ಮಾಘರ್:ಜೂ-28: ಪ್ರಸಿದ್ಧ ಸಂತ ಕಬೀರ್ ಪವಿತ್ರ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮುಸ್ಲಿಂರು ಧರಿಸುವ ಉಣ್ಣೆಯ ಟೋಪಿ ಧರಿಸಲು ನಿರಾಕರಿಸಿದ್ದಾರೆ.
ಉತ್ತರ ಪ್ರದೇಶದ ಮಾಘರ್ ನಲ್ಲಿ ಸಂತ ಕಭೀರ್ ಅವರ ಪುಣ್ಯ ಕ್ಷೇತ್ರವಿದ್ದು, ಇಂದು ಸಿಎಂ ಯೋಗಿ ಆದಿತ್ಯನಾಥ್ ಭೇಟಿ ನೀಡಿದ್ದರು. ಈ ವೇಳೆ ಆದಿತ್ಯನಾಥ್ ಅವರಿಗೆ ಅಲ್ಲಿನ ಧರ್ಮಗುರುಗಳು ಟೋಪಿ ಧರಿಸಲು ಮುಂದಾದಾಗ ಅದನ್ನು ನಿರಾಕರಿಸಿದ್ದಾರೆ.
2011ರ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅಹಮದಾಬಾದಿನಲ್ಲಿ ಸದ್ಬಾವನಾ ಉಪವಾಸ ಸಂದರ್ಭದಲ್ಲಿ ಮುಸ್ಲಿಂ ಟೋಪಿ ಧರಿಸಲು ನಿರಾಕರಿಸಿದ್ದರು. ಆ ಟೋಪಿ ಐಕ್ಯತೆಯ ಸಂಕೇತವಾಗಿದ್ದರೆ ಮಹಾತ್ಮ ಗಾಂಧಿ ಏಕೆ ಅದನ್ನು ತೊಡಲಿಲ್ಲ ಎಂದು ಸಂದರ್ಶನವೊಂದರಲ್ಲಿ ಅವರು ಹೇಳಿಕೆ ನೀಡಿದ್ದರು.
ಟೋಪಿ ಧರಿಸುವುದು ಐಕ್ಯತೆಯ ಸಂಕೇತವಾಗಿದ್ದರೆ, ಮಹಾತ್ಮ ಗಾಂಧೀಜಿ, ಸರ್ದಾರ್ ಪಟೇಲ್, ಪಂಡಿತ್ ಜವಹರಲಾಲ್ ನೆಹರೂ ಏಕೆ ಆ ಟೋಪಿ ತೊಟ್ಟಿರಲಿಲ್ಲ ಎಂದು ಪ್ರಶ್ನಿಸಿದ್ದರು.
ಎರಡು ದಿನಗಳ ಕಬೀರ್ ಮಹೋತ್ಸವ ಆಚರಿಸಲು ಪ್ರಧಾನಿ ನರೇಂದ್ರ ಮೋದಿ ಇಂದು ಮಾಘರ್ ಗೆ ಆಗಮಿಸಿದ್ದು, ಮಝರ್ ನಲ್ಲಿ ಚಾದರ್ ಪೂಜೆ ಸಲ್ಲಿಸಿದರು. ಬಳಿಕ ಕಬೀರ್ ಅಕಾಡೆಮಿ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಿದರು. ಪ್ರಧಾನಿ ಭೇಟಿ ಹಿನ್ನಲೆಯಲಿ ಯೋಗಿ ಆದಿತ್ಯನಾಥ್ ಮಾಘರ್ ಗೆ ಭೇಟಿ ನೀಡಿದ್ದರು.
CM Yogi Draws Flak for Refusing to Wear Cap at Kabir Mausoleum