ಮಾಸ್ಕೊ: ಫಿಫಾ ವಿಶ್ವ ಫುಟ್ಬಾಲ್ ಟೂರ್ನಿಯಲ್ಲಿ ನಿನ್ನೆ ನಡೆದ ಪೆನಾಲ್ಟಿ ಶೂಟೌಟ್ ನಲ್ಲಿ ಕ್ರೊಯೇಶಿಯಾ ತಂಡ ಡೆನ್ಮಾರ್ಕ್ ನ್ನು ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಕೇವಲ 58 ನಿಮಿಷಗಳ ನಂತರ ಡೆನ್ಮಾರ್ಕ್ ನ ಮಾತಿಯಸ್ ಜೊರ್ಗೆನ್ಸನ್ ಡೆನ್ಮಾರ್ಕ್ ತಂಡಕ್ಕೆ ಮುಂಚೂಣಿ ನೀಡಿದ್ದರು. ಆದರೆ 4ನೇ ನಿಮಿಷದಲ್ಲಿ ಕ್ರೊಯೇಶಿಯಾ ತಂಡದ ಮರಿಯೊ ಮಂಡ್ಸುಕಿಕ್ ಸಮತೋಲನ ಸಾಧಿಸಿ ಹೆಚ್ಚುವರಿ ಸಮಯದಲ್ಲಿ ಎರಡೂ ತಂಡಗಳು 1-1ರ ಸಮಬಲ ಸಾಧಿಸಿದ್ದವು.ಕೊನೆಗೆ ನಾಟಕೀಯವಾಗಿ ನಡೆದ ಪೆನಾಲ್ಟಿ ಶೂಟೌಟ್ ನಲ್ಲಿ ದನಿಜೆಲ್ ಸುಬಾಸಿಕ್ 3 ಸ್ಪಾಟ್ ಕಿಕ್ ಗಳನ್ನು ಕಾಪಾಡಿದ್ದರಿಂದ ಕ್ರೊಯೇಶಿಯಾ 3-2ರ ಅಂತರದಲ್ಲಿ ಡೆನ್ಮಾರ್ಕ್ ನ್ನು ಮಣಿಸಿ ಕ್ವಾರ್ಟಲ್ ಫೈನಲ್ ಹಂತ ಪ್ರವೇಶಿಸಿತು.ಕಳೆದ ವಿಶ್ವಕಪ್ ನ ಗ್ರೂಪ್ ಡಿ ಪಂದ್ಯಕ್ಕಿಂತ ಈ ಬಾರಿ ನಾಕೌಟ್ ಪಂದ್ಯಕ್ಕೆ ಡೆನ್ಮಾರ್ಕ್ ವಿರುದ್ಧ ಕ್ರೊಯೇಶಿಯಾ 9 ಬದಲಾವಣೆಗಳನ್ನು ಮಾಡಿಕೊಂಡಿತ್ತು. ಇದರಿಂದಾಗಿ ಆಕರ್ಷಕವಾಗಿ ಆಡಿ ಅರ್ಜೆಂಟೀನಾ ತಂಡವನ್ನು 3-0 ಅಂತರಗಳಿಂದ ಮಣಿಸಿತ್ತು.10 ದಿನಗಳ ಹಿಂದೆ ಅರ್ಜೆಂಟೀನಾ ತಂಡದ ಜೊತೆ ಆಡಿ ಮಣಿಸಿದ ನಿಝ್ನಿ ನೊವ್ಗೊರೊಡ್ ಮೈದಾನದಲ್ಲಿಯೇ ಡೆನ್ಮಾರ್ಕ್ ತಂಡದ ವಿರುದ್ಧ ಕೂಡ ಆಡಿತ್ತು. ನಿನ್ನೆಯ ಪಂದ್ಯದಲ್ಲಿ ಕ್ರೊಯೇಶಿಯಾದ ರಿಯಲ್ ಮಾಡ್ರಿಡ್ ಮೊಡ್ರಿಕ್ ಮತ್ತು ಡೆನ್ಮಾರ್ಕ್ ತಂಡದ ಕ್ರಿಸ್ಟಿಯನ್ ಎರಿಕ್ಸನ್ ಆಟ ನೋಡಲು ಸೊಗಸಾಗಿತ್ತು.
Related Articles
2018ರ ಫಿಫಾ ವಿಶ್ವಕಪ್: ಜಪಾನ್ ಮಣಿಸಿ ಕ್ವಾರ್ಟರ್ ಫೈನಲ್ಗೆ ಬೆಲ್ಜಿಯಂ ಲಗ್ಗೆ
July 3, 2018
VD
ಕ್ರೀಡೆ
Comments Off on 2018ರ ಫಿಫಾ ವಿಶ್ವಕಪ್: ಜಪಾನ್ ಮಣಿಸಿ ಕ್ವಾರ್ಟರ್ ಫೈನಲ್ಗೆ ಬೆಲ್ಜಿಯಂ ಲಗ್ಗೆ
Seen By: 78 ಮಾಸ್ಕೋ(ರಷ್ಯಾ): ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಜಿದ್ದಾ ಜಿದ್ದಿನ ಹೋರಾಟಗಳು ನಡೆಯುತ್ತಿದ್ದು ಕ್ವಾರ್ಟರ್ ಫೈನಲ್ ಗೆ ಎಂಟ್ರಿ ಕೊಡಲು ತಂಡಗಳು ಕಸರತ್ತು ನಡೆಸಿವೆ. ನಿನ್ನೆ [more]
ಫಿಫಾ ವಿಶ್ವಕಪ್ 2018: ಇತಿಹಾಸ ನಿರ್ಮಿಸಿದ ತಮಿಳುನಾಡಿನ 11 ವರ್ಷದ ಬಾಲಕಿ
June 23, 2018
VD
ಕ್ರೀಡೆ
Comments Off on ಫಿಫಾ ವಿಶ್ವಕಪ್ 2018: ಇತಿಹಾಸ ನಿರ್ಮಿಸಿದ ತಮಿಳುನಾಡಿನ 11 ವರ್ಷದ ಬಾಲಕಿ
Seen By: 260 ಸೋಚಿ: ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ 2018ರಲ್ಲಿ ತಮಿಳುನಾಡಿನ 11 ವರ್ಷದ ಬಾಲಕಿಯೊಬ್ಬಳು ಇತಿಹಾಸ ನಿರ್ಮಿಸಿದ್ದಾಳೆ. ತಮಿಳುನಾಡಿನ ಬಾಲಕಿ ನಥಾನಿಕಾ ಜಾನ್ ಕೆ [more]
ಫೀಫಾ ವಿಶ್ವಕಪ್ 2018: ಫುಟ್ಬಾಲ್ ಕ್ಷೇತ್ರದ ಅತ್ಯುತ್ತಮ ರೆಫರಿ ‘ಪಿಯರ್ಲುಗಿ ಕೊಲಿನಾ’
June 27, 2018
VD
ಕ್ರೀಡೆ
Comments Off on ಫೀಫಾ ವಿಶ್ವಕಪ್ 2018: ಫುಟ್ಬಾಲ್ ಕ್ಷೇತ್ರದ ಅತ್ಯುತ್ತಮ ರೆಫರಿ ‘ಪಿಯರ್ಲುಗಿ ಕೊಲಿನಾ’
Seen By: 116 ಮಾಸ್ಕೋ: ಫುಟ್ಬಾಲ್ ಕ್ಷೇತ್ರದ ಪ್ರಮುಖ ದಂತಕಥೆ ಆಟಗಾರರ ಕುರಿತು ಎಲ್ಲರೂ ಕೇಳಿರಬಹುದು. ಅತ್ಯುತ್ತಮ ಆಟಗಾರರೊಂದಿಗೆ ಅತ್ಯುತ್ತಮ ರೆಫರಿಗಳೂ ಕೂಡ ಇರುತ್ತಾರೆ. ಈ ಪೈಕಿ [more]