ನವದೆಹಲಿ,ಜೂ.27- ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಪ್ರತಿಷ್ಠೆಯ ಕಣವಾಗಿರುವ ರಾಜ್ಯಸಭೆ ಉಪಸಭಾಪತಿ ಸ್ಥಾನಕ್ಕೆ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಲು ತೀರ್ಮಾನಿಸಿದೆ.
2019 ಲೋಕಸಭೆ ಚುನಾವಣೆಗೆ ಬಿಜೆಪಿಯನ್ನು ಕಟ್ಟಿ ಹಾಕಲು ವಿರೋಧ ಪಕ್ಷಗಳು ಈ ಚುನಾವuಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿವೆ. ಹೀಗಾಗಿ ತೃಣಮೂಲ ಕಾಂಗ್ರೆಸ್‍ನಿಂದ ಹಿರಿಯ ಮುಖಂಡ ಸುಖೆಂದು ಶೇಖರ್ ರಾಯ್ ಉಪಸಭಾಪತಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ.
ಈಗಾಗಲೇ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಿಜೆಪಿಯೇತರ ಉಮೇದಾರರ ನಡುವೆ ಮಾತುಕತೆ ನಡೆಸಿದ್ದು ಒಮ್ಮತದ ಅಭ್ಯರ್ಥಿಯಾಗಿ ಸುಖೆಂದು ಶೇಖರ್ ರಾಯ್ ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಿದ್ದಾರೆ.
ಇನ್ನು ಟಿಎಂಸಿ ಅಭ್ಯರ್ಥಿಗೆ ಕಾಂಗ್ರೆಸ್ ಕೂಡ ಬೆಂಬಲ ಸೂಚಿಸಿದೆ. ಹಾಲಿ ಉಪಸಭಾಪತಿಯಾಗಿರುವ ಕಾಂಗ್ರೆಸ್‍ನ ಪಿ.ಜಿ.ಕುರಿಯನ್ ಅಧಿಕಾರಾವಧಿ ಸದ್ಯದಲ್ಲೇ ಮುಗಿಯಲಿದೆ.
ಜುಲೈ ತಿಂಗಳಿನಲ್ಲಿ ಆರಂಭವಾಗಲಿರುವ ಸಂಸತ್‍ನ ಉಭಯ ಸದನಗಳ ಜಂಟಿ ಅಧಿವೇಶನದೊಳಗೆ ಉಪಸಭಾಪತಿ ಸ್ಥಾನಕ್ಕೆ ಚುನಾವಣೆ ನqಯಲಿದೆ.
ರಾಜ್ಯ ಸ¨sಯಲ್ಲಿ 51 ಸ್ಥಾನಗಳನ್ನು ಹೊಂದಿದೆ.ಸಹಜವಾಗಿ ತನ್ನ ಪಕ್ಷದ ಅಭ್ಯರ್ಥಿಯೇ ಉಪಸಭಾಪತಿಯಾಗಿರಬೇಕೆಂಬ ನಿರೀಕ್ಷೆ ಇಟ್ಟುಕೊಂಡಿದೆಯಾದರೂ ಇತರೆ ಪಕ್ಷಗಳು ಬೆಂಬಲ ಸೂಚಿಸುತ್ತಿಲ್ಲ. ಹೀಗಾಗಿ ಮಿತ್ರ ಪಕ್ಷಗಳಿಗೆ ಈ ಸ್ಥಾನವನ್ನು ತ್ಯಾಗ ಮಾಡಲು ಮುಂದಾಗಿದೆ.
ಒಂದು ವೇಳೆ ಟಿಎಂಸಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಬಿಜೆಡಿ, ಟಿಆರ್‍ಎಸ್, ಟಿಡಿಪಿ ಸೇರಿದಂತೆ ಮತ್ತಿತರ ಕೆಲವು ಪ್ರಾದೇಶಿಕ ಪಕ್ಷಗಳು ಬೆಂಬಲ ಸೂಚಿಸುವ ಸಾದ್ಯತೆ ಇದೆ ಎಂದು ತಿಳಿದುಬಂದಿದೆ.
ಆದರೆ ಇತ್ತೀಚೆಗೆ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಅವರನ್ನು ಭೇಟಿ ಮಾಡಿದ ನಂತರ ಅವರ ವರಸೆ ಬದಲಾಗಿದೆ.
ರಾಜ್ಯಸಭೆ ಚುನಾವuಯಲ್ಲಿ ಟಿಆರ್‍ಎಸ್, ವೈಎಸ್‍ಆರ್, ಬಿಜೆಡಿ ಸೇರಿದಂತೆ ಕೆಲವು ಸಣ್ಣಪುಟ್ಟ ಪಕ್ಷಗಳೇ ನಿರ್ಣಾಯಕ ಪಾತ್ರ ವಹಿಸಲಿವೆ. ಹೀಗಾಗಿ ಇವರ ಒಲವು ಯಾರ ಕಡೆ ಇರುತ್ತದೆಯೋ ಆ ಪಕ್ಷದ ಅಭ್ಯರ್ಥಿ ಉಪಸಭಾಪತಿ ಸ್ಥಾನವನ್ನು ಅಲಂಕರಿಸಲಿದ್ದಾರೆ.
ಈವರೆಗೂ 1992ರಲ್ಲಿ ಮಾತ್ರ ಉಪಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಆ ವೇಳೆ ಕಾಂಗ್ರೆಸ್‍ನಿಂದ ಈಗಿನ ರಾಜ್ಯಪಾಲರಾಗಿರುವ ನಜ್ಮಾ ಹೆಫ್ತುಲ್ಲ ಹಾಗೂ ವಿರೋಧ ಪಕ್ಷದ ಅಭ್ಯರ್ಥಿಯಾಗಿ ಹಾಲಿ ರಾಜ್ಯಸಭಾ ಸದಸ್ಯೆ, ಮಾಜಿ ಸಚಿವೆ ರೇಣುಕಾ ಚೌಧರಿ ಕಣಕ್ಕಿಳಿದಿದ್ದರು.
ರಾಜ್ಯಸ¨sಯಲ್ಲಿ ಸ್ಪಷ್ಟ ಬಹುಮತ ಹೊಂದಿದ್ದ ನಜ್ಮಾ ಹೆಫ್ತುಲ್ಲ 128 ಮತಗಳನ್ನು ಪಡೆದು ಉಪಸಭಾಪತಿಯಾಗಿ ಆಯ್ಕೆಯಾಗಿದ್ದರು. ವಿರೋಧ ಪಕ್ಷದ ಅಭ್ಯರ್ಥಿಯಾಗಿದ್ದ ರೇಣುಕಾ ಚೌಧರಿ 95 ಮತಗಳನ್ನು ಪqಯಲಷ್ಟೇ ಶಕ್ತವಾಗಿದ್ದರು.
ವಿಶೇಷವೆಂದರೆ ಇಂದು ಕಾಂಗ್ರೆಸ್‍ನಲ್ಲಿರುವ ರೇಣುಕಾ ಚೌಧರಿಗೆ ಅಂದು ಪ್ರತಿಪಕ್ಷ ಬಿಜೆಪಿ ಬೆಂಬಲ ಸೂಚಿಸಿತ್ತು. ಈಗಿನ ರಾಜ್ಯಸ¨sಯ ಬಲಾಬಲದಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತವಿಲ್ಲ.
ಒಂದು ವೇಳೆ ವಿರೋಧ ಪಕ್ಷದವರ ಕೈ ಮೇಲಾದರೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಮರು ಚಿಂತನೆ ನಡೆಸಲಿದೆ ಎಂದು ತಿಳಿದುಬಂದಿದೆ.
ಚುನಾವಣೆಗೆ ನಿಂತು ಮುಖಭಂಗ ಅನುಭವಿಸುವ ಬದಲು ಸುರಕ್ಷvಯ ಅಂತ ಕಾಪಾಡಿಕೊಳ್ಳುವತ್ತ ಹೆಜ್ಜೆ ಇಡುತ್ತಿದೆ.