ಕುಣಿಗಲ್, ಜೂ.22-ಪ್ರಸಿದ್ಧ ಶ್ರೀ ಶನೈಶ್ಚರ ದೇವಾಲಯದ ಅರ್ಚಕರನ್ನು ಬೆದರಿಸಿ 24 ಲಕ್ಷ ರೂ. ದರೋಡೆ ಮಾಡಿದ್ದ ಒಂಭತ್ತು ಮಂದಿಯನ್ನು ಪಟ್ಟಣ ಠಾಣೆ ಪೆÇಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಡಿಕೆಹಳ್ಳಿ ಗ್ರಾಮದ ದೀಪು ಸೇರಿದಂತೆ ತಾಲೂಕಿನ ಮೂವರು ಹಾಗೂ ಬೆಂಗಳೂರಿನ 6 ಮಂದಿಯನ್ನು ಬಂಧಿಸಲಾಗಿದೆ.
ಘಟನೆ ವಿವರ: ಜೂನ್ 9 ರಂದು ಪಟ್ಟಣದ ಪ್ರಸಿದ್ಧ ದೇವಾಲಯ ಶ್ರೀ ಸತ್ಯಶನೈಶ್ಚರ ದೇವಸ್ಥಾನದ ಅರ್ಚಕರಾದ ಧನಂಜಯ್ಯ ಅವರು ದೇವಸ್ಥಾನದಲ್ಲಿ ಪೂಜೆ ಮುಗಿಸಿ ಕಾರಿನಲ್ಲಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಅವರನ್ನು ಅಡ್ಡಗಟ್ಟಿದ 9 ಮಂದಿ ದರೋಡೆಕೋರರು ಅರ್ಚಕ ಧನಂಜಯ್ ಹಾಗೂ ಅವರ ಕಾರಿನ ಚಾಲಕನನ್ನ್ನು ಬೆದರಿಸಿ ರಾಸಾಯನಿಕ ಸಿಂಪಡಿಸಿ ಹಲ್ಲೆ ನಡೆಸಿದ್ದರು.
ಈ ವೇಳೆ ಅಸ್ವಸ್ಥಗೊಂಡಿದ್ದ ಸ್ವಾಮೀಜಿಯನ್ನು ಅಲ್ಲೇ ಬಿಟ್ಟು ಅವರ ಕಾರಿನಲ್ಲಿದ್ದ 24 ಲಕ್ಷ ಹಣದ ಜೊತೆ ಕಾರನ್ನು ಅಪಹರಿಸಿದ್ದರು. ನಂತರ ಆ ಕಾರಿನಲ್ಲೇ ಬೆಳ್ಳೂರು ಕ್ರಾಸ್‍ವರೆಗೂ ಹೋಗಿ ಕಾರನ್ನು ಬಿಟ್ಟು ಪರಾರಿಯಾಗಿದ್ದರು. ಈ ಬಗ್ಗೆ ಪಟ್ಟಣ ಪೆÇಲೀಸ್ ಠಾಣೆಯಲ್ಲಿ ಅರ್ಚಕರು ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ದಿವ್ಯಾಗೋಪಿನಾಥ್ ಅವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ 9 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿಗಳಿಂದ ಬುಲೆಟ್ ದ್ವಿಚಕ್ರ ವಾಹನ, ಸ್ವಿಫ್ಟ್ ಕಾರು, ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡು ಬಂಧಿತರನ್ನು ಪೆÇಲೀಸರು ತೀವ್ರ ತನಿಖೆಗೆ ಒಳಪಡಿಸಿದ್ದಾರೆ.