‘ಅಸಮರ್ಥ’ ಎಂದ ಐಒಎ: ಏಷ್ಯನ್ ಗೇಮ್ಸ್ 2018ರಲ್ಲಿ ಪಾಲ್ಗೊಳ್ಳದಿರಲು ಭಾರತ ಫುಟ್ಬಾಲ್ ತಂಡಗಳ ನಿರ್ಧಾರ

ವದೆಹಲಿ: ಭಾರತ ಫುಟ್ಬಾಲ್ ತಂಡ ಕೇವಲ ಸ್ಪರ್ಧೆಗಾಗಿ ಕೂಟದಲ್ಲಿ ಪಾಲ್ಗೊಳ್ಳುತ್ತಿದ್ದು, ಪದಕ ಗೆಲ್ಲುವುದಕ್ಕಾಗಿ ಅಲ್ಲ ಎಂದು ಭಾರತೀಯ ಒಲಿಂಪಿಕ್ಸ್ ಸಂಸ್ಥೆ(ಐಒಎ) ಹೇಳಿದ್ದು ಈ ಹಿನ್ನೆಲೆಯಲ್ಲಿ 2018ರ ಏಷ್ಯನ್ ಗೇಮ್ಸ್ ನಲ್ಲಿ ಪಾಲ್ಗೊಳ್ಳದಿರಲು ಭಾರತ ಫುಟ್ಬಾಲ್ ತಂಡಗಳು ನಿರ್ಧರಿಸಿವೆ.
ಐಒಎನ ಈ ಹೇಳಿಕೆಯಿಂದ 2019ರಲ್ಲಿ ನಡೆಯಲಿರುವ ಏಷ್ಯಾ ಕಪ್ ಫುಟ್ಬಾಲ್ ಟೂರ್ನಿಯ ಪೂರ್ವ ತಯಾರಿಗಾಗಿ ಏಷ್ಯನ್ ಗೇಮ್ಸ್ ನಲ್ಲಿ ಪಾಲ್ಗೊಳ್ಳಲು ಸಿದ್ಥತೆ ನಡೆಸುತ್ತಿದ್ದ ಭಾರತೀಯ ಫುಟ್ಬಾಲ್ ತಂಡಕ್ಕೆ ಈ ನಿರ್ಧಾರ ತೃಪ್ತಿ ತಂದಿಲ್ಲ.
ಭಾರತ ಪುರುಷ ಮತ್ತು ಮಹಿಳಾ ಫುಟ್ಬಾಲ್ ತಂಡ ಈ ಎರಡರಲ್ಲಿ ಯಾವ ತಂಡ ಅಸಮರ್ಥ ಎಂದು ಐಒಎ ಸ್ಪಷ್ಟನೆ ನೀಡದೆ ಇರುವುದು ಗೊಂದಲಕ್ಕೆ ಕಾರಣವಾಗಿದೆ.
ಭಾರತ ತಂಡ ಇತ್ತೀಚಿನ ದಿನಗಳಲ್ಲಿ ಫಿಫಾ ಶ್ರೇಯಾಂಕದಲ್ಲಿ ಉತ್ತಮ ನಿರ್ವಹಣೆ ತೋರಿದೆ. 173ನೇ ಶ್ರೇಯಾಂಕದಿಂದ 97ನೇ ಶ್ರೇಯಾಂಕವನ್ನು ಪಡೆದಿದೆ. ಜತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹ ಪ್ರದರ್ಶನ ನೀಡಿದೆ. ಫುಟ್ಬಾಲ್ ಬೆಳೆಯಬೇಕಾದ ಹಂತದಲ್ಲಿರುವಾಗ ಐಒಎನ ಇಂತಹದೊಂದು ನಿರ್ಧಾರ ತೆಗೆದುಕೊಂಡಿರುವುದು ಟೀಕೆಗೆ ಕಾರಣವಾಗಿದೆ.
ತಂಡ ವಿಭಾಗದಲ್ಲಿ ಅಗ್ರ 8 ಶ್ರೇಯಾಂಕ ಹೊಂದಿರುವ ತಂಡಗಳಿಗೆ ಮಾತ್ರ ಏಷ್ಯನ್ ಗೇಮ್ಸ್ ಗೆ ಅರ್ಹತೆ ಎಂದು ಐಒಎ ನಿರ್ಧಾರ ತೆಗೆದುಕೊಂಡಿದೆ. ಈ ನಿಯಮದಿಂದಾಗಿ ಬಾರತ ಫುಟ್ಬಾಲ್ ತಂಡಕ್ಕೆ ಭಾಗವಹಿಸಲು ಸಾಧ್ಯವಾಗುವುದಿಲ್ಲ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ