ಸಂತ ಶಿಶುನಾಳ ಷರೀಪರ 200ನೇ ಜನ್ಮ ಶತಮಾನೋತ್ಸವ

ಬೆಂಗಳೂರು: ನಗರದ ರವೀಂದ್ರ ಕಲಾಭವನದಲ್ಲಿ ಸಂತ ಶಿಶುನಾಳ ಷರೀಪ ಮತ್ತು ಗುರು ಗೋವಿಂದ ಭಟ್ಟ ಪ್ರತಿಷ್ಟಾನ ಆಯೋಜಿಸಿದ ತತ್ವ ರಸಾಯನ ಕಾರ್ಯಕ್ರಮವನ್ನು ಮಾಜಿ ಪ್ರಧಾನಿ ದೇವೆಗೌಡರವರು ಉದ್ಘಾಟಿಸಿದರು. ರಾಮಾ ಜೋಯಿಷರವರು ಅಧ್ಯಕ್ಷತೆಯನ್ನು ವಹಿಸಿದ್ದರು. ಹಾಗೂ ಕಾರ್ಯಕ್ರಮದಲ್ಲಿ ಉಡುಪಿಯ ವಿಶ್ವೇಶ್ವೆರ ಸ್ವಾಮಿಗಳು, ಹುಕ್ಕೇರಿಯ ಶ್ರೀಗಳು, ಮಾಜಿ ಸಚಿವ ಎಚ್. ಕೆ. ಪಾಟೀಲ್ ಸೇರಿದಂತೆ ವಿವಿದ ಧರ್ಮಗಳ ಗುರುಗಳು ಭಾಗಿಯಾಗಿದ್ದರು.
ನಾಡೋಜ ಮಹೇಶ್ ಜೋಷಿ ನೇತೃತ್ವದಲ್ಲಿ ವಿವಿದ ಕಲಾ ತಂಡಗಳಿಂದ ನೃತ್ಯ, ಷರೀಪರ ಗೀತಗಾಯನ ಕಾರ್ಯಕ್ರಮ ನೆಡೆಯಿತು. ಮಾಜಿ ಪ್ರಧಾನಿ ದೇವೆಗೌಡರು ಮಾತನಾಡಿ ಇದು ರಾಷ್ಟ್ರೀಯ ಭಾವೈಕ್ಯತೆಯ ಸಂಕೇತವಾಗಿದೆ. ಕರ್ನಾಟಕದ ಕಬೀರ ಎಂದು ಖ್ಯಾತರಾದ ಷರೀಪರು ಮತ್ತು ಗೋವಿಂದ ಭಟ್ಟರು ಇಂದಿನ ಯುವ ಜನತೆಗೆ ಮತ್ತು ಸಮಾಜಕ್ಕೆ ದಾರಿದೀಪವಾಗಿದ್ದಾರೆ ಎಂದು ಹೇಳಿದರು. ಸಾನಿದ್ಯ ವಹಿಸಿದ ವಿಶ್ವೇಶ್ವೆರ ಸ್ವಾಮಿಗಳು ಮಾತನಾಡಿ ತಮಗೆ ಭಯೋತ್ಪಾದನೆ ಬೇಡ, ದಯೋತ್ಪಾದನೆ ಬೇಕು ಎಂದು ಹೇಳಿದರು. ಇಬ್ಬರು ಐತಿಹಾಸಿಕ ಪುರುಷರಾಗಿದ್ದು ಭಾರತ ಪರಂಪರೆಯ ಪ್ರತೀಕವಾಗಿದ್ದಾರೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ