ಮಂಡ್ಯ,ಜೂ.30-ವರ್ಗಾವಣೆ ವಿರೋಧಿಸಿ ಮಹಿಳಾ ಪೆÇಲೀಸ್ ಸಿಬ್ಬಂದಿವೊಬ್ಬರು ಜಿಲ್ಲಾ ಎಸ್ಪಿ ಕಚೇರಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಅಸ್ವಸ್ಥಗೊಂಡ ಮಹಿಳಾ ಸಿಬ್ಬಂದಿ ಕಮಲಮ್ಮರನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲಾ ಎಸ್ಪಿ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಮಲಮ್ಮ ಅವರನ್ನು ಮಳವಳ್ಳಿ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಆದರೆ ಕಮಲಮ್ಮ ಅವರು ವರ್ಗಾವಣೆ ವಿರೋಧಿಸಿ ಎಸ್ಪಿ ಕಚೇರಿಯಲ್ಲೆ ಮುಂದುವರೆದಿದ್ದರು. ಈ ಕಾರಣದಿಂದ ಎಸ್ಪಿ ರಾಧಿಕಾ ಅವರು ಕಮಲಮ್ಮ ಅವರನ್ನು ಅಮಾತಿಗೆ ಆದೇಶಿಸಿದ್ದರು. ಇದರಿಂದ ನೊಂದ ಕಮಲಮ್ಮ ಕರ್ತವ್ಯದಲ್ಲಿದ್ದಾಗಲೇ ನಿದ್ರೆ ಮಾತ್ರೆ ಸೇವಿಸಿ ಅಸ್ವಸ್ಥಗೊಂಡಿದ್ದರು. ತಕ್ಷಣ ಇವರನ್ನು ಸಿಬ್ಬಂದಿಗಳೇ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆಕ್ರೋಶ: ಎಸ್ಪಿ ಅವರು ಸೌಜನ್ಯವಾಗಿ ವರ್ತಿಸದ ಪರಿಣಾಮ ಕಮಲಮ್ಮ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಆಸ್ಪತ್ರೆ ಬಳಿ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೊನ್ನೆಯಷ್ಟೇ ಎಸ್ಪಿ ಕಚೇರಿಗೆ ಬಂದಿದ್ದ ಮಹಿಳೆಯೊಬ್ಬರು ತಮ್ಮ ಮಗಳ ಸಾವಿಗೆ ನ್ಯಾಯ ಸಿಕ್ಕಿಲ್ಲವೆಂದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಾಸುವ ಮುನ್ನವೇ ಇದೀಗ ಪೆÇಲೀಸ್ ಸಿಬ್ಬಂದಿಯೇ ಕಚೇರಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿರುವುದು ಚರ್ಚೆಗೆ ಗ್ರಾಸವಾಗಿದೆ.