ದೊಡ್ಡಬಳ್ಳಾಪುರ: ಡಬ್ಲೂ ಡಬ್ಲೂ F ಇಂಡಿಯಾ ಸಂಸ್ಥೆ ಮತ್ತು ನವೋದಯ ಚಾರಿಟೇಬಲ್ ಟ್ರಸ್ಟ್ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಹಯೋಗದಲ್ಲಿ ಡಾ.ಅನಿಬೆಸೆಂಟ್ ಆವರಣದಲ್ಲಿ ವಿವಿಧ ಬಗೆಯ ಸಸಿಗಳನ್ನು ನೆಡಲಾಯಿತು
ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ನ ನೋಡಲ್ ಅಧಿಕಾರಿ ಚಲಯ್ಯ ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಜಶೇಖರ್ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಜಶೇಖರ್ ಮಾತನಾಡಿ ಮರ ಗಿಡಗಳನ್ನು ಬೆಳೆಸುವುದರಿಂದ ವಾತವರಣದಲ್ಲಿ ಆಮ್ಲಜನಕ ಪ್ರಮಾಣ ಹೆಚ್ಚುತ್ತದೆ ಎಂದರು, ಡಬ್ಲೂ ಡಬ್ಲೂ F ಇಂಡಿಯಾ ಸಂಸ್ಥೆಯ ಲೋಹಿತ್ ಮಾತನಾಡಿ ಕೆರೆಗಳು ಉಳಿವಿಗೆ ಅದರ ಜಲಾನಯನ ಪ್ರದೇಶಗಳಲ್ಲಿ ಅತಿ ಹೆಚ್ಚು ಗಿಡ ಮರಗಳನ್ನು ಬೆಳೆಸಬೇಕು ಈಗಾಗಲೇ ಈ ಭಾಗದಲ್ಲಿ ಹಲವಾರು ಪ್ರಭೇಧದ ಪಕ್ಷಿಗಳನ್ನು ಗುರುತಿಸಿದ್ದು ಮುಂದಿನ ದಿನಗಳಲ್ಲಿ ಜೀವ ವೈವಿಧ್ಯತೆ ಇಂತಹ ಕಾರ್ಯಗಳಿಂದ ಹೆಚ್ಚುತ್ತದೆ ವಿವಿಧ ವಲಯಗಳ ಸ್ವಯಂಸೇವಕರು ಭಾಗವಹಿಸಿರುವುದು ಆಶಾದಾಯಕ ಬೆಳವಣಿಗೆ ಎಂದರು,
ನವೋದಯ ಚಾರಿಟೇಬಲ್‍ನ ಚೇತನ್ ಮಾತನಾಡಿ ಬರಿ ಕೈಗಾರಿಕೆಗಳೆ ಹೆಚ್ಚಿರುವ ಈ ಭಾಗದಲ್ಲಿ ಹೆಚ್ಚು ಸಸಿ ಬೆಳೆಸುವುದರಿಂದ ಶ್ವಾಸಕೋಶದಂತೆ ಕೆಲಸ ಮಾಡುತ್ತವೆ ಎಂದರು
ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ನ ಸಂಚಾಲಕ ಪೆÇ್ರೀ.ಎಂ.ಜಿ.ಚಂದ್ರಶೇಖರಯ್ಯ, ಜವಾಹರ್ ನವೋದಯ ಶಾಲೆಯ ಉಪ ಪ್ರಾಂಶುಪಾಲ ಗಿರಿ, ನವೋದಯ ಟ್ರಸ್ಟ್ ನ ಜನಾರ್ಧನ್ ಚನ್ನೇಗೌಡ,ಸುನಿಲ್,ಬಿ.ಆರ್.ಎ¥sóï.ಎಲ್. ನ ದಾಮೋಧರ್, ರಾಜೇಂದ್ರ ,ಕೊಂಗಾಡಿಯಪ್ಪ ಕಾಲೇಜಿನ ಪ್ರಾಂಶು ಪಾಲ ಬಾಬು,ಎವರ್ ಬ್ಲೂ ನ ಸಂತೋಷ್ ನಾಗದಳದ ಬದ್ರಿನಾಥ್,ಸಿ,ನಟರಾಜು ಡಿ. ಎ.ಎಸ್‍ನ ವೆಂಕಟರಾಜು ಎನ್ ,ಸಿ,ಲಕ್ಷ್ಮೀ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೇ ಪ್ರಮೀಳಾ ಮಹದೇವ್, ಯುವಸಂಚಲನದ ಚಿದಾನಂದ್, ಅರ್ಕಾವತಿ ಮಂಜು ಭಾಗವಹಿಸಿದ್ದರು.