ಇಂದೋರ್: ಮಧ್ಯಪ್ರದೇಶದ ಪ್ರಸಿದ್ಧ ಧಾರ್ಮಿಕ ಗುರು ಭಯ್ಯೂಜಿ ಮಹಾಜನ್ ಆತ್ಮಹತ್ಯೆ ಬಗೆಗಿನ ರಹಸ್ಯ ಬಹಿರಂಗಗೊಂಡಿದೆ.
ಕೌಟುಂಬಿಕ ಒತ್ತಡದಿಂದ ಭಯ್ಯೂಜಿ ಮಹಾಜನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಡೆತ್‌ನೋಟ್‌ನಲ್ಲಿ ಗೊತ್ತಾಗಿದೆ. ಅಲ್ಲದೇ, ತಮ್ಮೆಲ್ಲ ಆಸ್ತಿ-ಪಾಸ್ತಿಯನ್ನು ತಮ್ಮ ಆಪ್ತರೊಬ್ಬರ ಹೆಸರಿಗೆ ಭಯ್ಯೂಜಿ ಡೆತ್‌ನೋಟ್‌ನಲ್ಲಿ ಬರೆದಿಟ್ಟಿದ್ದಾರೆ.
ಇಂದೋರ್‌ನಲ್ಲಿ ಮಂಗಳವಾರ ಭಯ್ಯೂಜಿ ಮಹಾಜನ್ ತಾವೇ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದರು. ಆತ್ಮಹತ್ಯೆ ಬಳಿಕ ಮನೆಯಲ್ಲಿ ಪರಿಶೀಲನೆ ನಡೆಸಿದ ಪೊಲೀಸರಿಗೆ ಪಾಕೇಟ್ ಡೈರಿಯೊಂದು ಪತ್ತೆಯಾಗಿತ್ತು. ಹೀಗೆ ಸಿಕ್ಕ ಡೈರಿಯ ಒಂದು ಪುಟದಲ್ಲಿ ತಾವು ಕೌಟುಂಬಿಕ ಒತ್ತಡದಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಉಲ್ಲೇಖಿಸಲಾಗಿದೆ ಎಂದು ಗೊತ್ತಾಗಿದೆ.
ಈ ಡೈರಿಯ ಮತ್ತೊಂದು ಪುಟದಲ್ಲಿ ತಮ್ಮ ಆಶ್ರಮದ ವಾರಸುದಾರರ ಬಗ್ಗೆಯೂ ಭಯ್ಯೂಜಿ ಉಲ್ಲೇಖಿಸಿದ್ದಾರೆ. ವಿನಾಯಕ್ ಎಂಬುವವರು ಆಶ್ರಮದ ಎಲ್ಲಾ ಹಣಕಾಸಿನ ಹಕ್ಕುಗಳನ್ನು ಹೊಂದಿರುತ್ತಾರೆ ಎಂದು ಸ್ಪಷ್ಟವಾಗಿ ಗುರು ಭಯ್ಯೂಜಿ ಬರೆದಿಟ್ಟಿದ್ದಾರೆ. ವಿನಾಯಕ್ ಹಲವು ವರ್ಷಗಳಿಂದ ಭಯ್ಯೂಜಿ ಅವರಿಗೆ ಆಪ್ತರಾಗಿದ್ದರು ಎಂದು ತಿಳಿದುಬಂದಿದೆ.