ನವದೆಹಲಿ, ಜೂ.27-ಉದ್ಯೋಗ ಸ್ಥಳಕ್ಕೆ ಸಂಬಂಧಪಟ್ಟಂತೆ ಮಹತ್ವದ ತೀರ್ಪನ್ನು ನೀಡಿರುವ ಸುಪ್ರೀಂಕೋರ್ಟ್ ಅತಿಯಾದ ಕೆಲಸದ ಹೊರೆಯಿಂದ ತೀವ್ರ ಖಿನ್ನತೆಗೆ ಒಳಗಾಗಿ ಉದ್ಯೋಗಿ ಆತ್ಮಹತ್ಯೆ ಮಾಡಿಕೊಂಡರೆ ಮೇಲಧಿಕಾರಿಗಳು ಅಥವಾ ಇಲಾಖೆ ಮುಖ್ಯಸ್ಥರು ಕಾರಣರಲ್ಲ ಎಂದು ಸ್ಪಷ್ಟಪಡಿಸಿದೆ.
ಕಚೇರಿಯಲ್ಲಿ ಮಿತಿ ಮೀರಿದ ಕೆಲಸದ ಒತ್ತಡದಿಂದ ಉದ್ಯೋಗಿಯೊಬ್ಬರು ಖಿನ್ನತೆಯಿಂದ ಸಾವಿಗೆ ಶರಣಾದರೆ ಇದಕ್ಕೆ ಮೇಲ್ವಿಚಾರಕರನ್ನು ಆತ್ಮಹತ್ಯೆಗೆ ಪ್ರಚೋದನೆ ಮಾಡಿದ್ದಾರೆ ಎಂದು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.
ಸರ್ಕಾರಿ ಉದ್ಯೋಗಿಯೊಬ್ಬರ ಆತ್ಮಹತ್ಯೆ ಪ್ರಕರಣ ಕುರಿತ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಈ ತೀರ್ಪು ನೀಡಿರುವುದು ಇಂತಹ ಪ್ರಕರಣಗಳ ಸಂಬಂಧ ತಲೆದೋರಿದ್ದ ಗೊಂದಲ ಮತ್ತು ಅನುಮಾನಗಳಿಗೆ ಉತ್ತರವಾಗಿದೆ. 2017ರ ಆಗಸ್ಟ್ನಲ್ಲಿ ಮಹಾರಾಷ್ಟ್ರ ಸರ್ಕಾರದ ಶಿಕ್ಷಣ ಇಲಾSಯ ಉಪನಿರ್ದೇಶಕರ ಔರಂಗಾಬಾದ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಿಶೋರ್ ಪರಾಶರ್ ಆತ್ಮಹತ್ಯೆಗೆ ಶರಣಾಗಿದ್ದರು. ಈ ಸಂಬಂಧ ಅವರ ಪತ್ನಿ ಪೆÇಲೀಸ್ ಠಾಣೆಗೆ ದೂರು ನೀಡಿ ತಮ್ಮ ಪತಿಗೆ ಮೇಲಧಿಕಾರಿಗಳು ವಿಪರೀತ ಕೆಲಸದ ಹೊರೆ ನೀಡಿ ಮಾನಸಿಕ ಕಿರುಕುಳ ನೀಡಿದ್ದರು. ಹತಾಶೆ ಮತ್ತು ಖಿನ್ನತೆಯಿಂದ ಅವರು ಸಾವಿಗೆ ಶರಣಾಗಿದ್ದರು. ಅವರ ಆತ್ಮಹತ್ಯೆಗೆ ಇಲಾSಯ ಮುಖ್ಯಸ್ಥರೇ ಪ್ರಚೋದನೆ ನೀಡಿದ್ದು ಅವರನ್ನು ಹೊಣೆಗಾರರನ್ನಾಗಿಸುವಂತೆ ಕೋರಿದ್ದರು. ಬಾಂಬೆ ಹೈಕೋರ್ಟ್ನ ಔರಂಗಾಬಾದ್ ಪೀಠದಲ್ಲಿ ಈ ಪ್ರಕರಣದ ಬಗ್ಗೆ ವಿಚಾರಣೆ ನಡೆದು ಉನ್ನತ ಅಧಿಕಾರಿಯನ್ನು ತಪ್ಪಿತಸ್ಥರನ್ನಾಗಿ ಮಾಡಲಾಗಿತ್ತು.
ಈ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಪ್ರಕರಣದ ವಾದ-ಪ್ರತಿವಾದ ಆಲಿಸಿದ ಸುಪ್ರೀಂಕೋರ್ಟ್ ಔರಂಗಾಬಾದ್ ಪೀಠದ ತೀರ್ಪನ್ನು ತಳ್ಳಿಹಾಕಿತ್ತು.
ಓರ್ವ ಉದ್ಯೋಗಿಗೆ ಕಾರ್ಯವನ್ನು ನಿಯೋಜಿಸುವುದು ಮೇಲ್ವಿಚಾರಕರ ಕರ್ತವ್ಯ. ಉದ್ದೇಶಪೂರ್ವಕವಾಗಿ ವಿಪರೀತ ಕೆಲಸದ ಹೊರೆ ಹೇರುವ ಮತ್ತು ಆತನಿಗೆ ಮಾನಸಿಕ ಕಿರುಕುಳ ನೀಡುವ ಉದ್ದೇಶವನ್ನು ಮೇಲ್ವಿಚಾರಕರು ಹೊಂದಿಲ್ಲದಿದ್ದರೆ ಅದು ಖಂಡಿತ ಅಪರಾಧವಲ್ಲ ಮತ್ತು ಅವರನ್ನು ಇಂತಹ ಪ್ರಕರಣಗಳಲ್ಲಿ ಹೊಣೆಗಾರರನ್ನಾಗಿ ಮಾಡಲಾಗದು ಎಂದು ತೀರ್ಪು ನೀಡಿದೆ.