ಕಾಂಪೌಂಡ್ ಕುಸಿದು ವ್ಯಕ್ತಿ ಸಾವು

ಥಾಣೆ, ಜು.3- ಭಾರೀ ಮಳೆಯ ಕಾರಣ ವಸತಿ ಸಮುಚ್ಛಯದ ಕಾಂಪೌಂಡ್ ಕುಸಿದ ಪರಿಣಾಮ ವ್ಯಕ್ತಿಯೊಬ್ಬ ಸಾವನ್ನಪ್ಪಿ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಲ್ಲಿ ನಡೆದಿದೆ. ಪತಿಪಡ ಬಳಿ ಸುಮಾರು 30 ಅಡಿ ಎತ್ತರದ ಗೋಡೆ ಹಿಂದೆ ಇದ್ದ ಮನೆಗಳ ಮೇಲೆ ಮಧ್ಯರಾತ್ರಿ ಕುಸಿದಿದೆ. ಪ್ರಕಾಶ್ ಶಾಕಾರಾಮ್ ಎಂಬಾತ ಮೃತಪಟ್ಟಿದ್ದು , 29 ವರ್ಷದ ಮಹಿಳೆ ಹಾಗೂ 10 ವರ್ಷದ ಬಾಲಕನನ್ನು ರಕ್ಷಿಸಿ ಕಲ್ವ ಬಳಿಯ ಮಹಾರಾಜ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಘಟನೆಯಲ್ಲಿ ಒಟ್ಟು ನಾಲ್ಕು ಮನೆಗಳು ಹಾನಿಗೊಂಡಿದೆ ಎಂದು ಥಾಣೆ ಮಹಾನಗರ ಪಾಲಿಕೆಯ ಪ್ರಕೃತಿ ನಿರ್ವಹಣಾ ಕೇಂದ್ರ ಮುಖ್ಯಸ್ಥ ಸಂತೋಷ್ ಕದಂ ತಿಳಿಸಿದ್ದಾರೆ. ರೈಲು ರದ್ದು: ಪಶ್ಚಿಮ ಮುಂಬೈನ ಸಬ್ ಅರ್ಬನ್ ರೈಲು ಸೇವೆ ತಾತ್ಕಾಲಿಕ ರದ್ದುಗೊಂಡಿದೆ. ಅಂದೇರಿ ರೈಲು ನಿಲ್ದಾಣದ ಬಳಿ ಪಾದಚಾರಿ ಮಾರ್ಗದ ಸೇತುವೆ ಕುಸಿದು ಬಿದ್ದ ಕಾರಣ ರೈಲು ಸೇವೆ ವ್ಯತ್ಯಯಗೊಂಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ