ಶ್ರೀನಗರ, ಜೂ.18-ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕರ ನಿಗ್ರಹ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ನಿನ್ನೆ ಕೇಂದ್ರ ಸರ್ಕಾರ ಘೋಷಿಸಿದ ಬೆನ್ನಲ್ಲೇ, ಇಬ್ಬರು ಉಗ್ರರನ್ನು ಭದ್ರತಾ ಪಡೆ ಹೊಡೆದುರುಳಿಸಿದೆ. ಇದರೊಂದಿಗೆ ಉಗ್ರರ ದಮನ ಕಾರ್ಯ ಚುರುಕುಗೊಂಡಿದೆ. ಜಮ್ಮು ಮತ್ತು ಕಾಶ್ಮೀರದ ಬಂಡಿಪೆÇರಾ ಜಿಲ್ಲೆಯಲ್ಲಿ ಯೋಧರೊಂದಿಗೆ ಇಂದು ನಡೆದ ಗುಂಡಿನ ಕಾಳಗದಲ್ಲಿ ಇಬ್ಬರು ಉಗ್ರರು ಹತರಾದರು. ಉಗ್ರಗಾಮಿಗಳು ಅಡಗಿದ್ದಾರೆಂಬ ಖಚಿತ ಸುಳಿವಿನ ಮೇರೆಗೆ ಬಂಡಿಪೆÇರಾ ಪ್ರದೇಶದಲ್ಲಿ ಯೋಧರು ಮುಂಜಾನೆಯಿಂದಲೇ ತೀವ್ರ ಶೋಧ ನಡೆಸುತ್ತಿದ್ದಾಗ ಗುಂಡಿನ ಕಾಳಗ ನಡೆಯಿತು. ಎನ್ಕೌಂಟರ್ನಲ್ಲಿ ಹತರಾದ ಇಬ್ಬರು ಉಗ್ರರಿಂದ ಶಸ್ತ್ರಾಸ್ತಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಗ್ರರ ನಿಗ್ರಹ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.