ತುಮಕೂರು,ಜೂ.22- ವಾಹನಗಳನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದ ಇಬ್ಬರನ್ನು ಕ್ಯಾತಸಂದ್ರ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ನಜರಾಬಾದ್ನ ಮಸೀದಿ ರಸ್ತೆ ನಿವಾಸಿ ಅಶಿಕ ಬಿನ್ ಮೊಹಮದ್ ಅನೀಫ್(24) ಮರಳೂರು ದಿಣ್ಣೆಯ ಸೈಯದ್ ಅಸೀಫ್(28) ಬಂಧಿತ ಆರೋಪಿಗಳು.
ಕಳೆದ18ರಂದು ಮಂಚಕಲ್ಲುಕುಪ್ಪೆ ಗ್ರಾಮದ ನಿವಾಸಿ ಮಂಜುನಾಥ್ ಮತ್ತು ಹರಿಕೃಷ್ಣ ಎಂಬುವರು ಶ್ರೀ ಶನಿಮಹಾತ್ಮ ದೇವಸ್ಥಾನದ ಬಳಿ ಎರಡು ಕ್ಯಾಂಟರ್ ವಾಹನಗಳನ್ನು ನಿಲ್ಲಿಸಿಕೊಂಡಿದ್ದಾಗ ರಾತ್ರಿ 11.30ರ ಸಮಯದಲ್ಲಿ ಬೈಕ್ನಲ್ಲಿ ಬಂದ ಇಬ್ಬರು ಚಾಕು ತೋರಿಸಿ ಬೆದರಿಸಿ ಹರಿಕೃಷ್ಣ ಎಂಬುವರ ಜೇಬಿನಲ್ಲಿದ್ದ 2000 ನಗದು ಕಸಿದು ಪರಾರಿಯಾಗಿದ್ದರು. ಈ ಬಗ್ಗೆ ಕ್ಯಾತಸಂದ್ರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೆÇಲೀಸರು ಈ ಇಬ್ಬರನ್ನು ಬಂಧಿಸಿ 1270 ನಗದು, ಕೃತ್ಯಕ್ಕೆ ಬಳಸಿದ್ದ ಡ್ರಾಗರ್ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.