ಸಾಲಮನ್ನಾ ವಿಚಾರ ಜಾಲತಾಣದಲ್ಲಿ ಪೆÇೀಸ್ಟ್ ಶೇರ್ ಮಾಡಿದ್ದ ಕಾನ್‍ಸ್ಟೆಬಲ್ ಅಮಾನತು

ಹುಬ್ಬಳ್ಳಿ, ಜೂ.19-ಗಡುವು ಮುಗಿದು ಹದಿನೆಂಟು ದಿನ ಕಳೆದರೂ ಸಾಲ ಮನ್ನಾ ಮಾಡಿಲ್ಲ ಕುಮಾರಸ್ವಾಮಿಯವರೇ ರಾಜೀನಾಮೆ ಯಾವಾಗ? ಎಂದು ಸಾಮಾಜಿಕ ಜಾಲತಾಣದಲ್ಲಿ ಪೆÇೀಸ್ಟ್ ಶೇರ್ ಮಾಡಿದ್ದ ಕಾನ್‍ಸ್ಟೆಬಲ್‍ನನ್ನು ಅಮಾನತು ಮಾಡಿ ಹುಬ್ಬಳ್ಳಿ-ಧಾರವಾಡ ಪೆÇಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ನಗರದ ಶಹರ ಪೆÇಲೀಸ್ ಠಾಣೆಯ ಕಾನ್‍ಸ್ಟೆಬಲ್ ಅರುಣ್ ಡೊಳ್ಳಿನ್ ಎಂಬುವರನ್ನು ಅಮಾನತುಪಡಿಸಲಾಗಿದೆ.
ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ ರಚನೆಯಾಗಿ 18 ದಿನಗಳಾದರೂ ರಾಜ್ಯದ ರೈತರ ಸಾಲ ಮನ್ನಾ ಆಗಲಿಲ್ಲ ! ಕುಮಾರಸ್ವಾಮಿಯವರೇ, ರಾಜೀನಾಮೆ ಯಾವಾಗ..? ಎಂದು ಅರುಣ್ ಡೊಳ್ಳಿನ್ ಫೇಸ್‍ಬುಕ್‍ನಲ್ಲಿ ಪೆÇೀಸ್ಟನ್ನು ಶೇರ್ ಮಾಡಿದ್ದರು. ಈ ವಿಷಯ ವ್ಯಾಪಕ ಚರ್ಚೆಗೆ ಒಳಗಾಗಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸುದ್ದಿ ಹರಡುತ್ತಿದ್ದಂತೆ ಹುಬ್ಬಳ್ಳಿ-ಧಾರವಾಡ ಪೆÇಲೀಸ್ ಆಯುಕ್ತರಾದ ಎಂ.ಎನ್.ನಾಗರಾಜ್ ಅವರು ಅರುಣ್ ಡೊಳ್ಳಿನ್‍ನನ್ನು ಅಮಾನತುಪಡಿಸಿದ್ದಾರೆ. ಆಯುಕ್ತ ಎಂ.ಎನ್.ನಾಗರಾಜ್ ಅವರಿಗೆ ಗೃಹ ಇಲಾಖೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಕಾಸ್ ನೋಟೀಸ್ ನೀಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ