ಆರ್ಚ್ ಬಿಷಪ್ ಫಿಲಿಪ್ ವಿಲ್ಸನ್ ಗೆ 1 ವರ್ಷ ಜೈಲು ಶಿಕ್ಷೆ

ಕ್ಯಾನ್ಬೆರಾ:ಜು-೩: ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ್ದ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದ್ದ ಆರ್ಚ್ ಬಿಷಪ್ ಗೆ 1 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

1970 ರ ಪ್ರಕರಣದಲ್ಲಿ ಈಗ ಆರ್ಚ್ ಬಿಷಪ್ ಆಗಿರುವ ಫಿಲಿಪ್ ವಿಲ್ಸನ್ ಗೆ ಶಿಕ್ಷೆ ನೀಡಲಾಗಿದ್ದು, ಅಪರಾಧ ಪ್ರಕರಣವೊಂದರಲ್ಲಿ ಶಿಕ್ಷೆಗೊಳಗಾದ ಜಗತ್ತಿನ ಅತಿ ಹಿರಿಯ ಕ್ಯಾಥೋಲಿಕ್ ಇವರಾಗಿದ್ದಾರೆ.

ನ್ಯೂ ಸೌತ್ ವೇಲ್ಸ್ ನಲ್ಲಿ ಶಿಶುಕಾಮಿ ಪಾದ್ರಿ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಪ್ರಕರಣವನ್ನು ಮುಚ್ಚಿ ಹಾಕಲು ಸಹಾಯ ಮಾಡಿದ್ದ ಆರ್ಚ್ ಬಿಷಪ್ ನ ಅಪರಾಧ ಜೂನ್ ನಲ್ಲಿ ಸಾಬೀತಾಗಿತ್ತು. ಕೋರ್ಟ್ ಈಗ ಶಿಕ್ಷೆ ಪ್ರಮಾಣ ಪ್ರಕಟಿಸಿದ್ದು, 1 ವರ್ಷಗಳ ಕಾಲ ಗೃಹ ಬಂಧನದಲ್ಲಿರಿಸುವಂತೆ ಸೂಚನೆ ನೀಡಿದೆ.

ಅಪರಾಧಿ ಎಂದು ಸಾಬೀತಾದ ನಂತರವೂ ಆರ್ಚ್ ಬಿಷಪ್ ಪಶ್ಚಾತ್ತಾಪ ವ್ಯಕ್ತಪಡಿಸಿಲ್ಲ ಎಂದು ಕೋರ್ಟ್ ಹೇಳಿದ್ದು, 6 ತಿಂಗಳ ನಂತರ ಆರ್ಚ್ ಬಿಷಪ್ ಪೆರೋಲ್ ಮೇಲೆ ಹೊರಬರಲು ಅವಕಾಶವಿದೆ ಎಂದು ತಿಳಿಸಿದೆ. ಇಷ್ಟೆಲ್ಲಾ ಆದರೂ ಸಹ ಆರ್ಚ್ ಬಿಷಪ್ ತಮ್ಮ ಪದವಿಯಲ್ಲೇ ಮುಂದುವರೆದಿದ್ದಾರೆ.

Australian Archbishop, Sentenced for Covering Up, Child Sexual Abuse

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ