ಅರ್ಚಕರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ

Execution Sling Hanging Hangman Knot Penalty Rope

ಮೈಸೂರು,ಜೂ.24- ದೊಡ್ಡಮ್ಮ ತಾಯಿ ದೇವಾಲಯದ ಅರ್ಚಕರೊಬ್ಬರು ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ಎನ್.ಆರ್. ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಎನ್.ಆರ್.ಮೊಹಲ್ಲಾದ ನಿವಾಸಿ ರಾಜು(45) ನೇಣಿಗೆ ಶರಣಾದ ವ್ಯಕ್ತಿ. ಈತ ಎನ್.ಆರ್.ಮೊಹಲ್ಲದ ಗಣೇಶ ದೇವಾಲಯದ ರಸ್ತೆಯಲ್ಲಿರುವ ದೊಡ್ಡಮ್ಮ ತಾಯಿ ದೇವಾಲಯದ ಅರ್ಚಕರಾಗಿದ್ದರು. ಅಲ್ಲದೆ ದೊಡ್ಡತಾಯಿ ಎಂಬ ಕಲ್ಯಾಣ ಮಂಟಪದ ಮಾಲೀಕರೂ ಆಗಿದ್ದರು. ರಾಜು ಕುಟುಂಬದವರು ಚಾಮರಾಜನಗರಕ್ಕೆ ತೆರಳಿದ್ದು , ಈ ವೇಳೆ ನಿನ್ನೆ ಸಂಜೆ ಕಲ್ಯಾಣ ಮಂಟಪದ ಹಿಂಭಾಗದಲ್ಲಿರುವ ಶೌಚಾಲಯದಲ್ಲಿ ಹಗ್ಗ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೆÇಲೀಸರು ತಿಳಿಸಿದ್ದಾರೆ.
ಒಂದು ಮೂಲದ ಪ್ರಕಾರ ಅರ್ಚಕರು ಸಾಲ ಮಾಡಿಕೊಂಡಿದ್ದು, ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಮತ್ತೊಂದು ಪ್ರಕಾರ ಕಲ್ಯಾಣ ಮಂಟಪವನ್ನು ಎರಡು ಮದುವೆಗಳಿಗೆ ಒಂದೇ ದಿನಾಂಕವನ್ನು ನೀಡಿದ್ದರಿಂದ ಎರಡೂ ಮದುವೆಯ ಮನೆಯ ಕಡೆಯವರು ರಾಜು ಜೊತೆ ಜಗಳವಾಡಿದ್ದಾರೆ. ಇದರಿಂದ ಮನನೊಂದ ಆತ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೆÇಲೀಸರು ತಿಳಿಸಿದ್ದಾರೆ. ಎನ್.ಆರ್.ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ದೇಹವನ್ನು ಮೈಸೂರು ವೈದ್ಯಕೀಯ ಕಾಲೇಜು ಶವಗಾರದಲ್ಲಿ ಇರಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ