ದ್ವಿಚಕ್ರ ವಾಹನೋದ್ಯಮದ ಭಾಷ್ಯ ಬದಲಿಸಿದ ಓಕಿನಾವಾ ಕಂಪೆನಿಯ ವಿದ್ಯುತ್ ಚಾಲಿತ ಬ್ಯಿಕ

 

ಬೆಂಗಳೂರು, ಜೂ.26- ದ್ವಿಚಕ್ರ ವಾಹನಗಳೆಂದರೆ ನಿಮಗೆಲ್ಲ ಗೊತ್ತು, ಅಬ್ಬಬ್ಬಾ ಎಂದರೆ ದಿನಕ್ಕೆ 25-30 ಕಿಮೀಗಳ ಸುತ್ತಾಟಕ್ಕೆ ಅವು ಸರಿಯಷ್ಟೆ.

ಓಕಿನಾವಾ ಕಂಪೆನಿಯ ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ಪ್ರೈಝ್, ಗುರ್ಗಾಂವ್ ನಿಂದ ಹೊರಟು ಲೆಹ್ ವರೆಗಿನ 1,350 ಕಿಲೋಮೀಟರುಗಳನ್ನು ಕೇವಲ 10 ದಿನಗಳಲ್ಲಿ ಕ್ರಮಿಸಿ, ದೇಶದ ದ್ವಿಚಕ್ರ ವಾಹನೋದ್ಯಮಕ್ಕೆ ಸಂಬಂಧಿಸಿದ ಭಾಷ್ಯವನ್ನೇ ಬದಲಿಸಿದೆ. ಇಷ್ಟೇ ಅಲ್ಲ, 18,380 ಅಡಿಗಳಷ್ಟು ಎತ್ತರದಲ್ಲಿರುವ ಲೆಹ್ ಅನ್ನು ಸುಗಮವಾಗಿ ತಲುಪುವ ಮೂಲಕ ಹೊಸ ದಾಖಲೆಯನ್ನೇ ಬರೆದಿದೆ.
ಪ್ರೈಝ್ ದಿ ಹಿಮಾಲಯ ಎನ್ನುವ ಹೆಸರಿನ ಈ ಸಾಹಸಮಯ ಪ್ರಯಾಣಕ್ಕೆ ಓಕಿನಾವಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಜಿತೇಂರ್ದ ಶರ್ಮ ಮತ್ತು ಅಧ್ಯಕ್ಷೆ ರೂಪಾಲಿ ಶರ್ಮ ಅವರು ಗುರಗಾಂವ್ ನಲ್ಲಿ ಚಾಲನೆ ನೀಡಿದ್ದರು. ಈ ಸಂದರ್ಭದಲ್ಲಿ ಕಂಪನಿಯ ಅಖಿಲ ಭಾರತ ಮಟ್ಟದ ಡೀಲರುಗಳು ಉಪಸ್ಥಿತರಿದ್ದರು.

ಸಾಮಾನ್ಯವಾಗಿ ಪೆಟ್ರೋಲ್ ಬಲದಿಂದ ಓಡುವ ದ್ವಿಚಕ್ರ ವಾಹನಗಳೇ ಪರ್ವತ ಪ್ರದೇಶಗಳಲ್ಲಿ ಏದುಸಿರು ಬಿಡುತ್ತವೆ. ಆದರೆ, ಲೀಥಿಯಂ-ಅಯಾನ್ ಬ್ಯಾಟರಿಯನ್ನು ಹೊಂದಿರುವ ¾ಪ್ರೈಝï¿, ಗುರಗಾಂವ್ ನಿಂದ ಹೊರಟು ಅಂಬಾಲಾ, ಜಲಂರ್ಧ, ಪಠಾಣ್ ಕೋಟ್, ಬನಿಹಾಲï, ಗಾಂರ್ಧೇ ಬಾಲï, ಸೋನಾಮಾರ್ಗï, ಶ್ರೀನಗರ, ಭೀಮ್ ಬಾತ್, ಲಾಮಯೂರು, ಲೆಹ್ ಮಾರ್ಗವಾಗಿ ಕಟ್ಟಕಡೆಗೆ ಕರ್ದುಂಗ್ ಲಾ ಅನ್ನು ಸಲೀಸಾಗಿ ತಲುಪಿ ವಿಕ್ರಮವನ್ನೇ ಸ್ಥಾಪಿಸುವಲ್ಲಿ ಯಶಸ್ವಿಯಾಗಿದೆ.
ಅದರಲ್ಲೂ ವಿದ್ಯುತ್ ಚಾಲಿತ ಪ್ರೈಝï ವಾಹನವು ಪರ್ವತ ಪಂಕ್ತಿಗಳೇ ಇರುವ ಕಡಿದಾದ ಹಾದಿಯಲ್ಲಿ ಕೂಡ ಗಂಟೆಗೆ 55ರಿಂದ 75 ಕಿ.ಮೀ. ವೇಗದಲ್ಲಿ ಸಾಗಿರುವುದು ಮತ್ತು ಪ್ರತ್ಯೇಕವಾಗಿ ತೆಗೆದಿಡಬಹುದಾದ (ಡಿಡ್ಯಾಚಬಲï) ಬ್ಯಾಟರಿಯಲ್ಲಿ 170ರಿಂದ 200 ಕಿ.ಮೀ. ಗಳಷ್ಟು ದೂರವನ್ನು ಕ್ರಮಿಸಬಲ್ಲಷ್ಟು ಚಾರ್ಜ್ ಮಾಡಿಕೊಳ್ಳಬಹುದಾದ ಸಮರ್ಪಕ ವ್ಯವಸ್ಥೆ ಹೊಂದಿರುವುದು ಎಲ್ಲರ ಮೆಚ್ಚುಗೆ ಗಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ