ಬೆಂಗಳೂರು,ಜೂ.30-ಇತ್ತೀಚಿನ ದಿನಗಳಲ್ಲಿ ಜನರ ನಡುವಿನ ಐಕ್ಯತೆ ಕದಡುವ, ಆತಂಕ ಬಿತ್ತುವ, ಧರ್ಮ ಸಾಮರಸ್ಯ ಹಾಳು ಮಾಡುವ ಬೆಳವಣಿಗೆಗಳು ಹೆಚ್ಚಾಗಿ ನಡೆಯುತ್ತಿವೆ ಎಂದು ನಿವೃತ್ತ ನ್ಯಾ.ಎಚ್.ಎನ್. ನಾಗಮೋಹನ್ದಾಸ್ ಅಸಮಾಧಾನ ವ್ಯಕ್ತಪಡಿಸಿದರು.
ಬಸವ ಶಾಂತಿ ಮಿಷನ್ ಟ್ರಸ್ಟ್ , ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಗಾಂಧಿಭವನದಲ್ಲಿ ಏರ್ಪಡಿಸಿದ್ದ ಭಕ್ತಿ ಪಂಥ ಸಮಾವೇಶದಲ್ಲಿ ಮಾತನಾಡಿದ ಅವರು, ಧರ್ಮದಲ್ಲಿನ ಆಚರಣೆಗಳನ್ನು ಬಲವಂತವಾಗಿ ಹೇರಿದರೆ ಅಲ್ಲಿ ಮೂಲಭೂತ ವಾದ ಹುಟ್ಟುತ್ತದೆ. ಧರ್ಮವನ್ನು ರಾಜಕೀಯಗೊಳಿಸಿದರೆ ಕೋಮುವಾದ ಹುಟ್ಟುತ್ತದೆ. ಇವೆರಡನ್ನೂ ಹೊರತುಪಡಿಸಿ ಧರ್ಮವನ್ನು ಧರ್ಮವನ್ನಾಗಿಯೇ ಉಳಿಯಲು ಬಿಡುವ ಸಂಸ್ಕøತಿ ಬೇಕಿದೆ ಎಂದು ಹೇಳಿದರು.
ಭಾರತ ಬಹುತ್ವ ಸಂಸ್ಕøತಿ ಹೊಂದಿರುವ ದೇಶ. ಇಲ್ಲಿ 4635 ಕ್ಕೂ ಹೆಚ್ಚು ಜಾತಿಗಳಿವೆ. ಸುಮಾರು ಒಂದು ಸಾವಿರಕ್ಕೂ ಹೆಚ್ಚು ಭಾಷೆ ಮಾತನಾಡುವ ಜನರಿದ್ದಾರೆ. ವ್ಯಾಪಾರ, ಜ್ಞಾನಾರ್ಜನೆ, ಭೂಮಿ, ಧಾರ್ಮಿಕತೆಗಳನ್ನು ಹುಡುಕಿಕೊಂಡು ಬಂದವರು, ದಾಳಿ, ಆಕ್ರಮಣಕ್ಕೆ ಬಂದವರ ಪೈಕಿ ಕೆಲವರು ವಾಪಸ್ ತಮ್ಮ ದೇಶಗಳಿಗೆ ಹೋದರೆ ಇನ್ನು ಕೆಲವರು ಇಲ್ಲೇ ಉಳಿದರು. ಹಾಗೆ ಉಳಿದವರು ಭಾರತೀಯ ಸಂಸ್ಕøತಿ ಜೊತೆ ಸಮ್ಮಿಳಿತವಾದರು.
ಸ್ವಾತಂತ್ರ್ಯ ನಂತರ ಸಂವಿಧಾನ ರಚನೆಯಲ್ಲಿ ಭಾರತವನ್ನು ಹಿಂದೂರಾಷ್ಟ್ರ ಮಾಡಬೇಕೆಂಬ ಕೂಗೆದ್ದಿತ್ತು. ಆದರೆ ಜನರ ಅಭಿಪ್ರಾಯ ಸಂಗ್ರಹಿಸಿದಾಗ ಬಹುತ್ವ ಸಂಸ್ಕøತಿಯನ್ನು ಒಪ್ಪಿಕೊಂಡ ಜಾತ್ಯತೀತ ರಾಷ್ಟ್ರ ನಿರ್ಮಾಣಕ್ಕೆ ಸಹಮತ ವ್ಯಕ್ತವಾಯಿತು. ಅದನ್ನು ಆಧರಿಸಿ ಅಂಬೇಡ್ಕರ್ ಸಂವಿಧಾನ ರಚಿಸಿದರು. ಪ್ರತಿಯೊಂದು ಧರ್ಮಕ್ಕೂ ಧರ್ಮ ಗ್ರಂಥಗಳಿವೆ. ಆದರೆ ಭಾರತೀಯರಿಗೆ ಸಮಗ್ರ ಧರ್ಮ ಗ್ರಂಥ ಎಂದರೆ ಸಂವಿಧಾನ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಧರ್ಮ, ಜಾತಿ ಹೆಸರಿನಲ್ಲಿ ಭಯ ಹುಟ್ಟಿಸುತ್ತಿದ್ದಾರೆ. ಜನರ ನಡುವೆ ಗೋಡೆ ಕಟ್ಟುತ್ತಿದ್ದಾರೆ, ಐಕ್ಯತೆಯನ್ನು ಒಡೆಯುತ್ತಿದ್ದಾರೆ. ಆದರೆ ದೇಶದ ಜನ ಪ್ರಜ್ಞಾವಂತರು. ಮುಂದೊಂದು ದಿನ ಎಲ್ಲಾ ಹುನ್ನಾರಗಳನ್ನು ದಾಟಿ ಬಹುತ್ವ ಸಂಸ್ಕøತಿಯ ದೇಶವನ್ನಾಗಿಯೇ ಭಾರತವನ್ನು ಉಳಿಸಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ ಎಂದರು.
ಪಂಚಾಯ್ತಿಯಿಂದ ಪಾರ್ಲಿಮೆಂಟ್ವರೆಗೂ ಹಣ ಮತ್ತು ರಾಜಕೀಯ ಮೇಲಾಟವೇ ಹೆಚ್ಚಾಗಿದೆ. ಜಾಗತೀಕರಣದಲ್ಲಿ ಬದುಕಿನ ಸಂಬಂಧಗಳಿಗಿಂತ ಲಾಭದ ಲೆಕ್ಕಾಚಾರ ಹೆಚ್ಚಾಗಿವೆ. ಯಾವ ದೇಶ ಆರ್ಥಿಕವಾಗಿ ದಿವಾಳಿಯಾಗುತ್ತದೆಯೋ ಅಲ್ಲಿ ಸಾಮಾಜಿಕ ಮತ್ತು ನೈತಿಕ ದಿವಾಳಿತನ ಕಾಣಿಸಿಕೊಳ್ಳುತ್ತದೆ ಎಂಬುದು ಸತ್ಯವಾದ ಮಾತು. ನಮ್ಮಲ್ಲಿ ಮೌಲ್ಯಗಳ ಲೆಕ್ಕಾಚಾರ ಬಿಟ್ಟು ,ಲಾಭದ ಲೆಕ್ಕಾಚಾರ ಹೆಚ್ಚಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಯಾವುದೇ ಸರ್ಕಾರ ತನ್ನ ಆಡಳಿತವನ್ನು ಜನರ ಹಿತದೃಷ್ಟಿಯಿಂದ ನಡೆಸಬೇಕು, ಚಿಲ್ಲರೆ ಅಂಗಡಿಯ ವ್ಯಾಪಾರದಂತೆ ವ್ಯವಹರಿಸಬಾರದು. ರಾಜಕಾರಣದಲ್ಲಿ ಇತ್ತೀಚೆಗೆ ನಾಚಿಕೆ ಕಾಣುತ್ತಿಲ್ಲ. ನಾಚಿಕೆಯೂ ಒಂದು ಮೌಲ್ಯ. ಅದನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯ ಇದೆ ಎಂದರು.
ಧಾರ್ಮಿಕ ಅಂಧಾನುಕರಣೆ ಹೆಚ್ಚಾದಾಗ ಸೂಫಿ ಸಂತರು ಮತ್ತು ಭಕ್ತಿ ಪಂಥದ ದಾರ್ಶನಿಕರು ಜನರಿಗೆ ಈ ಮಾರ್ಗಗಳನ್ನು ತೋರಿಸಿದರು. ಧರ್ಮ ಎಂದರೆ ಕಷ್ಟದಲ್ಲಿರುವವರ ಕಣ್ಣೀರು ಒರೆಸುವಂಥದ್ದು. ವ್ಯಾಪಾರದ ವಸ್ತುವಲ್ಲ. ಧರ್ಮ ಅಪ್ರಜಾಪ್ರಭುತ್ವ ವಾದದಲ್ಲಿದ್ದರೆ ಮೂಲಭೂತವಾದಿಗಳ ಕೈಗೆ ಸಿಲುಕಿ ನಲುಗಲಿದೆ. ಎಂದು ಎಚ್ಚರಿಸಿದರು.
ನಿವೃತ್ತ ಡಿಜಿಪಿ ಅಜಯ್ಕುಮಾರ್ಸಿಂಗ್, ಪದ್ಮಶ್ರೀ ಪ್ರಶಸ್ತಿ ಪುರಸ್ಕøತ ಕಬೀರ ಇಬ್ರಾಹಿಂ ಸುತಾರಾ, ಪಂಡರಾಪುರದ ಗೋಂಧಿ ಮಠದ ಶ್ರೀ ನಾಮದೇವಾನಂದ ಭಾರತಿ ಸ್ವಾಮೀಜಿ, ಮಿರಿಂಡಾ ಸಮೂಹ ಸಂಸ್ಥೆಯ ಅಧ್ಯಕ್ಷ ಪೆÇ್ರ.ಎಸ್.ಎಸ್.ಕಾತರಕಿ, ಸಾಹಿತಿ ರಂಜಾನ್ ದರ್ಗಾ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರೇಮಾ ಹೊರಟ್ಟಿ ಅವರು ರಚಿಸಿರುವ ಗ್ರಂಥವನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.