ವಾತರಕ್ತ (ಗೌಟಿ ಆರ್ತರೈಟಿಸ್); ನಿಮಗಿದೆಯೇ? ಲಕ್ಷಣಗಳು ಮತ್ತು ಪರಿಹಾರಗಳು

ವಾತರಕ್ತವು ಬಹಳಷ್ಟು ಜನರನ್ನು ಪೀಡಿಸುವ ರೋಗ. ವಾತರಕ್ತವು ಕಾಣಿಸಿಕೂಳ್ಳಲು ಕಾರಣ, ಯಾವಾಗ ವೃಧ್ದಿಯಾಗಿರುವ ವಾತದ ಮಾರ್ಗವನ್ನು ಇಗಾಗಲೇ ವಧ್ದಿಸಲ್ಪಟ್ಟಿರುವ ರಕ್ತದಿಂದ ತಡೆಯಲ್ ಪಡುತ್ತದೂ ಆಗ ವಾತರಕ್ತ ಸಂಭವಿಸುತ್ತದೆ.

ವಾತರಕ್ತದಲ್ಲಿ 2 ವಿಧ
1. ಉತ್ತಾನ ವಾತರಕ್ತ- ಉತ್ತಾನ ವಾತರಕ್ತದಲ್ಲಿ ಕೇವಲ ತ್ವಕ್/ಚರ್ಮ ಮತ್ತು ಮಾಂಸದಲ್ಲಿ ಪಾಲ್ಗೂಂಡಿರುತ್ತದೆ.
2. ಗಂಭೀರ ವಾತರಕ್ತ- ಗಂಭೀರವಾತರಕ್ತದಲ್ಲಿ, ಸಪ್ತ ಧಾತುಗಳಲೂ ಸಹ ಪಾಲ್ಗೂಂಡಿರುತ್ತದೆ.

ವಾತರಕ್ತ ಪೀಡಿತರಲ್ಲಿ, ರಕ್ತದಲ್ಲಿ ಯೂರಿಕ್ ಆಸಿಡ್ನ ಪ್ರಮಾಣ ಹೆಚ್ಚಾಗಿರುತ್ತದೆ. ಸಾಮಾನ್ಯವಾಗಿ ರಕ್ತದಲ್ಲಿ ಯೂರಿಕ್ ಆಸಿಡ್ನ ಪ್ರಮಾಣ ಹೆಂಗಸರಲ್ಲಿ- 2.4-6 ಎಮ್ಜಿ/ಡಿಎಲ್ ವೆರೆಗೆ ಹಾಗು ಗಂಡಸರಲ್ಲಿ-3.4-7 ಎಮ್ಜಿ/ಡಿಎಲ್ ವರೆಗೆ ಇದ್ದರೆ, ಗೌಟಿ ಆರ್ತರೈಟಿಸನಿಂದ ಪೀಡಿತರಾದವರಲ್ಲಿ ಯೂರಿಕ್ ಆಸಿಡ್ ನ ಪ್ರಮಾಣ ಹೆಂಗಸರಲ್ಲಿ- 6 ಎಮ್ಜಿ/ಡಿಎಲ್ ಗಿಂತ ಜಾಸ್ತಿ ಇದ್ದು, ಗಂಡಸರಲ್ಲಿ-7 ಎಮ್ಜಿ/ಡಿಎಲ್ ಇರುತ್ತದೆ.

ವಾತರಕ್ತದ ನಿಧಾನ-
ಆಹಾರದಲ್ಲಿ ಹೆಚ್ಚಾಗಿ ಲವಣ, ಕಟ್ಟು, ಕ್ಷಾರ ರಸವುಳ್ಳ ಪದಾರ್ತದ ಸೇವನೆ, ಎಳ್ಳು, ಹೂರಳಿ ಕಾಳಿನ ಸೇವನೆ ಹೆಚ್ಚಾಗಿರುವುದರಿಂದ, ಕಬ್ಬು, ಮೂಸರಿನ ಸೇವನೆ ಹೆಚ್ಚಿದಾಗ, ವಿರುಧ್ದ ಆಹಾರ, ವಿಧಾಹಿ ಆಹಾರದ ಸೇವನೆ ಇಂದಾಗಿ ವಾತರಕ್ತ ಕಾಣಿಸಿಕೂಳ್ಳುತ್ತದೆ.

ಇನ್ನು ವಿಹಾರದಲ್ಲಿ ಹೆಚ್ಚು ಜಲಕ್ರೀಡೆಯಾಡಿದಲ್ಲಿ, ಹೆಚ್ಚಾಗಿ ವಾಹನವನ್ನು ಚಲಿಸುವುದರಿಂದ ಅಥವ ಇಗಾಗಲೆ ಏಟಾಗಿದ್ದಲ್ಲಿ ವಾತರಕ್ತ ಕಾಣಿಸಿಕೂಳ್ಳುತ್ತದೆ.

ವಾತರಕ್ತದ ಲಕ್ಷಣ-
ವಾತರಕ್ತವು ಕಾಲಿನ ಹೆಬ್ಬೆರಳು (ಮೆಟಾ ಟಾಸರ್ೋ ಫೆಲಂಜಿಯಲ್) ಮತ್ತು ಪಾದದ ಸಂಧಿಯಲ್ಲಿ ಕಾಣಿಸಿಕೂಳ್ಳುತ್ತದೆ. ಆ ಜಾಗವು ಕೆಂಪಾಗಿ, ಶೋತದಿಂದ ಕೂಡಿದ್ದು, ಚರ್ಮವು ಹೂಳೆಯುತ್ತಿರುತ್ತದೆ, ಆತಿಯಾದ ನೋವು ಹಾಗು ಕೆಲವೂಮ್ಮೆ ಜ್ವರ ಸಹ ಕಾಣಬಹುದಾಗಿರುತ್ತದೆ.

ಮೂಣಕಾಲು,ಮಂಡಿ, ಕಾಲಿನ ಬೆರಳು, ಕೈ ಬೆರಳು, ಮೂಣಕೈಯಲ್ಲಿ ಅವರೋಹಣ ಕ್ರಮದಲ್ಲಿ ಕಾಣಿಸಿಕೂಳ್ಳವ ಸಾಧ್ಯತೆ ಸಹ ಇರುತ್ತದೆ.

ಕೆಲವೂಮ್ಮೆ ಇದು ಕೇವಲ ಸ್ವಲ್ಪ ವಾರಗಳಲ್ಲಿ ಕಡಿಮೆಯಾಗಬಹುದು, ಆದರೆ ವಾತರಕ್ತ ಸಂಭವಿಸಿದಂತಹ ಸ್ಥಳವನ್ನು ವಕ್ರಗೊಳಿಸಿ ಬಿಡಿಸುತ್ತದೆ.

ವಾತರಕ್ಕತಕ್ಕೆ ಮದ್ದು-

  • 1/2 ಚಮಚ ಹರಿಶಿನ, 1 ಲೋಟ ಬೆಚ್ಚಗಿರುವ ಹಾಲಿನಲ್ಲಿ ಬೆರಸಿ ಬೇಳಗೆ ಸೇವಿಸುವುದರಿಂದ ಶೋತ ಹಾಗು ನೋವು ಕಡಿಮೆಯಾಗುತ್ತದೆ.
  • ಬೆಳಗೆ ಕಾಲಿಹೂಟ್ಟೆಯಲ್ಲಿ( ಆಹಾರದ ಸೇವನೆಯ ಮುಂಚೆ) 2-3 ಬೆಳುಳ್ಳಿ ಏಸಳು ಸೇವನೆಯಿಂದ ನೋವು ನಿವಾರಣೆಯಾಗುತ್ತದೆ.
  • ಅಮೃತ ಬಳ್ಳಿಯ ಕಷಾಯದ ಸೇವನೆ ಇಂದ ವಾತರಕ್ತ ನಿವಾರಣೆಯಾಗುತ್ತದೆ.
  • ರಕ್ತದ ಯೂರಿಕ್ ಆಸಿಡ್ಅನ್ನು ಕಡಿಮೆ ಮಾಡಲು, ಎಳನೀರಿನ ಸೇವನೆಯಿಂದ ಸುಲಭ ಸಾಧ್ಯ.
  • ಉಳಿಯಾಗಿರುವ ಹಣ್ಣಿನ ಸೇವನೆ – ಬೆಟ್ಟದ ನೆಲ್ಲಿಕಾಯಿ, ಚರೀಹಣ್ಣು, ಸ್ಟ್ರಾಬೆರಿ ಹಣ್ಣಿನಲ್ಲಿ ವಿಟಾಮಿನ- ಸಿ ಅತಿಹೆಚ್ಚು ಶೆಖರಿವಾಗಿರುವುದರಿಂದಾಗಿ, ರಕ್ತದ ಯೂರಿಕ್ ಆಸಿಡ್ನ ಪ್ರಮಾಣವು ಕಡಿಮೆಯಾಗಲು ಸಹಕಾರಿಯಾಗುತ್ತದೆ.
  • ಕಾಲಿ ಹೂಟ್ಟೆಯಲ್ಲಿ 2 ಚಮಚ ಬೆಟ್ಟದ ನೆಲ್ಲಿಕಾಯಿಯ ಜ್ಯೂಸ್ ಹಾಗು 2 ಚಮಚ ಆಲೋವೆರ/ಲೋಳೆ ರಸದ ಸೇವನೆಯಿಂದ ರಕ್ತದ ಯೂರಿಕ್ ಆಸಿಡ್ ಪ್ರಮಾಣ ಕಡಿಮೆ ಮಾಡುತ್ತದೆ.
  • ಶುಂಠಿಯನ್ನು ಜಜ್ಜಿ, ಪಚ್ಚ ಕಪರ್ೂರದೂಂದಿಗೆ ಬೆರಸಿ ವಾತರಕ್ತ ಸಂಭವಿಸಿರುವ ಸ್ಥಳದಲ್ಲಿ ಲೇಪನ ಮಾಡುವುದರಿಂದ, ನೋವು ಕಡಿಮೆಯಾಗುತ್ತದೆ.

ವಾತರಕ್ತದಲ್ಲಿ ಪಾಲಿಸಬೇಕಾದ ಪತ್ಯ- ಗೋದಿ, ಈರುಳ್ಳಿ, ಬೆಳುಳ್ಳಿ, ಹಾಗಲಕಾಯಿ, ಪಪಾಯ, ಏಲಕ್ಕಿ, ಬಾಳೆಹಣ್ಣಿನ ಸೇವಿಸ ಬೇಕು.

ವಾತರಕ್ತದಲ್ಲಿ ಪಾಲಿಸಬೇಕಾದ ಅಪತ್ಯ- ಎಣ್ಣೆಯಲ್ಲಿ ಕರೆದಂತಹ ಆಹಾರದ ಸೇವನೆ, ವಿಧಾಹಿ(ತಂಗಳು) ಆಹಾರದ ಸೇವನೆ, ಹೂಸ ಅಕ್ಕಿಯನ್ನು ಸೇವಿಸಬಾರದು.

– ಡಾ.ಸಿಂಧು ಪ್ರಶಾಂತ್
ದೂರವಾಣಿ-9743857575

ಲೇಖಕರ ಬಗ್ಗೆ

ಡಾ. ಸಿಂಧು ಪ್ರಶಾಂತ್ ರವರು ತಮ್ಮ ಆಯುರ್ವೇದ ಪದವಿಯನ್ನು ಹೊಂದಿದ್ದು ಜೊತೆಗೆ ಎಮ್.ಡಿ (ಆಲ್ಟರ್ನೇಟಿವ್ ಮೆಡಿಸನ್) ಮತ್ತು ಎಮ್.ಎಸ್ಸಿ(ಯೋಗ) ಪದವಿಯನ್ನು ಪಡೆದಿದ್ದಾರೆ.

ಅವರು ಗರ್ಭಿಣಿಯರೆಗೆ ಯೋಗದ ಮಹತ್ವ ಹಾಗು ಹೇಗೆ ಯೋಗವನ್ನು ಮಾಡಬೇಕೆಂದು ತರಬೇತಿಯನ್ನು ಸ್ಕೈಪ್ ಮುಕಾ0ತರ ಹಲವಾರು ಸ್ತ್ರೀಯರಿಗೆ ಹೇಳಿಕೂಡುತ್ತಿದ್ದಾರೆ. ಅತಿ ಶೀಘ್ರದಲ್ಲಿ ಗರ್ಭಿಣಿಯರಿಗಾಗಿ ಯೋಗ ಹಾಗು ಪ್ರಾಣಾಯಾಮವನ್ನು ಕುರಿತು ಪುಸ್ತಕವನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಡಾ.ಸಿಂಧು ಪ್ರಶಾಂತ್ ರವರು ಬಹುಮುಖ ಪ್ರತಿಭಾವಂತರು.”ನೃತ್ಯ ಪ್ರಾರ್ಥನ ” ಎಂಬ ಸಂಸ್ಥೆಯ ಸ್ಥಾಪಕಿ ಹಾಗು ಶಕ್ಷಕಿಯಾಗಿ ಹಲವಾರು ಶಿಶ್ಯವೃಂದವನ್ನು ತಯಾರಿಸುತಿರುವ ಹೇಗಳಿಕೇ ಇವರದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ