ಚಾಂಪಿಯನ್ಸ್ ಟ್ರೋಫಿ ಹಾಕಿ ಫೈನಲ್: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 1-3 ಅಂತರದ ಸೋಲು

ಬ್ರೇಡಾ: ನೇದರ್ ಲ್ಯಾಂಡ್ಸ್ ನ ಬ್ರೇಡಾದಲ್ಲಿ ನಡೆದ  ಚಾಂಫಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 1-3 ಗೋಲುಗಳ ಅಂತರದಿಂದ ಸೋಲಿಗೆ ಶರಣಾಯಿತು. ನಿನ್ನೆ ನಡೆದ ಕೊನೆಯ ಸುತ್ತಿನ ರಾಬಿನ್ ಪಂದ್ಯದಲ್ಲಿ ನೆದರ್ ಲ್ಯಾಂಡ್ಸ್ ವಿರುದ್ಧ 1-1 ಡ್ರಾ  ಮಾಡಿಕೊಂಡಿದ್ದ ಭಾರತ ಇಂದು ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದ ಹೋರಾಡುವಲ್ಲಿ ವಿಫಲವಾಯಿತು.

ಕಳೆದ ಆವೃತ್ತಿಯ  ಫೈನಲ್ಸ್ ನಲ್ಲಿಯೂ ಮುಖಾಮುಖಿಯಾಗಿದ್ದ ಆಸ್ಟ್ರೇಲಿಯಾ ಹಾಗೂ ಭಾರತ ನಡುವೆ ಪ್ರಬಲ ಹೋರಾಟ ಕಂಡುಬಂದಿತ್ತು. ಆದರೆ. ಆಸ್ಟ್ರೇಲಿಯಾ ಭಾರತವನ್ನು ಸೋಲಿಸುವ ಮೂಲಕ 15 ನೇ ಚಾಂಫಿಯನ್ ಟ್ರೋಫಿಯನ್ನು ವಶಪಡಿಸಿಕೊಂಡಿತ್ತು.
ಆದಾಗ್ಯೂ , ಭಾರತ 37ನೇ ಹಾಗೂ ಅಂತಿಮ ಆವೃತ್ತಿಯಲ್ಲಿ  ಕೂಕಬುರಸ್  ಅನ್ನು ಸೋಲಿಸುವಲ್ಲಿ  ವಿಫಲವಾದ ಭಾರತ ರನ್ನರ್ ಅಫ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳುವಂತಾಯಿತು.

ಬ್ಲಾಕ್  ಗೊವೆರ್ಸ್ ಅವರ ಪೆನಾಲ್ಟಿ ಕಾರ್ನರ್  ಅವಕಾಶ ಮೂಲಕ 24 ನೇ ನಿಮಿಷದಲ್ಲಿ ಆಸ್ಟ್ರೇಲಿಯಾ ಲೀಡ್  ಪಡೆದುಕೊಂಡಿತು. ಆದರೆ. ಭಾರತ ವಿವೇಕ್ ಸಾಗರ್ ಪ್ರಸಾದ್ ಅವರ ಸ್ಟ್ರೈಕ್ ಮೂಲಕ 42 ನೇ ನಿಮಿಷದಲ್ಲಿ ಗೋಲು ಗಳಿಸಿತು. ಕಳೆದ ವರ್ಷದಂತೆ ಈ ಪಂದ್ಯದಲ್ಲಿಯೂ 1-1 ಸಮಾಂತರವಾಗಿ ನಿಯಂತ್ರಣ ಸಾಧಿಸಿ, ಶೂಟ್ ಅಫ್ ಹಂತಕ್ಕೂ ಹೋಗಿತ್ತು. ಆದರೆ. ಆಸ್ಟ್ರೇಲಿಯಾದ ಗೋಲ್ ಕೀಪರ್  ಟೈಲರ್ ಲವ್ ವೇಲ್  ಅವರ ನೆರವಿನಿಂದ ಪಂದ್ಯದ ಗತಿಯೇ ಬದಲಾಯಿತ್ತಲ್ಲದೇ, ಅವರು ಹಿರೋ ಆಗಿ ಹೊರಹೊಮ್ಮಿದ್ದರು. ಅತಿಥೇಯ ನೆದರ್ ಲ್ಯಾಂಡ್ಸ್  ಮೂರನೇ ಸ್ಥಾನ ಪಡೆಯುವ ಮೂಲಕ ಕಂಚು ಪದಕ್ಕೆ ತೃಪ್ತಿಪಟ್ಟುಕೊಳ್ಳುವಂತಾಯಿತು. ಓಲಿಂಪಿಕ್ ಚಾಂಫಿಯನ್ ಅರ್ಜಿಂಟೀನಾ ನಾಲ್ಕುನೇ ಸ್ಥಾನ ಪಡೆದುಕೊಂಡಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ