ಬಿಬಿಎಂಪಿ: ಅಧಿಕಾರಗಳ ವಿರುದ್ದ ಪ್ರತಿಪಕ್ಷ ಬಿಜೆಪಿ ನಾಯಕರು ತರಾಟೆ

 

ಬೆಂಗಳೂರು,ಜೂ.28- ಕಾಂಪ್ಯಾಕ್ಟರ್ ನಾಪತ್ತೆ ಪ್ರಕರಣ ಬಿಬಿಎಂಪಿ ಸಭೆಯಲ್ಲಿಂದು ಪ್ರತಿಧ್ವನಿಸಿ ಯೂ ಟರ್ನ್ ಹೊಡೆದ ಅಧಿಕಾರಗಳ ವಿರುದ್ದ ಪ್ರತಿಪಕ್ಷ ಬಿಜೆಪಿ ನಾಯಕರು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
ಕಾಂಪಾಕ್ಟರ್, ಆಟೋ ಟಿಪ್ಪರ್ ಖರೀದಿಯಲ್ಲಿ ಅಕ್ರಮ ನಡೆದಿರುವ ವಿಷಯವನ್ನು ಸಭೆಯಲ್ಲಿ ಪ್ರತಿಪಕ್ಷದ ಸದಸ್ಯರು ಆರೋಪಿಸುತ್ತಿದ್ದಂತೆ ಘನ ತ್ಯಾಜ್ಯ ನಿರ್ವಹಣಾ ವಿಭಾಗ ಖರೀದಿ ಪ್ರಕ್ರಿಯೆ ಸ್ಥಗಿತಗೊಳಿಸಲು ನಿರ್ಧಾರ ಮಾಡಿರುವುದರನ್ನು ಪ್ರಕಟಿಸಿತು.

ಪ್ರತಿಪಕ್ಷದ ನಾಯಕ ಪದ್ಮನಾಭ ರೆಡ್ಡಿ , ಕಾಂಪ್ಯಾಕ್ಟರ್‍ಗಳನ್ನು ಗುತ್ತಿಗೆದಾರರಿಗೆ ನೀಡಲಾಗುತ್ತಿದೆ. ಪಾಲಿಕೆ ಕಾಂಪಾಕ್ಟರ್‍ಗಳು ಎಲ್ಲೆಲ್ಲಿ ಕೆಲಸ ಮಾಡುತ್ತಿವೆ ಎಂಬ ಮಾಹಿತಿ ಬೇಕು, ಘನತ್ಯಾಜ್ಯ ಜಂಟಿ ಆಯುಕ್ತರಿಂದ ಉತ್ತರ ಕೊಡಿಸಬೇಕು ಎಂದು ಆಗ್ರಹಿಸಿದರು.
ಇದಕ್ಕೆ ದನಿಗೂಡಿಸಿದ ಉಮೇಶ್ ಶೆಟ್ಟಿ, ಆಟೋ ಕಾಂಪ್ಯಾಕ್ಟರ್‍ಗಳ ನಾಪತ್ತೆ ಸುದ್ದಿ ಹರಡುತ್ತಿದೆ. ಕಾಪೆರ್Çೀರೇಟರ್‍ಗಳಿಗೆ ಬಿಬಿಎಂಪಿಗೆ ಅವಮಾನವಾಗುತ್ತಿದೆ. ಕಾಂಪ್ಯಾಕ್ಟರ್‍ಗಳು ಕಳೆದು ಹೋಗಿರುವ ಬಗ್ಗೆ ಪ್ರತಿನಿತ್ಯ ಮಾಧ್ಯಮಗಳಲ್ಲಿ ಸುದ್ದಿ ಬರುತ್ತಿದೆ. ಇದಕ್ಕೆ ಸರಿಯಾದ ಉತ್ತರವನ್ನು ಅಧಿಕಾರಿಗಳು ನೀಡಬೇಕು ಎಂದು ಆಗ್ರಹಿಸಿದರು.
ವಿಷಯ ಪ್ರಸ್ತಾಪಿಸಿದ ಮಾಜಿ ಮೇಯರ್ ಮಂಜುನಾಥ್ ರೆಡ್ಡಿ, ರಾಮ್ಕಿ ಸಂಸ್ಥೆ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ನಿಗದಿತ ಕಸ ಹೋಗುತ್ತಿಲ್ಲ ಎಂದು ದೂರು ನೀಡಲಾಗಿದೆ. ಹೈಕೋರ್ಟ್‍ನಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ದಂಡ ಪಾವತಿಸುವಂತೆ ಸೂಚನೆ ನೀಡಿದ್ದು, ಈ ಬಗ್ಗೆ ವರದಿ ತರಿಸಿಕೊಂಡು ಪರಿಶೀಲನೆ ನಡೆಸುವಂತೆ ಸೂಚಿಸಿದೆ ಎಂದರು.

ಜಂಟಿ ಆಯುಕ್ತ ಸರ್ಫ್‍ರಾಜ್ ಖಾನ್ ಉತ್ತರ ನೀಡಿ, 30 ವಾರ್ಡ್‍ಗಳಲ್ಲಿ ಕಾಂಪ್ಯಾಕ್ಟರ್ ಖರೀದಿಯಲ್ಲಿ ಅಕ್ರಮವಾಗಿರುವ ಬಗ್ಗೆ ಪರೋಕ್ಷವಾಗಿ ಒಪ್ಪಿಕೊಂಡಿರುವುದಲ್ಲದೆ ಖರೀದಿ ಪ್ರಕ್ರಿಯೆ ಸ್ಥಗಿತಗೊಳಿಸಿರುವುದಾಗಿ ಹೇಳಿದರು.
60 ಕಾಂಪ್ಯಾಕ್ಟರ್, 416 ಆಟೋ ಟಿಪ್ಪರ್ ಖರೀದಿಯಲ್ಲಿ ಅಕ್ರಮ ಆರೋಪ ಕೇಳಿಬಂದಿತ್ತು. ಟೆಂಡರ್ ಇಲ್ಲದೆಯೇ ಅಕ್ರಮವಾಗಿ ಖರೀದಿಗೆ ಅಧಿಕಾರಿಗಳು ವರ್ಕ್ ಆರ್ಡರ್ ನೀಡಿದ್ದರು. ಕೌನ್ಸಿಲ್ ಸಭೆಗಳಲ್ಲಿ, ಮಾಧ್ಯಮಗಳಲ್ಲಿ ಕ್ಯಾಂಪಾಕ್ಟರ್ ಖರೀದಿ ಬಗ್ಗೆ ವ್ಯಾಪಕ ಪ್ರಸಾರವಾಗಿತ್ತು. ಈ ಹಿನ್ನೆಲೆಯಲ್ಲಿ ವರ್ಕ್ ಆರ್ಡರ್ ಹಿಂಪಡೆಯುವಂತೆ ಜಂಟಿ ಆಯುಕ್ತ ಸರ್ಫ್‍ರಾಜ್ ಖಾನ್ ಸೂಚಿಸಿದರು.
ಆಟೋ ಟಿಪ್ಪರ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಅಗತ್ಯಕ್ಕಿಂತ ಹೆಚ್ಚು ಕಸ ತುಂಬಿ ತರಲಾಗುತ್ತಿದೆ. ವಾಹನಗಳ ಮಾಹಿತಿ ನೀಡಿ ಎಂದು ತಿಳಿಸಿದ್ದೇವೆ. ಜಿಪಿಎಸ್ ಅಳವಡಿಸುವ ಸಂಬಂಧ ಆ್ಯಪ್ ಅಳವಡಿಸಿಕೊಳ್ಳುವಂತೆ ಸೂಚನೆ ನೀಡಿದ್ದೇವೆ. ಕಸದ ವಾಹನ ಬರದಿರೋ ಬಗ್ಗೆ ಮಾಹಿತಿ ನೀಡುವಂತೆ ಕೇಳಿದ್ದೇನೆ. ಮಹದೇವಪುರದಲ್ಲಿ ರೈತರು ಕಸ ತೆಗೆದುಕೊಂಡು ಹೋಗುತ್ತಿದ್ದಾರೆ. ಪ್ರತಿ ವಾರ್ಡ್‍ಗಳಲ್ಲಿ ಎಷ್ಟು ವಾಹನಗಳಿವೆ ಎಂಬ ಮಾಹಿತಿ ಇದೆ. ಎಲ್ಲ ಮಾಹಿತಿಯನ್ನು ವೆಬ್‍ಸೈಟ್‍ಗೆ ಹಾಕಲಾಗುವುದು, ಪಾಲಿಕೆ ಒಡೆತನದಲ್ಲಿ 73 ಕ್ಯಾಂಪ್ಯಾಕ್ಟರ್‍ಗಳಿವೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ