ್ನು ತೋರುತ್ತದೆ.3.8 ಕಿಮೀ ಈಜು, 180 ಕಿಮೀ ಸೈಕ್ಲಿಂಗ್ ಹಾಗು 42.2 ಕಿ.ಮೀ ರನ್ನಿಂಗ್ ಅನ್ನು ಕೇವಲ 14 ಗಂಟೆಗಳಲ್ಲಿ ಮೇಜರ್ ದೋಗ್ರಾ ಪೂರ್ಣಗೊಳಿಸಿದ್ದಾರೆ. ಅವರು ಭಾರತೀಯರಿಗೆಲ್ಲ ರೋಲ್ ಮಾಡಲ್ ಆಗಿದ್ದಾರೆ.ನಾನು ಅವರನ್ನು ಅಭಿನಂದಿಸುತ್ತೇನೆ” ಅವರು ಟ್ವೀಟ್ ಮಾಡಿದ್ದಾರೆ.
ಆಸ್ಟ್ರಿಯಾದಲ್ಲಿ ಜುಲೈ 1ರಂದು ನಡೆದಿದ್ದ ಐರನ್ ಮ್ಯಾನ್ ಕಠಿಣ ಸ್ಪರ್ಧೆಅಲ್ಲಿ ಭಾರತದ ಮೇಜರ್ ಜನರಲ್ ದೋಗ್ರಾ ವಿಜೇತರಾಗಿದ್ದರು. ಇದರೊಡನೆ ಐರನ್ ಮ್ಯಾನ್ ಟ್ರೈಯಾಥ್ಲಾನ್ ಪೂರೈಸಿದ ವಿಶ್ವರ ಮೊದಲ ಮೇಜರ್ ಜನರಲ್ ಇವರಾಗಿದ್ದಾರೆ.
ಭಾರತೀಯ ಸೇನಾಧಿಕಾರಿಗಳಲಿ ಇದೇ ಮೊದಲ ಬಾರಿಗೆ ಇಂತಹಾ ಸಾಧನೆ ಮಾಡಿದ ವ್ಯಕ್ತಿ ದೋಗ್ರಾ ಅವರಾಗಿದ್ದು ಅಂತರಾಷ್ಟ್ರೀಯ ಮಟ್ಟದ ಈಜು, ಸೈಕ್ಲಿಂಗ್ ಹಾಗೂ ಸುದೀರ್ಘ ಓಟದ ಸ್ಪರ್ಧೆಯಲ್ಲಿ ಇವರು ಮೊದಲಿಗರಾಗಿ ಮಿಂಚಿದ್ದಾರೆ.
ದೋಗ್ರಾ ಕೇವಲ 14ಗಂಟೆ 21ನಿಮಿಷಗಳಲ್ಲಿ ಈ ಕಠಿಣ ಸ್ಪರ್ಧೆಗಳನ್ನು ಮುಗಿಸಿದ್ದಾರೆ. ಸ್ಪರ್ಧೆಯಲ್ಲಿ ಒಟ್ಟು 3 ಸಾವಿರ ಕ್ರೀಡಾಳುಗಳು ಭಾಗವಹಿಸಿದ್ದು ದೋಗ್ರಾ ಅವರನ್ನೆಲ್ಲಾ ಹಿಂದಿಕ್ಕಿ ಐರನ್ ಮ್ಯಾನ್ ಪಟ್ಟ ಗಿಟ್ಟಿಸಿಕೊಂಡಿದ್ದಾರೆ.
ವಿ.ಡಿ. ದೋಗ್ರಾ 1981ನೇ ಬ್ಯಾಚ್ ಗೋಲ್ಡ್ ಮೆಡಲಿಸ್ಟ್ ಅಧಿಕಾರಿಯಾಗಿದ್ದಾರೆ.